ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಸಾಮಾಜಿಕ ನ್ಯಾಯ ದಿನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಸಾಮಾಜಿಕ ನ್ಯಾಯ ದಿನ ಎ.೧೪ರಂದು ಡಾ|ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸಿನ ರಾಷ್ಟ ಕಟ್ಟೋಣ ಎಂಬ ಅರ್ಥಪೂರ್ಣ ಕಾರ್ಯಕ್ರಮವು ತನ್ನ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ನಡೆಯಿತು.

ಮುಖ್ಯಭಾಷಣ ಮಾಡಿದ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಅವರು ಕೇವಲ ಇಂದು ನಡೆಯುವ ಕಾರ್ಯಕ್ರಮವಲ್ಲ ನಮ್ಮ ಧ್ಯೇಯ ಅದು ತಳಮಟ್ಟದ ಹಾಗೂ ಶೋಷಿತರ ಧ್ವನಿಯು ಕಾರ್ಯಾ೦ಗ ಶಾಸಕಾಂಗ ನ್ಯಾಯಾಂಗದಲ್ಲಿ ಮೊಳಗುವ ತನಕ ನೈಜ ಅಂಬೇಡ್ಕರ್ ಅನುಯಾಯಿಗಳು ವಿರಮಿಸಲು ಸಾಧ್ಯವಿಲ್ಲ, ಅದುವೇ ಎಸ್‌ಡಿಪಿಐ ಈ ಜನತೆಗೆ ಹೇಳಲಿರುವುದು, ಖಂಡಿತವಾಗಿಯೂ ನಾವು ಒಂದಲ್ಲ ಒಂದು ದಿನ ಕಾರ್ಯರೂಪಕ್ಕೆ ತರಲಿದ್ದೇವೆ ಎಂದರು.

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಅವರು ಮಾತಾನಾಡಿ ಯಾರಾದರೂ ಒಬ್ಬರು ಅಂಬೇಡ್ಕರ್ ಅವರ ಜೀವನವನ್ನು ಅಧ್ಯಯನ ಮಾಡಿದರೆ ಎಂತಹ ಹೃದಯವಾದರೂ ಕರಗಬಲ್ಲುದು ಅಂತಹ ದ್ರೋಹವನ್ನು ಮನುವಾದಿಗಳು ನೀಡಿದ್ದಾರೆ ಆದುದರಿಂದ ಅವರ ಆದರ್ಶ ೧೩೦ ವರ್ಷಗಳು ಕಳೆದರೂ ಇಂದಿಗೂ ಪ್ರಸುತ್ತವೆನಿಸಿದೆ. ದಲಿತ ಮುಸ್ಲಿಂ ಹಿಂದುಳಿದ ವರ್ಗಗಳು ನಾವು ಒಗ್ಗಟ್ಟಿನ ಮಂತ್ರವನ್ನು ಪಾಲಿಸಬೇಕು. ೩೬% ಇರುವ ದಲಿತ ಸಮುದಾಯದ ಮಹಿಳೆಯರು ಇಂದು ದೇಶದಲ್ಲಿ ೩ ನಿಮಿಷಕ್ಕೊಮ್ಮೆ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುವುದಾರೆ ನಾವು ನಮ್ಮ ಅವಸ್ಥೆಯನ್ನು ಅವಲೋಕಿಸಬೇಕಾಗಿದೆ. ಎಂದಿಗೂ ರಾಷ್ಟ್ರಿಯ ಪಕ್ಷಗಳು ಸಾಮಾಜಿಕ ನ್ಯಾಯ ಕೊಡಲು ಪ್ರಯತ್ನಿಸಲಿಲ್ಲ ಎಂಬುದು ನಮ್ಮ ದುರಂತವಾಗಿದೆ. ಆದುದರಿಂದ ಎಸ್‌ಡಿಪಿಐ ಇಂದು ಸಾಮಾಜಿಕ ನ್ಯಾಯದಿನ ಎಂಬುದನ್ನು ಇಂದು ಘೋಷಿಸಿ ಆಚರಿಸುತ್ತಿದ್ದೇವೆ. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಕೆ.ಎ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ೧೮೯೧ ಎಪ್ರಿಲ್ ತಿಂಗಳಲ್ಲಿ ಜನಿಸಿದ್ದ ಮೇಧಾವಿ ಡಾ| ಬಿ.ಅರ್. ಅಂಬೇಡ್ಕರ್ , ಮೂಲನಿವಾಸಿಗಳು ಪಡುತ್ತಿರುವ ಯಾತನೆಗೆ ಮುಕ್ತಿಯನ್ನು ನೀಡಲು ಸುಂದರವಾದ ಸಂವಿಧಾನವನ್ನು ನೀಡಿದರು, ಆದರೆ ಮನುವಾದಿಗಳು ಹಲವು ಕಪಟ ತಂತ್ರಗಳಿಂದ ದಲಿತರನ್ನು ವಂಚಿಸಿ ಇಂದು ಅಧಿಕಾರದ ಅಮಲಿನಲ್ಲಿ ಇದ್ದಾರೆ, ನಾನು ಖಂಡಿತವಾಗಿಯೂ ಮನುವಾದಿಗಳನ್ನು ಮೇಲುಜಾತಿಯವರೆಂದು ಕರೆಯಲ್ಲ ಕರೆಯುವುದನ್ನು ವಿರೋಧಿಸುತ್ತೇನೆ, ಏಕೆಂದರೆ ಅವರು ಪರಕೀಯರು ಇಲ್ಲಿನ ಮೂಲನಿವಾಸಿಗಳದ ದಲಿತರು,ಅಲ್ಪಸಂಖ್ಯಾತ, ಹಿಂದುಳಿದವರ್ಗದ ನಾವು ಮೇಲುಜಾತಿಯವರಾಗಿದ್ದೇವೆ ಎಂದು ಹೇಳಿದರು. ದಿವಂಗತ ಕೂಸಪ್ಪ ರವರ ಪತ್ನಿ ಸುಶೀಲಾ ಕುರಿಯಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಕುರಿಯ ಮಾತನಾಡಿದರು. ಗ್ರಾ.ಪಂ ಸದಸ್ಯ ಬಾಬು ಸವಣೂರು, ಎಸ್‌ಡಿಪಿಐ ಉಪಾಧ್ಯಕ್ಷ ಸಾಗರ್ ಇಬ್ರಾಹಿಂ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷ ಹಮೀದ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಅಶ್ರಫ್ ಬಾವು ಸ್ವಾಗತಿಸಿ, ನಗರ ಸಮಿತಿ ಅಧ್ಯಕ್ಷರಾದ ಬಶೀರ್ ಕೂರ್ನಡ್ಕ ವಂದಿಸಿರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.