HomePage_Banner
HomePage_Banner
HomePage_Banner
HomePage_Banner

ಬನ್ನೂರು: ಜಿ.ಸಿ.ಸಿ. ಸುನ್ನಿ ಫ್ರೆಂಡ್ಸ್, ಎಸ್.ವೈ.ಎಸ್, ಎಸ್ಸೆಸ್ಸೆಫ್‌ನಿಂದ ರಂಝಾನ್ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ಜಿ.ಸಿ.ಸಿ. ಸುನ್ನಿ ಫ್ರೆಂಡ್ಸ್, ಎಸ್.ವೈ.ಎಸ್. ಹಾಗೂ ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಜಮಾಅತ್ ವ್ಯಾಪ್ತಿಯಲ್ಲಿ ಎ.17ರಂದು ಅಗತ್ಯ ದಿನಸಿ ಸಾಮಾಗ್ರಿನ್ನೊಳಗೊಂಡ ರಂಝಾನ್ ಕಿಟ್ ವಿತರಿಸಲಾಯಿತು. ಅಸ್ಸಯ್ಯದ್ ಉಮ್ಮರ್ ತಂಙಳ್ ರವರು ದುಆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿ.ಸಿ.ಸಿ. ಸುನ್ನಿ ಫ್ರೆಂಡ್ಸ್‌ನ ಅಧ್ಯಕ್ಷ ಅಸ್ಸಯ್ಯದ್ ಅಬೀದ್ ತಂಙಳ್ ಬನ್ನೂರು, ಎಸ್.ವೈ.ಎಸ್. ಬ್ರಾಂಚ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್, ಸುನ್ನಿ ಸೆಂಟರ್ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷ ಫಾರೊಕ್ ಬನ್ನೂರು ಪ್ರಧಾನ ಕಾರ್ಯದರ್ಶಿ ಹಮೀದ್ ಲಕ್ಕಿಸ್ಟಾರ್, ಅಬೂಬಕ್ಕರ್ ಪಾಪ್ಲಿ, ರಿಯಾಝ್ ಪಾಪ್ಲಿ, ಜಿ.ಸಿ.ಸಿ. ಸುನ್ನಿ ಫ್ರೆಂಡ್ಸ್‌ನ ಕಾರ್ಯದರ್ಶಿ ಬಶೀರ್ ಅಕ್ಕರೆ, ಎಸ್ಸೆಸ್ಸೆಫ್ ಡಿವಿಷನ್ ಸಮಿತಿಯ ಉಪಾಧ್ಯಕ್ಷ ಸಮೀರ್ ಅಕ್ಕರೆ, ಆಶ್ರಫ್ ಹಾನೆಸ್ಟ್, ಶಾಹುಲ್ ಹಮೀದ್ ಉಪಸ್ಥಿತರಿದ್ದರು.

ಜಿ.ಸಿ.ಸಿ ಸುನ್ನಿ ಫ್ರೆಂಡ್ಸ್‌ನಿಂದ ಸಾಮಾಜಿಕ ಕಾರ್ಯ:
ಕಳೆದ ನಾಲ್ಕೈದು ವರುಷಗಳಿಂದ ಬನ್ನೂರಿನ ಸುನ್ನಿ ಅನಿವಾಸಿ ಕಾರ್ಯಕರ್ತರ ಜಿ.ಸಿ.ಸಿ. ಸುನ್ನಿ ಫ್ರೆಂಡ್ಸ್ ಹತ್ತು ಹಲವಾರು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬನ್ನೂರು ವ್ಯಾಪ್ತಿಯಲ್ಲಿ ಅಗತ್ಯ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿ ಪ್ರಶಂಸೆಗೆ ಪಾತ್ರವಾಗಿತ್ತು. ಬಡ ಹೆಣ್ಣುಮಕ್ಕಳ ಮದುವೆಗೆ ಧನ ಸಹಾಯ, ಬಡ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಭರಿಸುತ್ತಾ ಬಂದಿದೆ ಬನ್ನೂರು ಜಿ.ಸಿ.ಸಿ ಫ್ರೆಂಡ್ಸ್. ಕಾರ್ಯಕರ್ತರ ಸಂಪೂರ್ಣ ಸಹಕಾರದಿಂದ ಮುಂದೆಯೂ ನಾನಾ ಸಾಮಾಜಿಕ, ಧಾರ್ಮಿಕ ಸೇವೆ ಮಾಡಲಿದ್ದೇವೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.