HomePage_Banner
HomePage_Banner
HomePage_Banner
HomePage_Banner

ಪುತ್ತೂರು ತಾಲೂಕು ಸಹಾಯಕ ಯುವ ಸಬಲೀಕರಣ, ಕ್ರೀಡಾಧಿಕಾರಿಯಾಗಿ ರಾಮಕೃಷ್ಣ.ಎ.ಪಡುಮಲೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ತಾಲೂಕಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢ ಶಾಲೆಯ ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕ ರಾಮಕೃಷ್ಣ.ಎ. ಪಡುಮಲೆರವರು ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ದೈಹಿಕ ಶಿಕ್ಷಣದಲ್ಲಿ ಬಿಪಿಎಡ್ ಮತ್ತು ಎಮ್‌ಪಿಎಡ್ ಪದವಿ, ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಖೋಖೋ, ದೂರದ ಓಟದಲ್ಲಿ ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದು ಉತ್ತಮ ತರಬೇತುದಾರ ಹಾಗೂ ಕ್ರೀಡಾ ಸಂಘಟಕರಾಗಿದ್ದಾರೆ. ಇವರ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಇವರು ಸರಕಾರದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದೈಹಿಕ ಶಿಕ್ಷಣದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದ, ತುಳುನಾಟಕ ರಚನೆಗಾರ, ನಿರ್ದೇಶಕ, ಹಾಸ್ಯ ಮಿಮಿಕ್ರಿ ಕಲಾವಿದ ಹಾಗೂ ಮಂದಾರ ಕಲಾತಂಡ ಉಜಿರೆ ಇದರ ಪ್ರಧಾನ ಹಾಸ್ಯ ಕಲಾವಿದರಾಗಿದ್ದಾರೆ.

ತಾಲೂಕು ಜಿಲ್ಲಾ ಮಟ್ಟದ ತುಳುನಾಟಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಹಾಸ್ಯ ಕಲಾವಿದ, ಪೋಷಕ ನಟ ನಟಿ ಪ್ರಶಶ್ತಿ ಗಳಿಸಿದ್ದಾರೆ. ಯುವಜನ ಮೇಳಗಳ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿವಿಧ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿರುವ ಇವರು ಉತ್ತಮ ಭಾಷಣಗಾರರು ಆಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.