HomePage_Banner
HomePage_Banner
HomePage_Banner
HomePage_Banner

ಚಾರ್ವಾಕ ಪ್ರಾ.ಕೃ,ಪ.ಸ.ಸಂಘದ ಸದಸ್ಯರ ಬಾಕಿ ಸಾಲಮನ್ನಾ ಬಿಡುಗಡೆಗೊಳಿಸಿ- ಸಚಿವ ಎಸ್ ಅಂಗಾರರಿಗೆ ಸಂಘದಿಂದ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಬೆಳೆವಿಮೆ ಪರಿಹಾರದಲ್ಲಿನ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಮನವಿ

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಬಾಕಿಯಿರುವ ಸಾಲಮನ್ನಾ ಬಿಡುಗಡೆ ಹಾಗೂ ಬೆಳೆವಿಮೆ ಪರಿಹಾರದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಬಗ್ಗೆ ರಾಜ್ಯದ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರರವರಿಗೆ ಮನವಿ ಮಾಡಲಾಗಿದೆ.

ಚಾರ್ವಾಕ ಪ್ರಾ.ಕೃ.ಪ.ಸ.ಸಂಘದಲ್ಲಿ ಸುಮಾರು ೨೮ ಮಂದಿ ಸದಸ್ಯರಿಗೆ ಸರಕಾರದ ಸಾಲಮನ್ನ ಯೋಜನೆಯಂತೆ ಸಾಲಮನ್ನಾ ಬರಲು ಬಾಕಿ ಇದ್ದು, ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆಯೂ ಮತ್ತು ಸಂಘದ ೨೭ ಮಂದಿಯ ಬೆಳೆವಿಮೆ ನೋಂದಾಯಿತ ಸದಸ್ಯರಿಗೆ ಬೆಳೆ ಹೊಂದಾಣಿಕೆಯಾಗದೇ ಬೆಳೆವಿಮೆ ಬರಲು ಬಾಕಿಯಿದ್ದು ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕೆಂದು ಸಚಿವರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ. ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಉದನಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ನಿರ್ದೇಶಕ ಧಮೇಂದ್ರ ಗೌಡ ಕಟ್ಟತ್ತಾರು ಈ ಸಂದರ್ಭದಲ್ಲಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.