HomePage_Banner
HomePage_Banner
HomePage_Banner
HomePage_Banner

ಹೊಸತಿನ ಹಾರೈಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸ್ವಾಸ್ತ್ಯದ ವಿಚಾರವನ್ನು ಅವಲೋಕಿಸಿದರೆ ಪುತ್ತೂರಿಗೆ ತನ್ನ ಜಿಲ್ಲಾ ಕೇಂದ್ರ ಮಂಗಳೂರಿನ ಮೇಲೆ ಇರುವ ಅವಲಂಬನೆ ಅತ್ಯಧಿಕ ನಿಧಾನವಾಗಿ ಬೆಳೆಯುತ್ತಾ ಬರುತ್ತಿರುವ ಪುತ್ತೂರು ಜಿಲ್ಲೆಯಾಗಿ ಬದಲಾಗುವ ಲಕ್ಷಣಗಳು ಗಟ್ಟಿಯಾಗುತ್ತಿದೆ. ಊರ ಸಮಸ್ತರು ಆರೋಗ್ಯದ ವಿಚಾರವಾಗಿಯೂ ಸ್ವಾವಲಂಬಿಗಳಾಗಲು ಪ್ರಯತ್ನಿಸುವ ಕಾಲ ಈ ಕೊರೋನಾ ಕಾಲದಲ್ಲಿ ಸನ್ನಿಹಿತವಾಗಿದೆ.

ಹಾಗೆಂದರೆ ನಾವು ತುಂಬಾ ಹಿಂದುಳಿದಿಲ್ಲ. ಆದರೆ ನಮ್ಮಲ್ಲಿ ತುರ್ತುಚಿಕಿತ್ಸೆಗಾಗಿಯೇ ಇರುವಂತಹ ಆಸ್ಪತ್ರೆಗಳು ಬಹಳ ಕಡಿಮೆ. ಎಲ್ಲಾ ಆಸ್ಪತ್ರೆಗಳು ದಿನನಿತ್ಯದಲ್ಲಿ ಎದುರಾಗುವ ಕೇಸುಗಳನ್ನು ಎದುರಿಸಲು ಸುಸಜ್ಜಿತವಾಗಿವೆ. ಉದಾಹರಣೆಗೆ ಪುತ್ತೂರಿನಲ್ಲಿನ ಎಲ್ಲಾ ಆಸ್ಪತ್ರೆಗಳನ್ನು ಸೇರಿಸಿದರೆ ಅಂದಾಜು ೩೦೦ ರಿಂದ ೫೦೦ರ ತನಕ ತಿಂಗಳಿಗೆ ಹೆರಿಗೆ ಆಗಬಹುದು, ಇನ್ನೂರರ ಮೇಲ್ಪಟ್ಟ ವಿವಿಧ ಶಸ್ತ್ರಚಿಕಿತ್ಸೆಗಳು ನಡೆಯಬಹುದು. ಆದರೆ ಸೂಪರ್ ಸ್ಪೆಷಾಲಿಟಿ ಬಂದಾಗ ಪುತ್ತೂರಿನಲ್ಲಿ ಸಾಕಷ್ಟು ಸವಲತ್ತುಗಳಿಲ್ಲ. ಮುಂದಿನ ದಶಕದಲ್ಲಿ ನಾವೆಲ್ಲರೂ ಈ ಬಗ್ಗೆ ಆಲೋಚಿಸಬೇಕು.

ಇಷ್ಟೂ ಹತ್ತಿರದ ಮಂಗಳೂರು, ಒಂದು ಗಂಟೆಯ ದಾರಿ, ಅಷ್ಟೊಂದು ಖರ್ಚು ಮಾಡಿ ಒಂದು ಟರ್ಷಿಯರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದರೆ ಪುತ್ತೂರಿನಲ್ಲಿ ಅದು ನಡೆದೀತೇ. ಅದರ ಅವಶ್ಯಕತೆ ಇದೆಯೇ ಅನ್ನುವುದು ಹಲವರ ಪ್ರಶ್ನೆ. ಆದರೆ ಈ ಕೆಳಗಿನ ಉದಾಹರಣೆ ನೋಡುವಾಗ ನಿಮಗೇನೆನ್ನಿಸುತ್ತದೆ ನೋಡೋಣ.

ಯಾವುದೇ ರೀತಿಯ ಕಾಂಪ್ಲಿಕೇಶನ್ ಇಲ್ಲದ ಮೊದಲ ಗರ್ಭಿಣಿ ಹೆರಿಗೆಯಾದ ತಕ್ಷಣ ಅತಿಯಾದ ರಕ್ತಸ್ರಾವ ಆಗಿ ಸಾವಿನ ದವಡೆಗೆ ಹೋಗುವಾಗ ಬದುಕಿಸಲು ಇರುವ ದಾರಿ ಒಂದು ಗಂಟೆ ದೂರ. ಪ್ರತಿಯೊಂದು ಕ್ಷಣ ಕಳೆದ ಹಾಗೆ ವೈದ್ಯರ ಚಿಂತೆಯೂ ಅಧಿಕ. ಆಂಬ್ಯುಲೆನ್ಸ್, ರಕ್ತ ಎಲ್ಲವನ್ನೂ ರೆಡಿ ಮಾಡುವಾಗಲೇ ಅಮೂಲ್ಯ ಸಮಯ ಕಳೆದಿರುತ್ತದೆ. ಮನೆಯಲ್ಲಿರುವ ಗಂಡನೋ, ತಂದೆಯೋ ಬಂದು ರೋಗಿ ಮಂಗಳೂರನ್ನು ಮುಟ್ಟುವ ಸಮಯದಲ್ಲಿ ಗರ್ಭಕೋಶವನ್ನೇ ತೆಗೆಯಬೇಕಾಗಿ ಬರಬಹುದು. ಇನ್ನು ಮೊದಲ ಮಗುವೂ ಸರಿ ಇಲ್ಲದಿದ್ದಲ್ಲಿ ಆ ತಾಯಿ ಮಾನಸಿಕ ಅಸ್ವಾಸ್ತ್ಯಕೊಳಗಾಗುವುದು ಸಾಮಾನ್ಯ.

ಹೆರಿಗೆ ಸಮಯದಲ್ಲಿ ಮಗು ಅಸ್ವಸ್ತವಿದ್ದಲ್ಲಿ ತಕ್ಷಣವೇ ಪ್ರಥಮ ಚಿಕಿತ್ಸೆ ಕೊಡಿಸಿ ಮತ್ತೆ ಮಗುವನ್ನು ಆಕ್ಸಿಜನ್ ಇರುವ ಆಂಬುಲೆನ್ಸ್‌ನಲ್ಲಿ ಮಂಗಳೂರು ಮುಟ್ಟಿಸುವಾಗ ಅಲ್ಲಿಯ ವೈದ್ಯರು ನೀವು ಬಂದದ್ದು ತಡವಾಯಿತು. ಅನ್ನುವುದು ಸಹಜ. ಆದರೆ ಮಗುವಿನ ಮನೆಯವರಿಗೆ ಕ್ರೋಧ ಉಕ್ಕಿ ಹರಿಯುವುದು ಪುತ್ತೂರಿನ ವೈದ್ಯರ ಮೇಲೆ, ಸಿಗದ ವ್ಯವಸ್ಥೆಯ ಮೇಲಲ್ಲ!

ನಡುವಯಸ್ಸಿನ ವ್ಯಕ್ತಿ ಕೆಲಸದ ವೇಳೆ ಕುಸಿದು ಬಿದ್ದಾಗ, ಗಡಿಬಿಡಿಯಲ್ಲಿ ಸಹೋದ್ಯೋಗಿಗಳು ಆಸ್ಪತ್ರೆ ಸೇರಿಸುತ್ತಾರೆ. ಹೃದಯಾಘಾತಕ್ಕೆ ಸರಿಯಾದ ಅಡ್ವಾನ್ಡ್ ಚಿಕಿತ್ಸೆ ಕ್ಲಪ್ತ ಸಮಯದಲ್ಲಿ ಪುತ್ತೂರಿನಲ್ಲಿದ್ದರೆ ಎಷ್ಟೋ ಪ್ರಾಣಗಳು ಉಳಿಯುತ್ತವೆ.

ಎಷ್ಟೋ ಅಪಘಾತಗಳು ಮಡಿಕೇರಿ, ಪುತ್ತೂರು, ನೆಲ್ಯಾಡಿ-ಪುತ್ತೂರಿನ ಮಧ್ಯೆ ನಡೆಯುವುದು ಸಾಮಾನ್ಯ. ಅತಿಯಾದ ರಕ್ತಸ್ರಾವ ತಲೆಗೆಪೆಟ್ಟು, ಮುಂತಾದವರು ದಾರಿ ಮಧ್ಯೆ ಅಸುನೀಗಿದರು ಅನ್ನುವ ವಿಚಾರ ದಿನಬೆಳಗಾದರೆ ನಾವು ಪೇಪರಿನಲ್ಲಿ ಓದುತ್ತೇವೆ.
ಈ ಕೊರೋನಾ ಸಮಯದಲ್ಲಿ ನಾವು ವೆಂಟಿಲೇಟರ್ ಇಲ್ಲದೇ ಎಷ್ಟು ಪರದಾಡಿzವೆ ಅನ್ನುವುದನ್ನು ನಾನಿಲ್ಲ ವಿಶೇಷವಾಗಿ ತಿಳಿಸುವ ಅಗತ್ಯವೇ ಇಲ್ಲ. ನೆರೆಯ ಜಿಲ್ಲಾ ಕೇಂದ್ರ ಕಾಸರಗೋಡೇ ಮಂಗಳೂರಿನ ಹೈಟೆಕ್ ಆಸ್ಪತ್ರೆಗಳ ಮೇಲೆ ಅವಲಂಬಿಸುವಾಗ ನಾವೇನು ಲೆಕ್ಕ ಅನ್ನುವುದು ಜನಸಾಮಾನ್ಯರ ಅನಿಸಿಕೆ.

ಈ ಮೇಲಿನ ಹಾಗೂ ಇನ್ನೂ ಹಲವು ಜಟಿಲ ಸಮಸ್ಯೆಗಳಿಗೆ ಉತ್ತರ ಪುತ್ತೂರಿನ ಜನತೆಯ ಕೈಲಿದೆ. ನಾವು ಮೊದಲನೆಯದಾಗಿ ನಮ್ಮ ಜಾತಿ ಮತಗಳನ್ನು ಮರೆತು ಎಲ್ಲರೂ ಅವಲಂಬಿಸುವ `ಆಸ್ಪತ್ರೆಯ ಕನಸು ಕಾಣಬೇಕು.

ಈ ಆಸ್ಪತ್ರೆಯಲ್ಲಿ ಸಾಧಾರಣ ಹೆರಿಗೆ, ಶಸ್ತ್ರಚಿಕಿತ್ಸೆ, ಸರಳ ರೋಗಗಳಿಗೆ ಚಿಕಿತ್ಸೆ ಸಿಗುವ ಅವಶ್ಯಕತೆಯಿಲ್ಲ. ಇದು ಟರ್ಷಿಯರಿ ಕೇರ್ ಕೊಡುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

ಲೆಪರೋಸ್ಕೋಪಿಕ್ ಸರ್ಜನ್‌ನಿಂದ ಹಿಡಿದು (ಈಗಾಗಲೇ ಪುತ್ತೂರಿನಲ್ಲಿ ನುರಿತ ಲೆಪರೋಸ್ಕೋಪಿ ಸರ್ಜನ್ ಸಿಗುತ್ತಾರೆ). ಈಗ ಹುಟ್ಟಿದ ಹಸುಳೆಗೂ ಶಸ್ತ್ರಚಿಕಿತ್ಸೆ ಮಾಡುವ ವ್ಯವಸ್ಥೆ ಇರಬೇಕು.

ಹೃದಯಘಾತವಾದಾಗ ಅದಕ್ಕೆ ಸರಿಯಾದ ಚಿಕಿತ್ಸೆ ಬೇಕಾಗುವ ಡಿ.ಎಂ ಕಾರ್ಡಿಯೋಲಜಿ ಮಾಡಿದ ಫಿಶಿಷಿಯನ್ ಮತ್ತು ಸರ್ಜನ್ ಸಿಗುವ ರೀತಿಯಲ್ಲಿ ಇರಬೇಕು. ಅದಕ್ಕೆ ಸರಿಯಾದ ಶಸ್ತ್ರಚಿಕಿತ್ಸಾ ಕೊಠಡಿ ಲಭ್ಯ ಇರಬೇಕು.

ಇದೆಲ್ಲಕ್ಕೂ ಅಗತ್ಯವಾದ ಸಿಟಿ ಎಎಮ್‌ಆರ್‌ಡಿ ಹಾಗೂ ಕ್ಯಾತ್ಯಾಬ್ (ಆಂಜಿಯೋಗ್ರಾಮ್) ಸುಲಭವಾಗಿ ಒಂದೇ ಆಸ್ಪತ್ರೆಯಲ್ಲಿ ಲಭ್ಯವಿರಬೇಕು. ನುರಿತ ಫಿಶಿಷಿಯನ್ ಮತ್ತು ಅರವಳಿಕೆ ತಜ್ಞರನ್ನೊಳಗೊಂಡ ಮಲ್ಟಿ ಡಿಸ್ಪೆಂಸರಿ ಐ.ಸಿ.ಯು. ಈ ಆಸ್ಪತ್ರೆಯಲ್ಲಿರಬೇಕು.
ಒಟ್ಟಿನಲ್ಲಿ ಅತೀ ಸೀರಿಯಸ್ ಕೇಸುಗಳನ್ನು ನಿಭಾಯಿಸಲು ಶಕ್ತವಿರುವ ಆಸ್ಪತ್ರೆ ಇದಾಗಿರಬೇಕು.

ಆದರೆ ನಿಜವಾಗಿ ಆರ್ಥಿಕವಾಗಿ ಹಿಂದುಳಿದವರಿಗೂ ಇಲ್ಲಿ ಚಿಕಿತ್ಸೆ ಸಿಗುವ ರೀತಿಯಲ್ಲಿ ಕೆಲವು ಹಾಸಿಗೆಗಳನ್ನು ಅದಕ್ಕಾಗಿ ಮೀಸಲಿರಿಸಬೇಕು. (ಐಶಾರಾಮಿ ಕಾರಿನಲ್ಲಿ ಬಂದು ಬಿಪಿಎಲ್ ಕಾರ್ಡ್ ತೋರುವವರು ನಮ್ಮಲ್ಲಿ ಕಡಿಮೆ ಇಲ್ಲ.)

ಆದರೆ ಹಣವುಳ್ಳವರು ಇಲ್ಲಿ ಬೇಸರ ಪಡದೆ ಎಲ್ಲಾ ರೀತಿಯ ವ್ಯವಸ್ಥೆಗೂ ಸರಿಯಾಗಿ ದುಡ್ಡು ಕೊಟ್ಟು ಚಿಕಿತ್ಸೆ ಪಡೆಯುವಂತಿರಬೇಕು.
ಇದು ಪುತ್ತೂರಿನಲ್ಲಿ ನಡೆದೀತೇ ಅನ್ನುವುದು ನಿಮ್ಮೆಲ್ಲರ ಪ್ರಶ್ನೆ -ಸುತ್ತ ಮುತ್ತಲಿನ ಮಡಿಕೇರಿ, ಸುಳ್ಯ, ಕಾಸರಗೋಡು ಎಲ್ಲಿಯೂ ಎಮರ್ಜನ್ಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಇದು ಒಬ್ಬ ವ್ಯಕ್ತಿಯಿಂದ ನಡೆಯುವ ಆಸ್ಪತ್ರೆ ಅಲ್ಲ. ಪುತ್ತೂರಿನ ಎಲ್ಲ ಜಾತಿ, ಧರ್ಮಗಳ ಹಣವಂತರು ಸೇರಿ ಒಂದು ಕಾರ್ಪೋರೇಟ್ ಆಸ್ಪತ್ರೆಯನ್ನು ಟ್ರಸ್ಟ್ ರೂಪದಲ್ಲಿ ಕಟ್ಟಿಸುವ ಮನಸ್ಸು ಮಾಡಬಹುದು. ಇದರಲ್ಲಿ ಸರಕಾರದ ಸಹಯೋಗವೂ ಬೇಕು.

ಯುಗಾದಿ ಹೊಸತನ ತರುತ್ತದೆನ್ನುವ ಆಶಯ ಎಲ್ಲರಿಗೂ ಇರುತ್ತದೆ. ಈ ಸಂದರ್ಭದಲ್ಲಿ ಪುತ್ತೂರಿನ ವೈದ್ಯಲೋಕದ ಮಾನಸಿಕ ಸ್ವಾಸ್ತ್ಯವನ್ನು ಇನ್ನೂ ಗಟ್ಟಿ ಮಾಡಲು ಹಾಗೂ ಪುತ್ತೂರಿನ ಜನತೆಯ ಆರೋಗ್ಯ ಹಾಗೂ ಜೀವ ಕಾಪಾಡುವ ಒಂದು ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಸೆಂಟರ್ ಕನಸು ಕಾಣುವುದರಿಂದ ನಾವು ಕಳೆದುಕೊಳ್ಳುವುದೇನೂ ಇಲ್ಲ. ಆದರೆ ಮುಂದಿನ ದಶಕದಲ್ಲಿ ಈ ಕಲ್ಪನೆ ಸಾಕಾರಗೊಳಿಸಲಾದೀತೇ ಎನ್ನುವುದು ಪುತ್ತೂರಿನ ಜನಪ್ರತಿನಿಧಿಗಳು ಹಾಗೂ ಜನತೆಗೆ ಬಿಟ್ಟ ವಿಚಾರ.

ಮಣಿಪಾಲದ ಕಾಡಿನಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಸಜ್ಜುಗೊಂಡ ಆಸ್ಪತ್ರೆಯನ್ನು ಸಾಕಾರಗೊಳಿಸಲು ೫೦ ವರ್ಷದ ಹಿಂದೆ ಟಿ. ಮಾಧವ ಪೈಗಳು ಶ್ರಮಿಸಿದ್ದರು. ಇಂದು ನಮಗೆಲ್ಲರಿಗೂ ಅದು ಸ್ವಾಸ್ತ್ಯಕ್ಕೆ `ಅತ್ಯುನ್ನತ ಶಿಖರ’. ಆ ರೀತಿಯ ಸಾಕಾರ ನನಸಾದ ಕನಸು ಪುತ್ತೂರಲ್ಲಾದೀತೇ?!. ಕನಸನ್ನು ಬಿತ್ತಿದ್ದೇನೆ. ಮೊಳಕೆಯೊಡೆದೀತು ಅನ್ನುವ ಉದ್ದೇಶ. ಹೆಮ್ಮರವಾದರೆ ಸಂತೋಷ.

ಡಾ. ಪೂರ್ಣ ಸಿ. ರಾವ್, ಪೂರ್ಣಚಂದ್ರ ಹೆಲ್ತ್‌ಕೇರ್, ಪುತ್ತೂರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.