HomePage_Banner
HomePage_Banner
HomePage_Banner
HomePage_Banner

ಏ.22: ಪ್ರಣವ ಸೌಹಾರ್ದ ಸಹಕಾರಿ ನಿಯಮಿತದ 5ನೇ ಶಾಖೆ ಪುತ್ತೂರಿನಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ೨೦೧೫ ರಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಾ ಬಂದಿರುವ ಪ್ರಣವ ಸೌಹಾರ್ದ ಸಹಕಾರಿ ನಿಯಮಿತದ ಪುತ್ತೂರು ಶಾಖೆಯು ಎಪ್ರಿಲ್ ೨೨ರಂದು ಪುತ್ತೂರು ಪಡೀಲ್‌ನಲ್ಲಿರುವ ಬಾಳಪ್ಪ ಕಾಂಪ್ಲೆಕ್ಸ್ ಮುಂಭಾಗದ ಎನ್.ಎಸ್. ಆರ್ಕೇಡ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಪ್ರಣವ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಜಿ.ಆರ್. ಪ್ರಸಾದ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಪ್ರಿಲ್ ೨೨ರಂದು ಸಂಜೆ ೫.೩೦ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪುತ್ತೂರು ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಪ್ರಣವ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಜಿ.ಆರ್. ಪ್ರಸಾದ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಹಕಾರ ಭಾರತಿಯ ರಾಜ್ಯಾಧ್ಯಕ್ಷರಾದ ಸತೀಶ್ಚಂದ್ರ ಎಸ್.ಆರ್., ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರ ಒಕ್ಕೂಟದ ಹಿರಿಯ ವ್ಯವಸ್ಥಾಪಕರು ಹಾಗೂ ಜಿಲ್ಲಾ ಸಂಯೋಜಕರಾದ ಗುರುಪ್ರಸಾದ್ ಬಂಗೇರ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೩.೩೦ರಿಂದ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಶೃಂಗೇರಿ ಅವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಪುತ್ತೂರಿನಲ್ಲಿ ಉದ್ಘಾಟನೆಯಾಗುತ್ತಿರುವ ಶಾಖೆಯು ‘ಪ್ರಣವ’ದ ೫ನೇ ಶಾಖೆಯಾಗಿದೆ. ಸಂಸ್ಥೆಯಲ್ಲಿ ನಿರಖು ಠೇವಣಿ ಖಾತೆ, ಉಳಿತಾಯ ಖಾತೆ, ಆವರ್ತನಾ ಠೇವಣಿ, ನಿತ್ಯ ನಿಧಿ, ಚಿನ್ನಾಭರಣ ಈಡಿನ ಸಾಲ, ಅಡಮಾನ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಗೃಹ ಸಾಲ, ಮನೆಗಳಿಗೆ ಸೌರವಿದ್ಯುತ್ ಅಳವಡಿಸಲು / ಸೌರವಿದ್ಯುತ್ ಯೋಜನೆಗಳಿಗಾಗಿ ಬಡ್ಡಿರಹಿತ ಸಾಲ ಇತ್ಯಾದಿ ಸೌಲಭ್ಯಗಳಿವೆ. ಅಷ್ಟೇ ಅಲ್ಲದೆ, ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್, ಆರೋಗ್ಯ ವಿಮೆ ಮತ್ತು ಸಾಮಾನ್ಯ ವಿಮಾ ಸೌಲಭ್ಯಗಳು, ಮ್ಯೂಚುವಲ್ ಫಂಡ್ ಮತ್ತು ಜೀವವಿಮಾ ಸೌಲಭ್ಯಗಳ ಮಾಹಿತಿ, ವಿದೇಶದಿಂದ ಹಾಗೂ ದೇಶದ ಒಳಗಡೆ ಹಣ ವರ್ಗಾವಣೆ ಸೌಲಭ್ಯ, ಇ-ಸ್ಟ್ಯಾಂಪಿಂಗ್ ಸೌಲಭ್ಯ, ಜೀವವಿಮಾ ಕಂತು ಪಾವತಿ, ಆರ್‌ಟಿಜಿಎಸ್ ಮತ್ತು ನೆಫ್ಟ್ ಸೌಲಭ್ಯಗಳೂ ಇವೆ. ಆರ್ಥಿಕ ಮಹಾಮಳಿಗೆಯ ಮಾದರಿಯ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯು ಇದೀಗ ತನ್ನ ಸದಸ್ಯರಿಂದ ತಯಾರಿಸಲ್ಪಟ್ಟ ರಾಸಾಯನಿಕ ಮುಕ್ತ, ಆರೋಗ್ಯಯುಕ್ತ ದೇಸಿ ಉತ್ಪನ್ನಗಳನ್ನೂ ಗ್ರಾಹಕರಿಗೆ ಒದಗಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲೂ ಇದು ಲಭ್ಯವಿದೆ. ಪುತ್ತೂರು ಶಾಖೆಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಸುಳ್ಯ, ವಿಟ್ಲ, ಉಪ್ಪಿನಂಗಡಿ, ಕಡಬ ಭಾಗದ ಸದಸ್ಯರಿಗೆ ೧ ವರ್ಷದ ಮೇಲಿನ ಅವಧಿಯ ನಿರಖು ಠೇವಣಿಗೆ ಶೇ.೦.೫ ಹೆಚ್ಚುವರಿ ವಿಶೇಷವಾದ ಬಡ್ಡಿದರ ನೀಡಲಾಗುವುದು ಎಂದು ಜಿ.ಆರ್. ಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಣವ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರಾದ ಸೋಮಪ್ಪ ನಾಯಕ್, ದಯಾಸಾಗರ್ ಪೂಂಜ, ಪುತ್ತೂರು ಶಾಖಾ ಮುಖ್ಯಸ್ಥರಾದ ರೇಖನಾಥ್ ರೈ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.