HomePage_Banner
HomePage_Banner
HomePage_Banner
HomePage_Banner

ಕೊಡಿಮಾರು ಅಬೀರ ಉಳ್ಳಾಕುಲು, ವ್ಯಾಘ್ರಚಾಮುಂಡಿ ದೈವಗಳ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಬೆಳಂದೂರು ಗ್ರಾಮದ ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು,ವ್ಯಾಘ್ರಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವವು ಎ ೧೯, ೨೦ರಂದು ನಡೆಯಲಿದ್ದು, ನೇಮೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮವು ಎ ೧೪ರಂದು ನಡೆಯಿತು.

ಅರ್ಚಕ ಶಿವರಾಮ ಉಪಾಧ್ಯಾಯ ಕಲ್ಪಡ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಉಪಾಧ್ಯಕ್ಷ ತಿಮ್ಮಪ್ಪ ಗೌಡ ಕಾರ್ಯತ್ತಡಿ, ನಾರಾಯಣ ಗೌಡ ಕಂಡೂರು, ಚಂದಪ್ಪ ಗೌಡ ಹೊಸೊಕ್ಲು, ಕಾರ್ಯದರ್ಶಿ ಜಯಂತ ಅಬೀರ, ಜತೆ ಕಾರ್ಯದರ್ಶಿ ಶೇಖರ ಮೇಗಿನಮನೆ, ಕೋಶಾಧಿಕಾರಿ ಪದ್ಮಯ್ಯ ಗೌಡ ಹೊಸೊಕ್ಲು, ವಸಂತ ರೈ ಕಾರ್ಕಳ, ಬಾಲಚಂದ್ರ ಅಬೀರ, ದೈವಗಳ ಸೇವಾಕರ್ತರಾದ ಚಂದ್ರಶೇಖರ ಅಬೀರ ಬಂಡಾಜೆ, ವಿಷ್ಣು ಗೌಡ ಅಬೀರ ಉಪಸ್ಥಿತರಿದ್ದರು. ಎ ೧೯ರಂದು ಬೆಳಿಗ್ಗೆ ಗಂಟೆ ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಮತ್ತು ರಾತ್ರಿ ದೈವಗಳ ಭಂಡಾರ ಹಿಡಿಯುವುದು. ಎ ೨೦ರಂದು ಬೆಳಿಗ್ಗೆ ಉಳ್ಳಾಕುಲು ದೈವಗಳ ನೇಮೋತ್ಸವ, ಬೈಸುನಾಯಕ, ಬೇಡ ದೈವಗಳ ನೇಮೋತ್ಸವ, ವ್ಯಾಘ್ರಚಾಮುಂಡಿ, ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.