HomePage_Banner
HomePage_Banner
HomePage_Banner
HomePage_Banner

ಸವಣೂರು ಪರಣೆಯಲ್ಲಿ ವಿಸು ಆಚರಣೆ- ವಿಶೇಷ ಭಜನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ/ ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಶ್ರೀ ದೇವಿ ಸೇವಾ ಸಮಿತಿ ತುಳುಸಿಪುರಂ ಪರಣೆ, ಬೊಳ್ಳಿ ಬೊಲ್ಪು ತುಳುಕೂಟ ಸವಣೂರು ಇವರ ಆಶ್ರಯದಲ್ಲಿ, ಯುವಕ ಮಂಡಲ ಸವಣೂರು, ಶ್ರೀ ದುರ್ಗಾ ಭಜನಾ ಮಂಡಳಿ ಶಕ್ತಿನಗರ-ಪಾದೆಬಂಬಿಲ, ಶ್ರೀ ಹರಿ ಭಜನಾ ಮಂಡಳಿ ದೇವಶ್ಯ ಹಾಗೂ ಶ್ರೀ ಮಹಾ ವಿಷ್ಣು ಭಜನಾ ಮಂಡಳಿ ಮುಗೇರು-ಸವಣೂರು ಇವರ ಸಹಯೋಗದಲ್ಲಿ ಎ.14ರಂದು ಸವಣೂರು ಪರಣೆಯಲ್ಲಿ ವಿಷು ಆಚರಣೆ, ವಿಶೇಷ ಭಜನಾ ಕಾರ್‍ಯಕ್ರಮ ಹಾಗೂ ತುಳುನಾಡಿನ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

ಪೂರ್ವಹ್ನ 9 ರಿಂದ 12ರ ತನಕ ವಿಶೇಷ ಭಜನೆ ನಡೆಯಿತು. ವಿಷು ಕಣಿಯನ್ನು ಇಟ್ಟು ವಿಷು ಆಚರಣೆಯನ್ನು ಮಾಡಲಾಯಿತು. ತಾರಾಯಿ ಕಟ್ಟುವುದು, ಹಗ್ಗ ಎಳೆಯುವುದು, ಪಾಯಸ ಕುಡಿಯುವ ಸ್ಪರ್ಧೆ ಸಹಿತ ಅನೇಕ ಆಟೋಟಗಳನ್ನು ಆಯೋಜಿಸಲಾಯಿತು.

ಪರಣೆ- ತುಳುಸಿಪುರಂ ಶ್ರೀ ದೇವಿ ಸೇವಾ ಸಮಿತಿಯ ಸಂಚಾಲಕ ಪರಣೆ ಪದ್ಮಯ್ಯ ಗೌಡ, ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಶ್ಯ, ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಕೋಶಾಧಿಕಾರಿ ತಾರಾನಾಥ ಕಾಯರ್ಗ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾ.ಪಂ, ಸದಸ್ಯರಾದ ಸತೀಶ್ ಅಂಗಡಿಮೂಲೆ, ಚಂದ್ರಾವತಿ ಸುಣ್ಣಾಜೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಆರ್, ಪ್ರಜ್ವಲ್ ಕೆ.ಆರ್, ಸವಣೂರು ಸಿ.ಎ.ಬ್ಯಾಂಕ್ ಮಾಜಿ ನಿರ್ದೇಶಕಿ ರತ್ನಾವತಿ ಆರ್ ಕೋಡಿಬೈಲು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಸವಣೂರು ಹಿಂದು ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ್ ಇಡ್ಯಾಡಿ, ಸವಣೂರು ಸಿ.ಎ,ಬ್ಯಾಂಕ್ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಶಾರದಾಂಬಾ ಸೇವಾ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ ಸೊಂಪಾಡಿ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಪ್ರಧಾನ ಕಾರ್‍ಯದರ್ಶಿ ರಾಘವ ಗೌಡ ಸವಣೂರು, ಸವಣೂರು ಯುವಕ ಮಂಡಲದ ಕಾರ್‍ಯದರ್ಶಿ ಪ್ರಕಾಶ್ ಮಾಲೆತ್ತಾರು ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು. ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಪ್ರಧಾನ ಕಾರ್‍ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.