HomePage_Banner
HomePage_Banner
HomePage_Banner
HomePage_Banner

15 ಕಿ.ಮೀ ದೂರದವರೆಗೆ ಯಾವುದೇ ಪರವಾನಿಗೆ ಇಲ್ಲದೆ ಹಸು, ಕರು ಸಾಗಾಟಕ್ಕೆ ಅನುಮತಿ | ಕಡಬ ಪ್ರಖಂಡ ವಿ.ಹಿಂ.ಪ ಖಂಡನೆ-ಆದೇಶ ಹಿಂತೆಗೆಯಲು ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: 15 ಕಿ.ಮೀ ನವರೆಗೆ ಯಾವುದೇ ಪರವಾನಿಗೆ ಇಲ್ಲದೆ ಹಸು ಹಾಗೂ ಕರುವನ್ನು ಸಾಗಾಟ ಮಾಡಲು ಸರಕಾರ ಆದೇಶ ನೀಡಿದ್ದು, ಈ ಆದೇಶವನ್ನು ಅಕ್ರಮ ಜಾನುವಾರು ಸಾಗಾಟದಾರರು ದುರುಪಯೋಗಪಡಿಸಿಕೊಂಡು ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂದು ಕಡಬ ಪ್ರಖಂಡ ವಿ.ಹಿಂ.ಪ ಬಜರಂಗದಳ ಆತಂಕ ವ್ಯಕ್ತಪಡಿಸಿ, ಸರಕಾರದ ಈ ಆದೇಶಕ್ಕೆ ಖಂಡನೆ ವ್ಯಕ್ತಪಡಿಸಿದೆ.

ಈ ಬಗ್ಗೆ ಕಡಬ ಪ್ರಖಂಡದ ವತಿಯಿಂದ ಮುಖ್ಯ ಮಂತ್ರಿಗಳಿಗೆ ಕಡಬ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಅಕ್ರಮ ಗೋ ಸಾಗಾಟ ನಡೆಸಿ ನಮ್ಮ ಪೂಜನಿಯ ಗೋವುಗಳನ್ನು ವಧೆ ಮಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ, ಇದು ಸಮಸ್ತ ಹಿಂದೂಗಳಿಗೆ ನೋವಿನ ಸಂಗತಿಯಾಗಿದೆ, ಈ ಹಿಂದೆ ಗೋವುಗಳ ಅಕ್ರಮ ಸಾಗಾಟ ನಿಷೇಧ ಹೇರಿದ್ದು ಆದರೆ ಈ ಬಗ್ಗೆ ಕಠಿನ ಕಾನೂನು ಕ್ರಮ ಇನ್ನೂ ಜಾರಿಯಾಗಿಲ್ಲ, ಆದರೆ ಈ ಮಧ್ಯೆ ಇತ್ತಿಚ್ಚೆಗೆ ಗೋ ಸಾಗಾಟದ ಬಗ್ಗೆ ಸರಕಾರದ ಆದೇಶದಲ್ಲಿ ಒಂದು ಅಂಶ ಮಾತ್ರ ನಮ್ಮನ್ನು ಆತಂಕ್ಕಿಡುಮಾಡಿದೆ ಅದೆನೆಂದರೆ ೧೫ ಕಿಲೋ ಮೀಟರ್ ದೂರದವರೆಗೆ ಪರವಾನಿಗೆ ಇಲ್ಲದೆ ಹಸು ಮತ್ತು ಕರುವನ್ನು ಕೊಂಡೋಯ್ಯಬಹುದು ಎಂಬ ಆದೇಶ ನೀಡಿದೆ. ಆದರೆ ಈ ಆದೇಶವನ್ನು ಅಕ್ರಮ ಗೋ ಸಾಗಾಟದಾರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದುದರಿಂದ ಸರಕಾರದ ಈ ಆದೇಶಕ್ಕೆ ನಾವು ಖಂಡನೆ ವ್ಯಕ್ತಪಡಿಸುತ್ತಿದ್ದೆವೆ. ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆದುಕೊಂಡು, ಗೋ ಸಾಗಾಟದ ವಿರುದ್ದ ಕಠಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಡಬ ಪ್ರಖಂಡ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್‍ಯದರ್ಶಿ ಪ್ರಮೋದ್ ರೈ ನಂದುಗುರಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಕೋಡಿಬೈಲು, ಸೇವಾ ಪ್ರಮುಖ್ ವಿನಯ್ ಕೋಲ್ಪೆ, ರಘರಾಮ್ ನಾಯ್ಕ್ ಕುಕ್ಕೆರೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. sudarshan

    ಹಾಗಾದರೆ ಹಿಂದೂ ರಾಷ್ಟ್ರ ವಿವೇಚನೆಯ ಕರ್ನಾಟಕ ಸರಕಾರ ಮತಯಾಚಿಸಿ ಸರಕಾರ ರಚಿಸಿದ ಬಳಿಕ ಯಾರ ಪರ ವಕಾಲತ್ತು ವಹಿಸುತ್ತಿದೆ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.