HomePage_Banner
HomePage_Banner
HomePage_Banner
HomePage_Banner

ಕೋವಿಡ್ ಕಟ್ಟು ನಿಟ್ಟಿನ ಆದೇಶ: ಸಾಮಾಜಿಕ ಅಂತರ ಕಾಯ್ದುಕೊಂಡು ಅಳವಡಿಸಿದ್ದ ಜಾತ್ರೆ ಗದ್ದೆ ಸ್ಟಾಲ್ ತೆರವಿಗೆ ಸೂಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಕಟ್ಟು ನಿಟ್ಟಿನ ಆದೇಶಕ್ಕೆ ಸಂಬಂಧಿಸಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಗದ್ದೆಯಲ್ಲಿರುವ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತ ಸೂಚನೆಯಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಸೂಚನೆ ನೀಡಿದ್ದಾರೆ.



ಎ.17 ರಂದು ಬ್ರಹ್ಮರಥೋತ್ಸವದ ಮರುದಿನ ಎ.18 ರಂದು ದೇವಳದ ಅವಭೃತ ಸವಾರಿ ನಡೆಯಲಿದೆ. ಆದರೆ ಈ ನಡುವೆ ಜಿಲ್ಲಾಧಿಕಾರಿಗಳ ಕಟ್ಡು ನಿಟ್ಡಿನ ಸೂಚನೆಯಂತೆ ದೇವಳದ ಗದ್ದೆಯಲ್ಲಿ ಕೋವಿಡ್ ನಿಯಮವಳಿಯಂತೆ ಸಾಮಾಜಿಕ ಅಂತರ ಕಾಯ್ದು ಕೊಂಡು ಅಳವಡಿಸಿದ ಸ್ಟಾಲ್ ಗಳನ್ನು ತೆರವು ಗೊಳಿಸಲು ಸೂಚನೆ ನೀಡಿದರಿಂದ ಜಾತ್ರೆ ಗದ್ದೆಯಲ್ಲಿ ಬಹುತೇಕ ಸ್ಟಾಲ್ ಸ್ವಯಂ ಪ್ರೇರಿತವಾಗಿ ತೆರವುಗೊಂಡವು. ಜಾತ್ರೆಗೆ ಸಂಬಂಧಿಸಿ ದೇವಳದ ಮಾಹಿತಿ ಕೇಂದ್ರದಿಂದ ರಾಜೇಶ್ ಬನ್ನೂರು ಸ್ಟಾಲ್ ಗಳ ತೆರವು ಮಾಡಲು ಉದ್ಘೋಷಣೆ ಮಾಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. sudarshan

    ಸಾಮಾಜಿಕ ಅಂತರ ಕಾಯ್ದುಕೊಂಡಿದ್ದ ಅಂಗಡಿಗಳು ಯಾಕೆ ತೆರವಾಗಬೇಕಾಗಿದೆ. ಸಾಮಾಜಿಕ ಅಂತರ ಮತ್ತು ಕೋವಿಡ್ ನಿಯಮ ಪಾಲನೆ ಮಾಡದ ಅಂಗಡಿಗಳಾದರೆ ತೆರವು ಮಾಡಬೇಕಿತ್ತು. ಈ ಮಾಹಿತಿ ಇರಿಸುಮುರುಸು ಉಂಟು ಮಾಡುತ್ತಿದೆ. ಅಂಗಡಿ ಹಾಕುವಾಗ ನಿರ್ಬಂದಿಸಲು ಮುಂದಾಗದವರು ಅಂಗಡಿ ಹಾಕಿ ತಿಂಡಿ-ತಿನಿಸು,ಪಾನೀಯ ಮಾರಾಟ ಮಾಡಲು ಮುಂದಾದಾಗ ಗ್ರಾಹಕರಿಗೂ, ಮಾಲಿಕರಿಗೂ ತೊಂದರೆ ಕೊಟ್ಟಿರುವುದು ಸರಿಯಾದ ಕ್ರಮ ಅಲ್ಲ.
    ಕಳೆದ 8 ದಿನ ಪಾಲಿಸಬೇಕಾದ ಕೋವಿಡ್ ನಿಯಮ ಮತ್ತು ವ್ಯವಸ್ಥೆಗಳನ್ನು ಅಳವಡಿಸದ ದೇವಸ್ಥಾನ ವ್ಯವಸ್ಥಾಪನ ಮಂಡಳಿ ಇದೀಗ ಪೋಲಿಸರನ್ನು ಚೂಬಿಟ್ಟು ಮುಜುಗರದಿಂದ ಪಾರಾಗಲೆತ್ನಿಸುತ್ತಿದೆ.
    ಇದನ್ನು ದೇವರು ಮೆಚ್ಚುತ್ತಾರಾ, ಜಾತ್ರೆ ಯಶಸ್ವಿ ಯಾಯಿತೆಂದ ಬೀಗುವವರಿಗೆ ದೇವರು ಏನನ್ನು ಅನುಗ್ರಹಿಸಬಲ್ಲ ಅಥವಾ ಭಕ್ತರ ಹಿಡಿಶಾಪ ಗ್ರಹಣ ಹಿಡಿಯುವುದೇ? ಕಾದು ನೋಡಬೇಕು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.