HomePage_Banner
HomePage_Banner
HomePage_Banner
HomePage_Banner

ಅರಿಯಡ್ಕ ಗ್ರಾಪಂ ಮಹಿಳಾ ವಿಶೇಷ ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್‌ನ 2020-21 ನೇ ಸಾಲಿನಲ್ಲಿ ಮಹಿಳೆಯರ ರಾಜಕೀಯ ನಾಯಕತ್ವ ಲಿಂಗ ಸಮಾನತೆ ಹಾಗೂ ಮಹಿಳಾ ಫಲಾನುಭವಿಗಳನ್ನು ಸೂಕ್ಷ್ಮವಾಗಿ ಆಯ್ಕೆ ಮಾಡಲು ಮತ್ತು ಚುನಾಯಿತ ಮಹಿಳಾ ಪ್ರತಿನಿಧಿಗಳ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ವಿವಿಧ ಯೋಜನೆಗಳಲ್ಲಿ ಅವರುಗಳನ್ನು ತೊಡಗಿಸಿಕೊಳ್ಳುವ ಸಲುವಾಗಿ ಮಹಿಳಾ ವಿಶೇಷ ಗ್ರಾಮ ಸಭೆ ಎ.೧೭ ರಂದು ಕಾವು ಸುವರ್ಣ ಗ್ರಾಮೋದಯ ಸಮುದಾಯ ಭವನದಲ್ಲಿ ನಡೆಯಿತು. ಗ್ರಾಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಕಸ್ತೂರಿ ಬೊಳುವಾರು ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರತಿಯವರು ಇಲಾಖಾ ಮಾಹಿತಿ ನೀಡಿದರು. ಸೌತಡ್ಕ ವಿಕಲಚೇತನರ ಪುನರ್‌ಚೇತನ ಕೇಂದ್ರದ ಮೆನೇಜರ್ ಅಖಿಲೇಶ್ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸರೋಜಿನಿ, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಭವ್ಯ, ಗ್ರಾಪಂ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ, ಅಭಿವೃದ್ಧಿ ಅಧಿಕಾರಿ ಪದ್ಮಕುಮಾರಿ ಉಪಸ್ಥಿತರಿದ್ದರು. ಗುಮಾಸ್ತ ಪ್ರಭಾಕರ ಸ್ವಾಗತಿಸಿ, ಆಶಾ ಕಾರ್ಯಕರ್ತೆ ವೇದಾವತಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಗ್ರಾಪಂ ಸದಸ್ಯರಾದ ಲೋಕೇಶ್ ಗೌಡ ಚಾಕೊಟೆ, ನಾರಾಯಣ ಚಾಕೊಟೆ, ಸದಾನಂದ ಮಣಿಯಾಣಿ, ರಾಜೇಶ್ ಮಣಿಯಾಣಿ,ಮೀನಾಕ್ಷಿ ಪಾಪೆಮಜಲು,ಅನಿತಾ ಜಗದೀಶ್, ಮಾಜಿ ಸದಸ್ಯ ನವೀನ್ ಬಿ.ಡಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಭಾತ್ಯಾಗ
ಮಹಿಳಾ ಗ್ರಾಮ ಸಭೆಯ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ, ಸ್ಥಳೀಯ ಮುಖಂಡೆ ಅನಿತಾ ಹೇಮನಾಥ ಶೆಟ್ಟಿಯವರ ಹೆಸರನ್ನು ಮುದ್ರಣ ಮಾಡದೇ ಇದ್ದದ್ದು, ಹಾಗು ಅವರನ್ನು ಸಭೆಗೆ ಆಹ್ವಾನ ನೀಡದಿರುವುದು ಯಾಕೆ ಎಂದು ಪಂಚಾಯತ್‌ನ ಕಾಂಗ್ರೆಸ್ ಸದಸ್ಯೆ ಜಯಂತಿ ವಿಷಯ ಪ್ರಸ್ತಾಪನೆ ಮಾಡಿದರು. ಈ ವಿಷಯದಲ್ಲಿ ಚರ್ಚೆ ನಡೆಯಿತು. ಕಾಂಗ್ರೆಸ್ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ, ಮೋನಪ್ಪ ಪೂಜಾರಿ ಕೆರೆಮಾರು, ಸಲ್ಮಾ ಸಭಾತ್ಯಾಗ ಮಾಡಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅಭಿವೃದ್ಧಿ ಅಧಿಕಾರಿ ಪದ್ಮಕುಮಾರಿಯವರು, ಕೋವಿಡ್ ಹಿನ್ನೆಲೆಯಲ್ಲಿ ಸರಳ ರೀತಿಯ ಮಹಿಳಾ ಗ್ರಾಮಸಭೆ ನಡೆಸುವುದು ಎಂದು ತೀರ್ಮಾನಿಸಿ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದ್ದೇವೆ. ಅನಿತಾ ಹೇಮನಾಥ ಶೆಟ್ಟಿಯವರ ಹೆಸರು ಮುದ್ರಣ ಮಾಡದೇ ಇರುವುದು ತಪ್ಪಾಗಿದೆ ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.