HomePage_Banner
HomePage_Banner
HomePage_Banner
HomePage_Banner

ಕುಂಬ್ರ: ರಾಮಗಿರಿ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿಗೆ ಆಯ್ಕೆ | ಅಧ್ಯಕ್ಷ: ಬಾಬು ಪೂಜಾರಿ, ಪ್ರ.ಕಾರ್ಯದರ್ಶಿ: ರಾಜೇಶ್ ರೈ ಪರ್ಪುಂಜ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ರಾಮಗಿರಿ ಶ್ರೀ ರಾಮ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಕುಂಬ್ರ ದುರ್ಗಾ ಪ್ರಸಾದ್ ರೈ ರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರತನ್ ರೈಕುಂಬ್ರ ಅವರು ೨೦೧೯-೨೦ – ೨೧ ನೇ ಸಾಲಿನ ವರದಿಯನ್ನು ವರದಿ ಹಾಗೂ ಕೋಶಾಧಿಕಾರಿ ಅವರ ಒಪ್ಪಿಗೆಯ ಮೇರೆಗೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಇದನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಈ ಸಂದರ್ಭದಲ್ಲಿ ೨೦೨೧ -೨೨ ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಚುನಾವಣಾಧಿಕಾರಿಯಾಗಿ ವಿಶ್ವನಾಥ ರೈ ಕೋಡಿಬೈಲು ನಡೆಸಿಕೊಟ್ಟರು.

ನೂತನ ಅಧ್ಯಕ್ಷರಾಗಿ ಬಾಬು ಪೂಜಾರಿ ಬಡಕೋಡಿ ,ಉಪಾಧ್ಯಕ್ಷರಾಗಿ ಉಷಾ ನಾರಾಯಣ್ ಎರಡನೇ ಬಾರಿಗೆ ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ರೈ ಪರ್ಪುಂಜ, ಜೊತೆ ಕಾರ್ಯದರ್ಶಿಯಾಗಿ ಶೇಖರ್ ಕುರಿಕ್ಕಾರ, ಕೋಶಾಧಿಕಾರಿಯಾಗಿ ರಾಜ್ ಪ್ರಕಾಶ್ ರೈ ಕುಂಬ್ರ, ಲೆಕ್ಕ ಪರಿಶೋಧಕರಾಗಿ ಪುರಂದರ ಕುಯ್ಯಾರುರವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಾಬು ಪೂಜಾರಿ ಬಡಕೋಡಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಮಾಜಿ ಅಧ್ಯಕ್ಷರುಗಳೂ, ಭಜನಾ ಮಂಡಳಿಯ ಸದಸ್ಯರು, ಶ್ರೀರಾಮ ಭಜನಾ ಮಂದಿರದ ಸದಸ್ಯರು ಉಪಸ್ಥಿತರಿದ್ದರು.

ವಿವಿಧ ಸಮಿತಿಯ ಸಂಚಾಲಕರು
ವಿವಿಧ ಕಾರ್ಯಕ್ರಮಗಳ ಸಂಚಾಲಕರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಭಜನಾ ಸಂಚಾಲಕರಾಗಿ ಹರಿಪ್ರಸಾದ್ ಆಳ್ವ ನೀರಲ ಮತ್ತು ಅಶೋಕ್ ಕುಮಾರ್ ಬಡಕೋಡಿ, ಶ್ರೀಕೃಷ್ಣಜನ್ಮಾಷ್ಟಮಿಯ ಸಂಚಾಲಕರಾಗಿ ಅಂಕಿತ್ ರೈ ಕುಯ್ಯಾರು, ಸಾರ್ವಜನಿಕ ಗಣೇಶೋತ್ಸವದ ಸಂಚಾಲಕರಾಗಿ ಪದ್ಮನಾಭರೈ ಅರೆಪ್ಪಾಡಿ, ಶ್ರೀ ಕನ್ಯಾ ಸಂಕ್ರಮಣದ ಸಂಚಾಲಕರಾಗಿ ರಾಜ್ ಮೋಹನ್ ರೈ ನಿರಾಲ, ವಾರ್ಷಿಕ ಮಂಗಳೋ ತ್ಸವದ ವಿವಿಧ ಕಾರ್ಯಕ್ರಮಗಳ ಸಂಚಾಲಕರುಗಳಾಗಿ ಭಜನಾ ಸಂಚಾಲಕರಾಗಿ ನಾರಾಯಣ ಪೂಜಾರಿ ಕುರಿಕ್ಕಾರ ,ಸತ್ಯನಾರಾಯಣ ಪೂಜಾ ಸಂಚಾಲಕರಾಗಿ ಮಾಧವ ರೈ ಕುಂಬ್ರ , ಯಕ್ಷಗಾನ ಸಂಚಾಲಕರಾಗಿ ವಿಶ್ವನಾಥ ರೈ ಕೊಡಿಬೈಲುರವರುಗಳನ್ನು ಆಯ್ಕೆ ಮಾಡಲಾಯಿತು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.