HomePage_Banner
HomePage_Banner
HomePage_Banner
HomePage_Banner

ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ | ಸರಕಾರದ ಯೋಜನೆ ತಳಮಟ್ಟಕ್ಕೆ ತಲುಪಿಸುವಲ್ಲಿ ಬಿಜೆಪಿ ಯಶಸ್ವಿ – ರಾಧಾಕೃಷ್ಣ ಆಳ್ವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಮತ್ತು ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಮತ್ತು ವಿಚಾರಗಳನ್ನು ಅಂಬೇಡ್ಕರ್ ಹೆಸರಿನಲ್ಲಿ ತರುತ್ತಿದೆ. ಇದರ ಜೊತೆಗೆ ಸರಕಾರದ ಯೋಜನೆಯನ್ನು ತಳಮಟ್ಟಕ್ಕೆ ತಲುಪಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ ಹೇಳಿದರು.

ಪುತ್ತೂರು ಬಿಜೆಪಿ‌ ಕಚೇರಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂವೇಡ್ಕರ್ ಅವರ ತತ್ವ, ಸಂವಿಧಾನದಿಂದ ತಳಮಟ್ಟದ ಜನರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಇದೆ. ಈ ನಿಟ್ಟಿನಲ್ಲಿ ಜಿ.ಪಂ, ತಾ.ಪಂ, ಶಾಸಕ, ಸಂಸದರ ಅನುದಾನಗಳು ಬಂದಾಗ ಅದರಲ್ಲಿ ಒಂದಷ್ಟು ಅನುದಾನ ಪರಿಶಿಷ್ಟ ಜಾತಿ ಜನಾಂಗಕ್ಕೂ ಮೀಸಲಿಡುವ ಮೂಲಕ‌ ಒಂದಷ್ಟು ಹಿಂದುಳಿದ ವರ್ಗ, ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ವಿಶೇಷವಾಗಿ ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ಇವತ್ತು ಬಿಜೆಪಿಯಲ್ಲೂ ಎಸ್ಸಿ ಮೋರ್ಚ ಇದೆ. ಪ್ರತಿ ಬೂತ್ ಎಸ್ಸಿ ಮೋರ್ಚ ತಮ್ಮ ತಮ್ಮ ಬೂತ್ ಗಳಲ್ಲಿ ಸಂಘಟಿತರಾಗಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಪಕ್ಷದ ವತಿಯಿಂದ ಆಚರಿಸಬೇಕು. ಈ ಹಿಂದೆ ೬೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಸರಕಾರ ಓಟಿಗಾಗಿ ಮಾತ್ರ ಪರಿಶಿಷ್ಟ ಜನಾಂಗವನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಬಿಜೆಪಿ ಸರಕಾರ ಬಂದ ಬಳಿಕ ಸರಕಾರದ ಯೋಜನೆ ತಳಮಟ್ಟದವರಿಗೂ ತಲುಪಿಸುವ ಮೂಲಕ ಉತ್ತಮ ಆಡಳಿತ ಮಾಡುತ್ತಿದ್ದೆ ಎಂದರು.

ಸಮಾಜ ಘಾತುಕ ಶಕ್ತಿಗಳಿಂದ ಅಂಬೇಡ್ಕರ್ ಹೆಸರು ದರುಪಯೋಗ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದ ಬಳಿಕ ದಾಖಲೆ ಮಟ್ಟದ ಅನುದಾನ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಬಂದಿದೆ. ಅಂಬೇಡ್ಕರ್ ನಿಗಮದ ಮೂಲಕ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಯೋಜನೆ ಲಭ್ಯವಾಗುತ್ತದೆ. ಪುತ್ತೂರಿನ ಶಾಸಕರು ದಾಖಲೆ ಮಟ್ಟದ ಅನುದಾನ ತಂದಿದ್ದಾರೆ. ಈ ನಡುವೆ ಅಂಬೇಡ್ಕರ್ ಅವರ ಹೆಸರನ್ನು ಸಮಾಜಘಾತುಕ ಶಕ್ತಿಗಳು ದುರುಪಯೋಗ ಮಾಡುತ್ತಿದ್ದಾರೆ ಎಂದರು.

ಗ್ರಾ.ಪಂ ಸದಸ್ಯರಿಗೆ ಅಭಿನಂದನೆ:
ಎಸ್ಸಿ ಸಮಾಜದ ಗ್ರಾ.ಪಂ ಸದಸ್ಯರಾದವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಎಸ್ಸಿ ಮೋರ್ಚದ ಅಧ್ಯಕ್ಷ ಬಾಬು ಬೊಮ್ಮಣ್ಣಗುಂಡಿ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.