ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಡಾ.ಬಿ.ಆರ್ ಅಂಬೇಡ್ಕರ್ ಸಮಾಜ ಸುಧಾರಕರೂ ಆಗಿದ್ದರು – ಸಂಜೀವ ಮಠಂದೂರು

ಪುತ್ತೂರು: ಹಿಂದೂ ಧರ್ಮದ ಜಾತಿ ಪದ್ಧತಿ, ತಾರತಮ್ಯವನ್ನು ಸುಧಾರಣೆ ಮಾಡುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಮಾಜ ಸುಧಾರಕರೂ ಆಗಿದ್ದರು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಅವರ ೧೩೦ನೇ ಜನ್ಮದಿನಾಚರಣೆಯಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೂ ಧರ್ಮದ ಜಾತಿ ಪದ್ಧತಿ, ತಾರತಮ್ಯವನ್ನು ಸುಧಾರಣೆ ಮಾಡಲು ಯಾವುದೇ ಸರಕಾರ ಮತ್ತು ಕಾನೂನಿನ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ತನ್ನ ಸ್ವಂತ ಕಾಲಮೇಲೆ ಪ್ರತಿಭೆಯ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ಸಮಾಜ ಸುಧಾರಣೆಯನ್ನು ಕೈಗೆತ್ತಿಕೊಂಡರು. ಅದಕ್ಕಾಗಿ ಅವರು ಬೌಧ ಧರ್ಮಕ್ಕೆ ಸೇರಿ ಆ ಮೂಲಕ ಹಿಂದೂ ಸಮಾಜದ ತಾರತಮ್ಯ ಕೊನೆಗೊಳಿಸುವ ಕೆಲಸ ಕಾರ್ಯ ಮಾಡಿದರು. ಅಂಬೇಡ್ಕರ್ ಅನ್ನುವ ವ್ಯಕ್ತಿ ಈ ದೇಶದಲ್ಲಿ ಸಂವಿಧಾನ ಬರೆಯದೇ ಇರುತ್ತಿದ್ದರೆ ಈ ಸಂವಿಧಾನದಲ್ಲಿ ಒಂದಷ್ಟು ಉಪೇಕ್ಷಿತ ವರ್ಗಕ್ಕೆ ಸ್ಥಾನಮಾನ ಕೊಡದೇ ಇದ್ದರೆ ನಾವೆಲ್ಲ ಸ್ಥಾನ ಮಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇವತ್ತು ಅವರು ನೀಡಿದ ಸಂವಿದಾನ ಸಂಭ್ರಮದ ಆಚರಣೆಯಾಗಬೇಕು. ಅವರು ಸಂವಿಧಾನದಲ್ಲಿ ಕೊಟ್ಟ ಅವಕಾಶವನ್ನು ೧೩೦ ಕೋಟಿ ಜನರು ಸ್ಮರಣೆ ಮಾಡಬೇಕು. ಇವತ್ತಿನ ಯುವ ಜನತೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೆಂದರು.

ಆಧುನಿಕ ಸಮಸ್ಯೆಗಳಿಗೂ ಸಂವಿಧಾನದಲ್ಲಿ ಪರಿಹಾರವಿದೆ:
ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರು ನಡೆದು ಬಂದ ದಾರಿ ಎಲ್ಲರಿಗೂ ಪ್ರೇರಣದಾಯಕ. ಅವರು ಕೆಳಮಟ್ಟದಿಂದ ಬಂದು ಶಿಕ್ಷಣದ ಮತ್ತು ಜ್ಞಾನದ ಮೂಲಕ ಅತ್ಯಂತ ಮೇರು ವ್ಯಕ್ತಿತ್ವವನ್ನು ಸಂಪಾದಿಸಿ ಎಲ್ಲರಿಗೂ ಪೂಜ್ಯನೀಯರಾಗಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಪರಿಕಲ್ಪನೆ ನೀಡಿ ಎಲ್ಲಾ ವರ್ಗದವರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಮುಂದಿನ ದಿನ ಜನರು ಹೇಗೆ ಬದುಕಬೇಕೆಂಬ ಕಲ್ಪನೆಯನ್ನು ಅವರು ೮೦ ವರ್ಷಗಳ ಹಿಂದೆಯೇ ತಿಳಿದು ಕೊಂಡು ಅದನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ. ಇವತ್ತಿಗೂ ನಮ್ಮ ಎಲ್ಲಾ ಆಧುನಿಕ ಸಮಸ್ಯೆಗಳಿಗೂ ಸಂವಿಧಾನದಲ್ಲಿ ಪರಿಹಾರವಿದೆ ಎಂದರು.

ಸರಳ ಸಜ್ಜನಿಕೆಯ ಆದರ್ಶ ವ್ಯಕ್ತಿ:
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸರಳ ಸಜ್ಜನಿಕೆಯ ಆದರ್ಶ ವ್ಯಕ್ತಿ. ತಾ.ಪಂ ಸೇರಿದಂತೆ ಹಲವು ರಾಜಕೀಯ ಕ್ಷೇತ್ರದಲ್ಲಿ ಮತ್ತು ಗ್ರಾ.ಪಂ ಪಂಚಾಯತ್‌ನಲ್ಲಿ ಸಾಕಷ್ಟು ಮಂದಿ ಸದಸ್ಯರಾಗಿ ಸೇವೆ ಕೊಡುವಲ್ಲಿ ಡಾ| ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನ ಮಹತ್ವ ಪಡೆದಿದೆ ಎಂದರು.

ಕಟ್ಟಕಡೆಯ ವ್ಯಕ್ತಿಗೂ ಸಮಾನ ನ್ಯಾಯ:
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಡಾ| ಬಿ.ಆರ್ ಅಂಬೇಡ್ಕರ್ ಅವರು ಕಟ್ಟಕಡೆಯ ವ್ಯಕ್ತಿಗೂ ಸಮಾನವಾದ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದಾರೆ. ಅವರ ಆದರ್ಶ ಪಾಲಿಸಿ ಸಮಾಜ ಕಟ್ಡುವ ಕೆಲಸ ಮಾಡೋಣ ಎಂದರು.

ಛಲ ಗೌರವ ಮಟ್ಟಕ್ಕೆ ಏರಿಸಿತು:
ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಮಾತನಾಡಿ ಡಾ| ಬಿ.ಆರ್ ಅಂಬೇಡ್ಕರ್ ಅವರು ಶಿಕ್ಷಣ ಪಡೆಯಲು ಕಷ್ಟಪಟ್ಟರೂ ವಿಶ್ವದಲ್ಲಿ ತುಂಬಾ ಗೌರವ ಪಡೆದರು. ಇದು ಅವರಲ್ಲಿರುವ ಛಲ ಅವರ ಈ ಗೌರವ ಮಟ್ಟಕ್ಕೆ ಏರಿಸಿತ್ತು ಎಂದು ಹೇಳಿದರು.

ವಿಮೋಚನಾ ರಥವನ್ನು ಎಳೆಯುವ ಮೂಲಕ ಅಂಬೇಡ್ಕರ್ ಕನಸು ನನಸಾಗಿಸೋಣ:
ಉಪ್ಪಿನಂಗಡಿ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಹರಿಣಾಕ್ಷಿ ಉಪನ್ಯಸ ಮಾಡಿದರು. ತಂದೆ ತಾಯಿ ಜನ್ಮವನ್ನು ನೀಡಬಹುದು ಹೊರತು ಅದೃಷ್ಟವನ್ನು ನೀಡಲು ಸಾಧ್ಯವಿಲ್ಲ. ಅದೃಷ್ಟ ಏನಾದರು ಬರುತ್ತದೆ ಎಂದಾದರೆ ಅದು ನೀನು ಪಡೆದು ಕೊಂಡ ಶಿಕ್ಷಣದಿಂದ ಎಂದು ಬಹಳ ಹಿಂದೆ ಹೇಳಿದ ಅಂಬೇಡ್ಕರ್ ಅವರು ೨೪ ಡಾಕ್ಟರೇಟ್ ಪದವಿ ಪಡೆದಿದ್ದರು. ಅಂತಹ ಪದವಿ ಪಡೆದರೂ ಅವರಿಗೆ ಅನೇಕ ರೀತಿಯಲ್ಲಿ ಶೋಷಣೆ ನಡೆಯಿತು. ಆದರೂ ಅದನ್ನೆಲ್ಲಾ ಮೆಟ್ಟಿ ನಿಂತ ಅವರು ಭಾರತಕ್ಕೆ ಸಂವಿಧಾನ ರಚನೆ ಮಾಡಿದರು. ತನ್ನ ಕೊನೆಯ ದಿನದಲ್ಲಿ ಅವರು ಕಣ್ಣೀರಿಟ್ಟು, ನನ್ನ ಸಮುದಾಯವನ್ನು ಒಂದಷ್ಟು ವಿಮೋಚನಾ ರಥವೇರಿಸಿ ಕರೆದುಕೊಂಡು ಬಂದಿದ್ದೇನೆ. ಆದರೆ ನನಗೆ ಮತ್ತೆ ಸಮಧಾನ ಆಗುತ್ತಿಲ್ಲ. ಯಾಕೆಂದರೆ ನಾನು ಇನ್ನು ಹೆಚ್ಚು ದಿನ ಬದುಕುವುದಿಲ್ಲ. ನನ್ನ ವಿಮೋಚನಾ ರಥವನ್ನು ಎಳೆಯುವವರು ಯಾರು ಇದು ಅವರ ಮುಂದಿರುವ ಪ್ರಶ್ನೆಯಾಗಿತ್ತು. ಆದರೆ ಅವರು ವಿಮೋಚನಾ ರಥದ ಹಗ್ಗವನ್ನು ನಮ್ಮ ಕೈಯಲ್ಲಿ ಕೊಟ್ಟಿದ್ದಾರೆ. ಅದನ್ನು ನಮ್ಮ ಕೈಯಿಂದ ಎಳೆಯಬೇಕಾಗಿದೆ. ಭಾರತ ದೇಶದಲ್ಲಿ ಇರುವ ಎಲ್ಲಾ ರೀತಿಯ ದುಷ್ಟತನ ಇರಬಹುದು, ಅಥವಾ ಅಸ್ಪ್ರಶತೆ ಇರಬಹುದು ಇವುಗಳ್ನು ಕಿತ್ತು ಹಾಕಿ ವಿಮೋಚನಾ ರಥವನ್ನು ಮುಂದಕ್ಕೆ ಎಳೆಯುವ ಮೂಲಕ ಅಂಬೇಡ್ಕರ್ ಅವರ ಕನಸ್ಸನ್ನು ನನಸು ಮಾಡೋಣ ಎಂದರು.

ವರ್ಲಿ ಕಲಾವಿದರಿಗೆ ಗೌರವ:
ಸಹಾಯಕ ಕಮಿಷನರ್ ಪ್ರಾಂಗಣವನ್ನು ಪ್ರಾಚೀನ ಸಂಸ್ಕೃತಿ ಮತ್ತು ಜನಪರ ಯೋಜನೆಗಳನ್ನು ಕಲಾ ಮಾದ್ಯದ ಮೂಲಕ ಎಲ್ಲರಿಗೂ ಕಾಣುವ ಹಾಗೆ ಮಾಡಿದ ೧೦ ಮಂದಿ ಚಿತ್ರಕಲಾವಿದರನ್ನು ಗೌರವಿಸಲಾಯಿತು. ಬಂಟ್ವಾಳ ಮಂಚಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ, ಕೊಂಬೆಟ್ಟು ಶಾಲೆಯ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ, ಕುಂಬ್ರ ಶಾಲೆಯ ಪ್ರಕಾಶ ವಿಟ್ಲ, ಸವಣೂರು ಶಾಲೆ ಸಹಶಿಕ್ಷಕ ಶ್ರೀಕಾಂತ್, ಪಾಣಾಜೆ ಸುಬೋದ ಶಾಲೆಯ ಶಾರದಾ ಜಿ, ಸಾಲ್ಮರ ಪ್ರೌಢಶಾಲೆಯ ಜಯಲಕ್ಷ್ಮೀ ಬಿ, ಮುಕ್ವೆ ಶಾಲೆಯ ಸಹಶಿಕ್ಷಕ ಚರಣ್, ಸಾಂದಿಪನಿ ಶಾಲೆಯ ಸುಚೇತ್, ಕೆಯ್ಯೂರು ಶಾಲೆಯ ಸಹಶಿಕ್ಷಕ ಎಲ್ ಎಚ್ ಗೌಂಡಿ, ಕೇಶವ ಮೊಟ್ಟೆತ್ತಡ್ಕ, ಅಮಿತಾ ಅವರನ್ನು ಗೌರವಿಸಲಾಯಿತು. ಶಿಕ್ಷಕ ರಮೇಶ್ ಉಳಯ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತೆ ರೂಪಾ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಸಿ.ಎಚ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ಷರದಾಸೋಹ ಸಹ ನಿರ್ದೇಶಕ ಸುರೇಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಸಿಇಒ ಹರಿಪ್ರಸಾದ್, ಪ್ರೌಡಶಾಲ ಸಹ ಶಿಕ್ಷಕ ಸಂಘದ ಅಧ್ಯಕ್ಷ ಅಬ್ರಹಂ, ದೈಹಿಕ ಶಿಕ್ಷಣ ಪರಿವೀಕ್ಷ ಸುಂದರ ಗೌಡ, ಸಮಾಜಕಲ್ಯಾಣ ಇಲಾಖೆ ಅನ್ನಪೂರ್ಣ, ಹಾರಾಡಿಮೆಟ್ರಿಕ್ ನಂತರದ ಹಾಸ್ಟೇಲ್‌ನ ರೂಪಾ, ಸಹಾಯಕ ಕಮೀಷನರ್ ಕಚೇರಿ ಅಧೀಕ್ಷಕ ಬಾಬು ನಾಯ್ಕ್, ಹಾರಾಡಿ ಶಾಲಾ ಸಹ ಶಿಕ್ಷಕಿ ಪ್ರಿಯ ಕುಮಾರಿ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ಈಶ್ವರ, ಲಕ್ಷ್ಮೀ ದೇವಿ ಅತಿಥಿಗಳನ್ನು ಗೌರವಿಸಿದರು. ಮೆಟ್ರಿಕ್ ನಂತರ ವಿದ್ಯಾರ್ಥಿನಿ ನಿಲಯದ ಬಾಲಕಿಯರು ನಾಡಗೀತೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊಂಬೆಟ್ಟು ಬಾಲಕರ ವಿದ್ಯಾರ್ಥಿನಿಲಯದ ಶ್ರೀಶೈಲ ಒಡೆಯರ್ ವಂದಿಸಿದರು.

ರಾಜಕೀಯದಿಂದ ತುಳಿತಕ್ಕೊಳಗಾಗಿ ಕಾಂಗ್ರೆಸ್ ತೊರೆದರು
ಸಂವಿಧಾನ ಕೊಟ್ಟಂತಹ ಡಾ.ಬಿ.ಆರ್ ಅಂಬೇಡ್ಕರ್ ಅವರು ಕಾಂಗ್ರೆಸ್ ವಿಚಾರದಿಂದ ದೂರ ಬಂದಿದ್ದರು. ಯಾಕೆಂದರೆ ಅಲ್ಲಿ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ. ರಾಜಕೀಯದಿಂದ ತುಳಿತಕ್ಕೊಳಗಾದರು. ದೇಶದಕ್ಕೆ ಸಂವಿಧಾನ ಕೊಟ್ಟಂತಹ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಯಾವತ್ತೋ ಸಿಗಬೇಕಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು ಅವರು ನಿಧನರಾದ ೯೦ ವರ್ಷಗಳ ಬಳಿಕ ಬಂದ ಅಟಲ್ ಬಿಹಾರಿ ವಾಜಪೇಯಿ ಸರಕಾರ ಕೊಟ್ಟಿತ್ತು. ಹೀಗೆ ಅವರನ್ನು ನಿತ್ಯ ಸ್ಮರಣೆ ಮಾಡಲು ಸರಕಾರ ಕಳೆದ ವರ್ಷ ಪಂಚತೀರ್ಥ ಯೋಜನೆ ಹಾಕಿಕೊಂಡಿತ್ತು. ಅಂಬೇಡ್ಕರ ಹುಟ್ಟಿದ ಸ್ಥಳ, ವಿದ್ಯಾಭ್ಯಾಸ ಬೆಳೆಸಿದ ಜಾಗ, ವಿದೇಶದಲ್ಲಿ ಬ್ಯಾರಿಸ್ಟರ್ ಪಡೆದ ಸ್ಥಳ, ಅವರು ನಿಧನ ಹೊಂದಿ ಜಾಗದಲ್ಲಿ ಭಾರತ ಸರಕಾರ ಪಂಚತೀರ್ಥ ಯೋಜನೆ ಹಾಕಿಕೊಂಡಿದೆ.
ಸಂಜೀವ ಮಠಂದೂರು, ಶಾಸಕರು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.