HomePage_Banner
HomePage_Banner
HomePage_Banner
HomePage_Banner

ಸೆಕ್ಯುಲರ್ ಯೂತ್ ಫೋರಮ್ ವತಿಯಿಂದ ರಂಝಾನ್ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸೆಕ್ಯೂಲರ್ ಯೂತ್ ಫೋರಮ್ ( SYF ) ಇದರ ವತಿಯಿಂದ ಅರ್ಹ ಫಲಾನುಭವಿಗಳಿಗೆ ಪ್ರಥಮ ಹಂತದ ಸುಮಾರು ಇನ್ನೂರರಷ್ಟು ರಂಝಾನ್ ಕಿಟ್ ವಿತರಿಸಲಾಯಿತು.

ಪುತ್ತೂರು ಹಾಗೂ ಬಂಟ್ವಾಳ ತಾಲ್ಲೂಕು ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿಕೊಂಡು ರಂಝಾನ್‌ಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಣಾ ಕಾರ್ಯಕ್ರಮವನ್ನು ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿಯವರು SYF ನ ಮೋನು ಬಪ್ಪಳಿಗೆಯವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸೀಮಿತ ಅವಧಿಯಲ್ಲಿ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಸೆಕ್ಯೂಲರ್ ಯೂತ್ ಫೋರಮ್ ಸಂಘಟನೆಯು ಸಮುದಾಯದ ಭರವಸೆಯ ಬೆಳಕಾಗಿ ಮೂಡಿ ಬಂದಿದೆ, ಇದಕ್ಕೆ ಸಹಕರಿಸಿದ ಸರ್ವರಿಗೂ ಒಳಿತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಹಂಝತ್ ಸಾಲ್ಮರ, ರಝಾಕ್, ಶಕೀಲ್ ಕೂರ್ನಡ್ಕ, ರಹ್ಮಾನ್ ಸಂಪ್ಯ, ಅಲಿ ಪರ್ಲಡ್ಕ, ಸಿದ್ದೀಕ್ ಸುಲ್ತಾನ್, ಇಮ್ತಿಯಾಝ್, ರಶೀದ್ ಮುರ, ಆಸಿಫ್ ಕೆಮ್ಮಾಯಿ, ಅಝೀಝ್ ಕೆಮ್ಮಾಯಿ, ಫಾರೂಖ್ ಬಾಯಬೆ, ಜಾಬಿರ್ ಬೀಟಿಗೆ, ಇರ್ಫಾನ್ ಸಾಲ್ಮರ, ಹಾರಿಸ್ ಅಡ್ಕ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಾತಿಶ್ ಅಳಕೆಮಜಲು ಸ್ವಾಗತಿಸಿ, ಹನೀಫ್ ಪುಂಚತ್ತಾರು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.