HomePage_Banner
HomePage_Banner
HomePage_Banner
HomePage_Banner

ಸಿಂಹವನ-ಪಂಜಳ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.50 ಸಾವಿರ ಅನುದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕತ್ತಾರುಪದವಿನ ಒಪ್ಪಿಗೆಯೊಂದಿಗೆ ಕಲೆಯಾದ ಆರ್ಯಾಪು ಗ್ರಾಮದ ಕಾರಣಿಕ ಶ್ರೀ ಸ್ವಾಮಿ ಕೊರಗ ತನಿಯ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ಕ್ಷೇತ್ರ ಸಿಂಹವನ-ಕುಕ್ಕಾಡಿ-ಪಂಜಳ ಇಲ್ಲಿನ ಕೊರಗಜ್ಜ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ರೂ.೫೦ ಸಾವಿರ ಅನುದಾನವನ್ನು ಈಗಾಗಲೇ ಹಸ್ತಾಂತರಿಸಿರುತ್ತಾರೆ.

ಸಿಂಹವನ ಶ್ರೀ ಸ್ವಾಮಿ ಕೊರಗ ತನಿಯ, ಶ್ರೀ ಆದಿಬ್ರಹ್ಮ ಮೊಗೇರ್ಕಳ ಕ್ಷೇತ್ರದ ಕೊರಗಜ್ಜ ದೈವದ ನೂತನ ಕಟ್ಟೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯು ಈಗಾಗಲೇ ನೆರವೇರಿದ್ದು ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಂಹವನ-ಪಂಜಳ ಶ್ರೀ ಕ್ಷೇತ್ರದ ಕೋರಿಕೆಯಂತೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಈ ಅನುದಾನವನ್ನು ಮಂಜೂರು ಮಾಡಿರುತ್ತಾರೆ. ಈ ಅನುದಾನವನ್ನು ದಕ್ಷಿಣ ಕನ್ನಡ-೨ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್‌ರವರು ಸಿಂಹವನ ಶ್ರೀ ಸ್ವಾಮಿ ಕೊರಗ ತನಿಯ, ಶ್ರೀ ಆದಿಬ್ರಹ್ಮ ಮೊಗೇರ್ಕಳ ಕ್ಷೇತ್ರದ ಕೊರಗಜ್ಜ ದೈವಸ್ಥಾನದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರಿಗೆ ರೂ.೫೦ ಸಾವಿರ ಅನುದಾನದ ಚೆಕ್‌ನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದ ತಾಲೂಕು ಯೋಜನಾಧಿಕಾರಿ ಆನಂದ್ ಕೆ, ಕೆದಂಬಾಡಿ ವಲಯ ಮೇಲ್ವಿಚಾರಕಿ ರೋಹಿಣಿ, ಕೆಮ್ಮಿಂಜೆ ವಲಯ ಮೇಲ್ವಿಚಾರಕಿ ಯೋಗೀಶ್ವರಿ, ಸಿಂಹವನ ಶ್ರೀ ಸ್ವಾಮಿ ಕೊರಗ ತನಿಯ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ಕ್ಷೇತ್ರದ ಅಧ್ಯಕ್ಷ ಸಿ.ಎಸ್ ಚಂದ್ರ ಸಿಂಹವನ, ದೈವದ ಪ್ರಧಾನ ಅರ್ಚಕ ಈಶ್ವರ ಸಿಂಹವನ, ಕೋಶಾಧಿಕಾರಿ ಮನೋಜ್ ಸಿಂಹವನ, ಆನಂದ ಸಿಂಹವನ ಹಾಗೂ ಊರವರು ಉಪಸ್ಥಿತರಿದ್ದರು.

ರೂ.೭ ಲಕ್ಷದ ಯೋಜನೆ…
ಕೊರಗಜ್ಜ ದೈವದ ಮೂಲ ನೆಲೆ ಕುತ್ತಾರುಪದವಿನ ರವಿ ಪೂಂಜರವರ ಮಾರ್ಗದರ್ಶನದಂತೆ ಇದೀಗ ಜೀರ್ಣೋದ್ಧಾರ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಕೊರಗಜ್ಜ ದೈವದ ಕಟ್ಟೆ ನಿರ್ಮಾಣ, ಆವರಣ ಗೋಡೆ ರಚನೆ, ಪ್ರತಿಷ್ಠಾ ಕಾರ್ಯ, ನೇಮೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಮುಂತಾದ ಕಾರ್ಯಗಳು ನಡೆಯಲಿದ್ದು ಸುಮಾರು ರೂ.೭ ಲಕ್ಷ ಮೊತ್ತದ ಯೋಜನೆ ಇದಾಗಿದೆ ಎಂದು ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು `ಸುದ್ದಿ’ಗೆ ಪ್ರತಿಕ್ರಿಯಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.