HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ವ್ಯಾಕ್ಸಿನ್ ಉತ್ಸವದಲ್ಲಿ  ಭಾಗಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ಕೊರೋನ ವೈರಸ್‌ನಿಂದ ಉಂಟಾಗುವ ಕೋವಿಡ್ – ೧೯ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರದಾದ್ಯಂತ ಲಸಿಕ ಆಂದೋಲನ ಜರುಗುತ್ತಿದೆ. ಈ ಪ್ರಯುಕ್ತ ಪ್ರಧಾನಮಂತ್ರಿ ಕರೆನಿಡಿದ ವ್ಯಾಕ್ಸಿನ್ ಉತ್ಸವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ೮೧ ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದರು. ಮನೆಮನೆಗೆ ತೆರಳಿ ವ್ಯಾಕ್ಸಿನ್ ಬಗೆಗಿನ ಅರಿವು ಮೂಡಿಸಿ, ನಲ್ವತ್ತೈದು ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಮನವೊಲಿಸಿದರು. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪರೀಕ್ಷೆಗಳು ಜರುಗುತ್ತಿದ್ದರೂ, ಬಿಡುವು ಮಾಡಿಕೊಂಡು ತಮ್ಮ ಸೇವಾ ಮನೋಭಾವವನ್ನು ವ್ಯಕ್ತ ಪಡಿಸಿದ ವಿದ್ಯಾರ್ಥಿಗಳ ಈ ಗುಣ ಎಲ್ಲಾರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.


ವ್ಯಾಕ್ಸಿನ್ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ದ್ವಿತೀಯ ಬಿಎಸ್ಸಿಯ ಮೇಘಶ್ರೀ ಪಿ ಆರ್ ಹಿರಿಯರಲ್ಲಿ ವ್ಯಾಕ್ಸಿನ್ ಬಗೆಗಿನ ಅರಿವು ಮೂಡಿಸಿದ್ದು ತುಂಬಾ ಸಂತೋಷ ಮೂಡಿಸಿದೆ ಎಂದು ಹೇಳಿದರು. ಇನ್ನೋರ್ವ ಸ್ವಯಂಸೇವಕಿ ದ್ವಿತೀಯ ಬಿ.ಕಾಂ ನ ಅನುಪಮ ಕೆ ಮಾತನಾಡುತ್ತಾ ಇತರರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಾರ್ಥಕ ಭಾವವನ್ನು ಮೂಡಿಸಿತು ಎಂದು ಹೇಳಿದರು. ಸಮಾಜಮುಖಿಯಾದ ಇಂತಹ ಕಾರ್ಯಕ್ರಮಗಳು ನಮಗೆ ಇತರರಲ್ಲಿ ಆರೋಗ್ಯದ ಅರಿವು ಮೂಡಿಸುವುದಲ್ಲದೆ ನಮ್ಮ ಸಂವಹನ ಕೌಶಲ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತಿದೆ ಎಂದು ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಕಾವ್ಯ ಕೆ ಹೇಳಿದರು.

ರಾಜ್ಯದ ‘ಎನ್‌ಎಸ್‌ಎಸ್ ಆರ್‌ಡಿ ಬೆಂಗಳೂರು’ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಗೊಂಡಿರುವ ಈ ಕಾರ್ಯಕ್ರಮ ರಾಜ್ಯವ್ಯಾಪಿ ಮೆಚ್ಚುಗೆ ಪಡೆದುಕೊಂಡಿದೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿಯವರ ನಿರ್ದೇಶನ, ಎನ್‌ಎಸ್‌ಎಸ್ ಅಧಿಕಾರಿಗಳಾಗಿರುವ ಶ್ರೀ ಹರಿಪ್ರಸಾದ್ ಎಸ್ ಮತ್ತು ಶ್ರೀ ಶಶಿಕುಮಾರ ಇವರುಗಳ ಮಾರ್ಗದರ್ಶನದಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಎನ್‌ಎಸ್‌ಎಸ್ ಘಟಕ ನಾಯಕರುಗಳಾದ ಹೃತಿಕ್ ಬಿ, ನಿತಿನ್ ಪಿ, ರಂಜಿತಾ ಜಿ ಮತ್ತು ಪುಣ್ಯಶ್ರೀ ರೈ ಜಿ ಸಂಘಟಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.