HomePage_Banner
HomePage_Banner
HomePage_Banner
HomePage_Banner

ಸುಳ್ಯ ಬಸ್ ನಿಲ್ದಾಣದ ಹಿಂಬದಿ ಕುತ್ತಿಗೆ ಕೊಯ್ಯಲ್ಪಟ್ಟು ವ್ಯಕ್ತಿ ಸಾವು ..!! ಕೊಲೆಯೋ? ಆತ್ಮಹತ್ಯೆಯೋ?

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಬದಿಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಕುತ್ತಿಗೆ ಕೊಯ್ಯಲ್ಪಟ್ಟು ರಕ್ತ ಹರಿದು ಸಾವಿಗೀಡಾಗಿರುವ ಘಟನೆ ನಡೆದಿದೆ.

ರಾತ್ರಿ 9.15 ರ ಹೊತ್ತಿಗೆ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದ ಟಾಯ್ಲೆಟ್ ಹಿಂಬದಿ ಬಿದ್ದುಕೊಂಡಿರುವುದು ಗೊತ್ತಾಗಿ ಟಿ.ಸಿ.ಯವರು ಪೋಲೀಸರಿಗೆ ಮಾಹಿತಿ ನೀಡಿದರು. ಪೋಲೀಸರು ಬಂದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ತಿಳಿದಿದೆ. ಮೃತದೇಹದ ಬಳಿ ಇದ್ದ ಬ್ಯಾಗ್ ನಲ್ಲಿ ಇದ್ದ ಆಧಾರ್ ಕಾರ್ಡ್ ನ ಆಧಾರದಲ್ಲಿ ವ್ಯಕ್ತಿ ಮಂಗಳೂರಿನ ಅಚ್ಚುತ ಎಂಬವರೆಂದು ಗೊತ್ತಾಗಿರುವುದಾಗಿ ತಿಳಿದುಬಂದಿದೆ.

ಪೊಲೀಸರು ಮೃತದೇಹವನ್ನು ಕೆ.ವಿ.ಜಿ.ಆಸ್ಪತ್ರೆಗೆ ಕೊಂಡೊಯ್ದು ಶೈತ್ಯಾಗಾರದಲ್ಲಿ ಇರಿಸಿದರು.  ವ್ಯಕ್ತಿಯ ಸಾವು ಹೇಗೆ ಸಂಭವಿಸಿತೆಂಬುದು ಖಚಿತ ಪಟ್ಟಿಲ್ಲ. ಇದು ಕೊಲೆಯೇ ಆತ್ಮಹತ್ಯೆಯೇ  ಎಂಬ ಪ್ರಶ್ನೆ ಮೂಡಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.