HomePage_Banner
HomePage_Banner
HomePage_Banner
HomePage_Banner

ಉದ್ಯಮಿ ಯೂಸುಫ್ ಗೌಸಿಯಾ ಸಾಜ ಮಾಲಕತ್ವದ ಜಿ.ಟಿ.ಎಂ ವುಡ್ ಫರ್ನಿಚರ್‍ಸ್ ಬೆಟ್ಟಂಪಾಡಿಯಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಯೂಸುಫ್ ರೆಂಜಲಾಡಿ


ಪುತ್ತೂರು: ಉದ್ಯಮಿ ಯೂಸುಫ್ ಗೌಸಿಯಾ ಮಾಲಕತ್ವದ ಜಿ.ಟಿ.ಎಂ ವುಡ್, ಫರ್ನಿಚರ್‍ಸ್ ಮಳಿಗೆ ಬೆಟ್ಟಂಪಾಡಿ ಸಮೀಪದ ತಲಪ್ಪಾಡಿ ಸಿರಾಜ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಧಾರ್ಮಿಕ ವಿಧ್ವಾಂಸ ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ದುವಾ ನೆರವೇರಿಸಿದರು.ಫರ್ನಿಚರ್‍ಸ್‌ನ ವಿವಿಧ ವಿಭಾಗಗಳನ್ನು ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಮಾಜಿ ಅಧ್ಯಕ್ಷ ರಂಗನಾಥ ರೈ ಗುತ್ತು ಹಾಗೂ ಸಹಕಾರಿ ಧುರೀಣ ಈಶ್ವರಭಟ್ ಕಡಂದೇಲು ಮೊದಲಾದವರು ಉದ್ಘಾಟಿಸಿ ಶುಭ ಹಾರೈಸಿದರು.

ಬಳಿಕ ನಡೆದ ಸಭೆಯಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ನಗುಮೊಗದ ಪ್ರಾಮಾಣಿಕ ಸೇವೆಯಿಂದ ಉದ್ಯಮದಲ್ಲಿ ಯಶಸ್ಸು ಸಂಪಾದಿಸಲು ಸಾಧ್ಯ, ನಾವು ಮಾಡುವ ಯಾವುದೇ ವ್ಯವಹಾರಗಳಲ್ಲಿ ಪ್ರಾಮಾಣಿಕತೆ, ಬದ್ಧತೆ ಮತ್ತು ಉತ್ತಮ ಗುಣಮಟ್ಟದಿಂದ ಕೂಡಿದ್ದರೆ ಅಂತಹ ಉದ್ಯಮಗಳು ತಾನಾಗಿಯೇ ಯಶಸ್ಸಿನ ಪಥದಲ್ಲಿ ಸಾಗುತ್ತದೆ ಎಂದು ಹೇಳಿದರು. ಯೂಸುಫ್ ಗೌಸಿಯಾ ಮಾಲಕತ್ವದ ಜಿ.ಟಿ.ಎಂ ಫರ್ನಿಚರ್‍ಸ್ ಮುಂದಿನ ದಿನಗಳಲ್ಲಿ ಪುತ್ತೂರು ತಾಲೂಕಿನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು ಹೆಸರು ಪಡೆಯಲಿ ಎಂದು ಹೇಳಿದ ಅವರು ಲಾಭದ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಬಡವರ ಆಶೀರ್ವಾದವೂ ನಮ್ಮ ಜೊತೆಗಿರುತ್ತದೆ ಎಂದು ಹೇಳಿದರು.

ಅಸ್ಗರ್ ತಂಙಳ್ ಬನ್ಪುತ್ತಡ್ಕ, ತಾ.ಪಂ ಮಾಜಿ ಸದಸ್ಯ ಹರಿಪ್ರಸಾದ್ ಬೈಲಾಡಿ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ ಹಾಗೂ ಮಹಾಲಿಂಗ, ಸಿ.ಎ ಬ್ಯಾಂಕ್ ಮಾಜಿ ನಿರ್ದೇಶಕ ಅಬೂಬಕ್ಕರ್ ಕೊರಿಂಗಿಲ, ಮೈದಾನಿಮೂಲೆ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಹಿರಿಯರಾದ ಅಹ್ಮದ್ ಕುಂಞಿ, ಪಾಣಾಜೆ ಉಪವಲಯಾರಣ್ಯಾಧಿಕಾರಿ ಲೋಕೇಶ್ ಎಸ್.ಎನ್, ಫಾರೆಸ್ಟ್ ಗಾರ್ಡ್ ನಿಂಗರಾಜ್, ಕೊರಿಂಗಿಲ ಖತೀಬ್ ಅಯ್ಯೂಬ್ ವಹಬಿ, ಮಂಜ ಹಿಫ್ಲುಲ್ ಖುರ್‌ಆನ್ ಕಾಲೇಜು ಪ್ರಿನ್ಸಿಪಾಲ್ ಅಶ್ರಫ್ ಸಖಾಫಿ, ಮಂಜ ಮುದರ್ರಿಸ್ ಇಬ್ರಾಹಿಂ ಅಹ್ಸನಿ, ಪೇರಲ್ತಡ್ಕ ಖತೀಬ್ ಅಬ್ಬಾಸ್ ಮದನಿ, ಗಣೇಶ್ ಭಟ್ ಸುದನಡ್ಕ, ಶಾಫಿ ಕೇಕನಾಜೆ, ಮಹಮ್ಮದ್ ಕುಂಞಿ ಅಂಕತ್ತಳ ಮತ್ತಿತರರು ಉಪಸ್ಥಿತರಿದ್ದರು.

ಅತಿಥಿಗಳನ್ನು ಸ್ವಾಗತಿಸಿದ ಜಿ.ಟಿ.ಎಂ ವುಡ್ ಫರ್ನಿಚರ್‍ಸ್‌ನ ಮಾಲಕ ಯೂಸುಫ್ ಗೌಸಿಯಾ ಮಾತನಾಡಿ ನಮ್ಮಲ್ಲಿ ವುಡನ್ ಕೋಟ್, ಸೋಫಾ ಸೆಟ್, ಡೈನಿಂಗ್ ಟೇಬಲ್, ವುಡನ್ ವಾರ್ಡ್‌ರೋಬ್, ಡೋರ್ & ವಿಂಡೋ, ವುಡನ್ ಡೋರ್ ಫ್ರೇಮ್ಸ್&ವಿಂಡೋ ಫ್ರೇಮ್ಸ್ ಹಾಗೂ ಇನ್ನಿತರ ವುಡ್ ಫರ್ನಿಚರ್‍ಸ್ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ ಎಂದು ಹೇಳಿದ ಗ್ರಾಹಕರ ಸಹಕಾರ ಕೋರಿದರು. ಆರ್ಲಪದವು ಕಮ್ಯುನಿಕೇಶನ್ ಸಂಸ್ಥೆಯ ಮುಖ್ಯಸ್ಥ ಡಾ.ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು ಸ್ವಾಗತಿಸಿದರು. ಆಸಿಫ್ ಹಾಜಿ ತಂಬುತ್ತಡ್ಕ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.