HomePage_Banner
HomePage_Banner
HomePage_Banner
HomePage_Banner

ಈ ವರ್ಷ ಎಷ್ಟು ಸಂತೆ ಬಂದಿರಬಹುದು?.. ಜಾತ್ರೆ ಗದ್ದೆಗೊಂದು ಸುತ್ತು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು ಜಾತ್ರೆ ಎಂದ ಕೂಡಲೇ ಎಲ್ಲರ ಮನಸ್ಸಲ್ಲಿ ಮೂಡುವ ಒಂದೇ ಯೋಚನೆ ಈ ವರ್ಷ ಎಷ್ಟು ಸಂತೆ ಬಂದಿರಬಹುದು? ತೊಟ್ಟಿಲಿನಿಂದ ಹಿಡಿದು ಆಟದ ಜೋಕಾಲಿಗಳು ಬಂದಿರಬಹುದು ಎಂದಾಗಿದೆ. ಕಳೆದ ವರ್ಷ ಕೋರೋನ ಮಹಾಮಾರಿಯಿಂದಾಗಿ ಎಲ್ಲವೂ ಇಲ್ಲವಾಯಿತು. ಈ ವರ್ಷ ಕೂಡ ಕೋರೋನ ತನ್ನ ಅಟ್ಟಹಾಸ ಆರಂಭಿಸಿದ ಹಿನ್ನೆಲೆಯಲ್ಲಿ ಪುತ್ತೂರು ಜಾತ್ರೆಯ ಸಂತೆ ವ್ಯಾಪಾರದಲ್ಲಿ ಬಹಳಷ್ಟು ಕಡಿಮೆ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟು ಸ್ಟಾಲ್‌ಗಳನ್ನು ಹಾಕುವಂತಾಗಿದೆ. ಸರಕಾರದ ಕೋವಿಡ್ ನಿಯಮಾಳಿಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ ಎಂಬ ನಿಟ್ಟಿನಲ್ಲಿ ಜಾತ್ರಾ ಸ್ಟಾಲುಗಳು ಬಹಳಷ್ಟು ಕಡಿಮೆ ಇದೆ. ಆದರೂ ತಕ್ಕಮಟ್ಟಿಗೆ ಎಲ್ಲಾ ಬಗೆಯ ಸ್ಟಾಲ್‌ಗಳು ಜಾತ್ರಾ ಗದ್ದೆಯಲ್ಲಿದೆ.

ಏನೇನಿದೆ?
ಈ ಹಿಂದಿನಂತೆ ದೇವಳದ ಎದುರು ಭಾಗದಿಂದ ಅಂದ್ರೆ ಖಾಸಗಿ ಬಸ್ ನಿಲ್ದಾಣದ ಎದುರು ಭಾಗದಿಂದ ಬ್ರಹ್ಮರಥದ ರಸ್ತೆಯಲ್ಲಿ ಸಾಗಿದರೆ ಎಡಭಾಗದಲ್ಲಿ ಮಾತ್ರ ನಿಮಗೆ ಒಂದಷ್ಟು ಸ್ಟಾಲ್‌ಗಳು ಕಾಣಸಿಗುತ್ತವೆ. ಮೊದಲರ್ಧದಲ್ಲಿ ಅಂದರೆ ಕಂಬಳ ಗದ್ದೆಯಲ್ಲಿ ಒಂದಿಷ್ಟು ಮಣಿ ಸರಕಿನ ಸ್ಟಾಲ್‌ಗಳು ಇದ್ದರೆ ಮುಂದಕ್ಕೆ ಚುರುಮುರಿ ಸ್ಟಾಲ್‌ಗಳು, ಐಸ್‌ಕ್ರೀಮ್, ಪಾನಿಪೂರಿ, ಗೋಬಿ ಮಂಚೂರಿ ಸ್ಟಾಲ್‌ಗಳು ಇವೆ. ಇನ್ನು ಮುಂದೆ ಚಲಿಸಿದರೆ ಮಕ್ಕಳ ಜೋಕಾಲಿ, ಡ್ರೆಸ್ ಮೆಟಿರಿಯಲ್ ಸ್ಟಾಲ್, ಚಪ್ಪಲಿ, ಪಾತ್ರೆ, ಫ್ಯಾನ್ಸಿ ಐಟಂಗಳ ಸ್ಟಾಲ್‌ಗಳು ಇವೆ. ಇದಲ್ಲದೆ ಪ್ರತಿ ವರ್ಷದಂತೆ ಕ್ರಾಪ್ಟ್ ಮೇಳದ ಸ್ಟಾಲ್ ಈ ವರ್ಷವೂ ಇದೆ. ಇನ್ನು ದೊಡ್ಡ ಮತ್ತು ಚಿಕ್ಕದಾದ ಜಾಯಿಂಟ್ ವೀಲ್( ತೊಟ್ಟಿಲು) ಕೂಡ ಇದೆ. ಅಂತೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಂತೆ ವ್ಯಾಪಾರ ಮಾಡುವುದಕ್ಕೆ ಬೇಕಾಗುವಂತಹ ಎಲ್ಲಾ ಬಗೆಯ ಸ್ಟಾಲ್‌ಗಳು ಇವೆ.

ಕೋವಿಡ್ ನಿಯಮ ಪಾಲಿಸಿ
ಸರಕಾರ ಮತ್ತು ಜಿಲ್ಲಾಡಳಿತದ ಸೂಚನೆಯಂತೆ ಜಾತ್ರೆಗೆ ಬರುವ ಪ್ರತಿಯೊಬ್ಬರು ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಂತೆ ವ್ಯಾಪಾರ ಮಾಡುವಾಗಲೂ ಕೂಡ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡೇ ವ್ಯಾಪಾರ ಮಾಡುವುದು ಸೂಕ್ತ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸುವುದು ನಮ್ಮ ಹೊಣೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.