HomePage_Banner
HomePage_Banner
HomePage_Banner
HomePage_Banner

ಕೋವಿಡ್ ಮುನ್ನೆಚ್ಚರಿಕೆ ಸಲುವಾಗಿ ಸರಕಾರದ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಿ.ಐ ಗೋಪಾಲ ನಾಯ್ಕ್ ಸೂಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಎರಡನೇ ಅಲೆಯ ಪರಿಣಾಮ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿರುವ ಹಿನ್ನಲೆಯಲ್ಲಿ ಪುತ್ತೂರು ಜಾತ್ರೋತ್ಸವದ ಸಂದರ್ಭ ಕೋವಿಡ್-೧೯ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಪುತ್ತೂರು ನಗರ ಠಾಣೆ ಇನ್ಸ್‌ಪೆಕ್ಟರ್ ಗೋಪಾಲ ನಾಯ್ಕ್‌ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪುತ್ತೂರು ಜಾತ್ರೋತ್ಸವದಲ್ಲಿ ಅತೀ ಹೆಚ್ಚು ಜನ ಸಂದಣಿ ಸೇರುವ ಎ.೧೬ ಮತ್ತು ೧೭ರಂದು ಉತ್ಸವದಲ್ಲಿ ಪಾಲ್ಗೊಳ್ಳುವ ಸಂದರ್ಭ ಅನುಸರಿಸಬೇಕಾದ ನಿಯಮ ಹಾಗೂ ಸೂಚನೆಗಳ ಬಗ್ಗೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.10 ವರ್ಷದ ಕೆಳಗಿನ ಮಕ್ಕಳನ್ನೂ ಹಾಗೂ 60 ವರ್ಷ ಮೇಲ್ಪಟ್ಟವರನ್ನು ಜಾತ್ರೆಗೆ ಯಾರೂ ಕರೆದುಕೊಂಡು ಬರಬಾರದು ಎಂದು ತಿಳಿಸಿರುವ ಅವರು, ಜಾತ್ರೆ ಗದ್ದೆಯಲ್ಲಿ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಆಗಾಗ ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಕೊವೀಡ್ ನಿಯಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಜಾತ್ರೆ ಸಮಯದಲ್ಲಿ ಕಳ್ಳಕಾಕರ ಬಗ್ಗೆ ನಿಗಾ ಇರಲಿ : ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಸಂದರ್ಭ ಮನೆಯ ಕಾವಲಿಗಾಗಿ ಒಬ್ಬರು ನಿಲ್ಲಬೇಕು ಅಥವಾ ಪಕ್ಕದ ಮನೆಯವರಿಗೆ ಮನೆಯ ಕಡೆ ನಿಗಾ ವಹಿಸುವಂತೆ ಸೂಚಿಸಬೇಕು.ಅಲ್ಲದೇ ಜಾತ್ರೆಗೆ ರಾತ್ರಿ ವೇಳೆ ತೆರಳುವ ಸಂದರ್ಭ ಮನೆಯಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದೂ ಅವರು ಸೂಚಿಸಿದ್ದಾರೆ. ಜಾತ್ರಾ ಗದ್ದೆಯಲ್ಲಿ ಮಕ್ಕಳ ಕೊರಳಲ್ಲಿರುವ ಚಿನ್ನಾಭರಣಗಳನ್ನು ಪದೇ ಪದೇ ಪರಿಶೀಲನೆ ನಡೆಸುವ ಮೂಲಕ ಎಚ್ಚರಿಕೆ ವಹಿಸಬೇಕು.ಅಲ್ಲದೇ ಇತರರೂ ಕೂಡ ತಾವು ಧರಿಸಿರುವ ಚಿನ್ನಾಭರಣಗಳ ಬಗ್ಗೆ ನಿಗಾ ವಹಿಸಿಕೊಳ್ಳಬೇಕು.ಜಾತ್ರೆ ಗದ್ದೆಯಲ್ಲಿ ಹಾಗೂ ಮನೆ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆಯೂ ಅವರು ಸೂಚಿಸಿದ್ದಾರೆ.

ವಾಹನಗಳ ಬಗ್ಗೆ ಜಾಗರೂಕತೆ: ವಾಹನಗಳನ್ನು ಎಲ್ಲೆಲ್ಲೋ ಪಾರ್ಕ್ ಮಾಡದೇ ಇಲಾಖೆ ನಿಗದಿ ಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿಯೇ ಪಾರ್ಕ್ ಮಾಡಬೇಕು ಹಾಗೂ ವಾಹನವನ್ನು ಪಾರ್ಕ್ ಮಾಡಿ ಇಳಿಯುವ ಸಂದರ್ಭ ಲಾಕ್ ಮಾಡಿ, ಸರಿಯಾಗಿ ವಾಹನ ಲಾಕ್ ಆಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಜಾತ್ರೆಗೆ ತೆರಳುವಂತೆ ಇನ್ಸ್‌ಪೆಕ್ಟರ್ ಗೋಪಾಲ ನಾಯ್ಕ್ ಸೂಚಿಸಿದ್ದಾರೆ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.