HomePage_Banner
HomePage_Banner
HomePage_Banner
HomePage_Banner

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಣಪತಿಹೋಮ | ನೂತನ ಬ್ಲಾಕ್ ಅಧ್ಯಕ್ಷರಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಶ್ರೇಷ್ಟ ದ್ಯೇಯ ಉದ್ದೇಶ ಹೊಂದಿರುವ ರಾಷ್ಟ್ರೀಯ ಪಕ್ಷ  ನಮ್ಮ ಕಾಂಗ್ರೆಸ್ ಪಕ್ಷ.  ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರುಕಳಿಸುವ ಯೋಜನೆ, ಯೋಚನೆ ಇದೆ. ಆ ಮುಖಾಂತರ ಕಾಂಗ್ರೆಸ್ ಪಕ್ಷದ  ತತ್ವದಲ್ಲಿ ನಮ್ಮೆಲ್ಲರ ಬದುಕು ಬಂಗಾರವಾಗಿ ಬೆಳಗಬೇಕೆನ್ನುವ ಉದ್ದೇಶದಿಂದ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು. ಪ್ರತಿಯೋರ್ವರನ್ನು ವಿಶ್ವಾಶಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ಮಡೆಸಬೇಕೆಂದಿದ್ದೇನೆ ಎಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ.ರವರು ಹೇಳಿದರು.

ಅವರು ಎ.೧೩ರಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಣಹೋಮದ  ಬಳಿಕ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ನಡೆಸಿದ ಬಳಿಕ ವಿಟ್ಲ ಬ್ಲಾಕ್ ಕಾಂಗ್ರೆಸ್  ಕಚೇರಿಯಲ್ಲಿ  ಪತ್ರಕರ್ತರೊಂದಿಗೆ ಮಾತನಾಡಿದರು.

ಇಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಚೇರಿಯಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಗಣಹೋಮ ನಡೆಯಿತು. ಸರ್ವ ವಿಘ್ನ ನಿವಾರಣೆಯಾಗಿ ನಮಗೆ ಜಯಪ್ರಾಪ್ತಿಯಾಗಲಿ ಎನ್ನುವ ನಂಬಿಕೆ ಯೊಂದಿಗೆ ಪ್ರಾರ್ಥಿಸಿದ್ದೇವೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಎ.೨೦ರಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ನೂತನ ಅಧ್ಯಕ್ಷರ ಹಾಗೂ ಬ್ಲಾಕ್ ಯುವಕ ಕಾಂಗ್ರೆಸ್ ನ ಅಧ್ಯಕ್ಷರ ಪದಗ್ರಹಣ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ನಾಯಕರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಇಫ್ತಾರ್ ಕೂಟ ನಡೆಯಲಿದೆ. ಕಾರ್ಯಕ್ರಮವು ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿಯವರ ಮಾರ್ಗದರ್ಶಣದಲ್ಲಿ ನಡೆಯಲಿದೆ ಎಂದರು.


ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ ಯುಗಾದಿ ಎಂದರೆ ಬೇವು ಬೆಲ್ಲ ತಿನ್ನುವ ದಿನ, ಬೇವು ಎಂದರೆ ಕಹಿ, ಬೆಲ್ಲ ಎಂದರೆ ಸಿಹಿ. ಕಹಿಯನ್ನು ಮರೆತು ಸಿಹಿಯಾಗಿ ಬದುಕಲು ದಾರಿ ತೋರಿಸುವ ದಿನ ಯುಗಾದಿ.  ಈ ಕಚೇರಿಯಲ್ಲಿ ಇರುವ ಕಹಿ ಶಾಶ್ವತವಾಗಿ ಮರೆಯಾಗಿ ಸಿಹಿಯಿಂದ ಕೂಡಿರಲಿ. ಹೊಸ ಅಧ್ಯಕ್ಷರು ಎಲ್ಲರ ಮಿತ್ರರಾಗಿ ಪಕ್ಷವನ್ನು ಸುದೃಡವಾಗಿ ಕಟ್ಟುವಂತಾಗಲಿ.  ಈ ಭಾರಿಯ ಪದಗ್ರಹಣವನ್ನು ವಿಶೇಷ ರೀತಿಯಲ್ಲಿ ಮಾಡಬೇಕೆನ್ನುವ ಅಪೇಕ್ಷೆ ನೂತನ‌ ಅಧ್ಯಕ್ಷರದ್ದಾಗಿದೆ. ಸೌಹಾರ್ದತೆ, ಜಾತ್ಯಾತೀತಕ್ಕೆ ಹೆಸರುವಾಸಿಯಾಗಿರುವ ಪಕ್ಷ ಕಾಂಗ್ರೆಸ್ ಎನ್ನುವ ಉದ್ದೇಶದಿಂದ ಇಂದಿಲ್ಲಿ ಗಣಹೋಮವನ್ನು ಮಾಡಲಾಗಿದೆ‌. ನಾಳಿದ್ದು ಪದಗ್ರಹಣದಂದು ಇಫ್ತಾರ್ ಕೂಟವನ್ನು ಆಯೋಜನೆ ಮಾಡಿದ್ದೇವೆ. ನೂತನ‌ ಅಧ್ಯಕ್ಷರು ಸಮಾಜಕ್ಕೆ ಒಂದು ಒಳ್ಳೆಯ ವೈದ್ಯರಾಗಿದ್ದಾರೆ. ಸಾಮಾಜಿಕ ಕಳಕಳಿ ಉಳ್ಳವರಾಗಿದ್ದು,  ಉತ್ತಮ ರೀತಿಯಲ್ಲಿ ಪಕ್ಷವನ್ನು ಕಟ್ಟುವ ತಾಕತ್ತು ಅವರಿಗಿದೆ ಎನ್ನುವ ವಿಶ್ವಾಸ‌ ನನಗಿದೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು,   ಡಾ. ರಮ್ಯ ರಾಜರಾಂ, ಎಂ.ಬಿ ವಿಶ್ವನಾಥ ರೈ, ಬ್ಲಾಕ್ ಕಾರ್ಯದರ್ಶಿ ಅಶೋಕ್ ಡಿ ಸೋಜ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ಮಾಜಿ ಅಧ್ಯಕ್ಷ ಭವಾನಿ ರೈ, ನಗರ ಅಧ್ಯಕ್ಷ ವಿಕೆಎಂ ಅಶ್ರಪ್, ಪ.ಪಂ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಅಬ್ದುಲ್ ರಹಿಮಾನ್ ಕುರುಂಬಳ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಮೋಹನ್ ಗುರ್ಜಿನಡ್ಕ, ಎಲ್ಯಣ್ಣ ಪೂಜಾರಿ, ಶ್ರೀಧರ್ ಬಾಳೆಕಲ್ಲು, ಅಶ್ರಪ್ ಬಸ್ತಿಕಾರ್, ಅಬ್ದುಲ್ ಖಾದ್ರಿ ಬೊಬ್ಬೆಕೇರಿ, ಕೃಷ್ಣರಾವ್ ಅರ್ತಿಲ, ರವೀಂದ್ರ ಗೌಡ, ವೆಂಕಪ್ಪ ಪೂಜಾರಿ ಮರುವೇಲು, ರಿತೇಶ್, ರೀತಿಶಾ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.