HomePage_Banner
HomePage_Banner
HomePage_Banner
HomePage_Banner

ಕೋವಿಡ್ ನಿಯಮ ಪಾಲನೆ-ಪುತ್ತೂರು ಜಾತ್ರೆ ಗದ್ದೆ ಸ್ಟಾಲ್‌ಗಳ ತೆರವಿಗೆ ಸೂಚನೆ – ಜ.19 ರಿಂದ ಮಹಾಲಿಂಗೇಶ್ವರ ದೇವಳದ ಗದ್ದೆಗೆ ಸಾರ್ವಜನಿಕ ಪ್ರವೇಶ ನಿಷೇಧ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೊರೋನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕುರಿತು ಜಿಲ್ಲಾಧಿಕಾರಿ ಆದೇಶ ನೀಡಿರುವ ಬೆನ್ನಲ್ಲೇ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಗದ್ದೆಯಲ್ಲಿ ಅಳವಡಿಸಲಾಗಿದ್ದ ಸ್ಟಾಲ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಸೂಚನೆ ನೀಡಿದ್ದಾರೆ.ಜೊತೆಗೆ ಏ.19ರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದಲ್ಲಿ ಎ.೧೭ರಂದು ಬ್ರಹ್ಮರಥೋತ್ಸವ ನಡೆದಿದ್ದು ಎ.18ರಂದು ದೇವರ ಅವಭೃತ ಸವಾರಿ ನಡೆದಿದೆ.ಜಾತ್ರೆ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ, ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಅಂತರ ಕಾಯ್ದುಕೊಂಡು ವಿವಿಧ ವ್ಯಾಪಾರ ಸಂತೆ ಸ್ಟಾಲ್‌ಗಳನ್ನು ಅಳವಡಿಸಲು ಅವಕಾಶ ನೀಡಲಾಗಿತ್ತು.ಅದರಂತೆ ಏ.17ರಂದು ಸ್ಟಾಲ್‌ಗಳಲ್ಲಿ ವ್ಯಾಪಾರ ವಹಿವಾಟು ನಡೆದಿತ್ತು.ಏ.18ರಂದೂ ಸ್ಟಾಲ್‌ಗಳಿಗೆ ಜನ ಭೇಟಿ ನೀಡಿ ವ್ಯಾಪಾರ ನಿರತರಾಗಿದ್ದರು.ಈ ನಡುವೆ ಕೋವಿಡ್ ನಿಯಮ ಪಾಲನೆ ಮಾಡುವ ಕುರಿತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರಿಗೆ ಕಟ್ಟುನಿಟ್ಡಿನ ಸೂಚನೆ ನೀಡಿ, ದೇವಳದ ಗದ್ದೆಯಲ್ಲಿ ಅಳವಡಿಸಲಾಗಿದ್ದ ಸ್ಟಾಲ್‌ಗಳನ್ನು ತೆರವುಗೊಳಿಸಲು ತಿಳಿಸಿದ್ದರು.ಮಾತ್ರವಲ್ಲದೆ ತಾನೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಪುತ್ತೂರಿಗೆ ಬರಲು ಸಿದ್ಧತೆ ನಡೆಸಿದ್ದರು.ಅದರ ಬೆನ್ನಲ್ಲೇ,ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಸ್ಟಾಲ್‌ಗಳಿಗೆ ತೆರಳಿ ಬಂದ್ ಮಾಡಲು ಸೂಚನೆ ನೀಡಿದರಲ್ಲದೆ, ಧ್ವನಿವರ್ಧಕದ ಮೂಲಕವೂ ಘೋಷಣೆ ಮಾಡಲಾಯಿತು.ಬಳಿಕ ದೇವಳದಿಂದ ಜಾತ್ರೆಗೆ ಸಂಬಂಧಿಸಿ ತೆರೆಯಲಾಗಿದ್ದ ಮಾಹಿತಿ ಕೇಂದ್ರದಿಂದ ರಾಜೇಶ್ ಬನ್ನೂರು ಅವರೂ ಈ ಕುರಿತು ಉದ್ಘೋಷಣೆ ಮಾಡಿದರು.
ಅದರ ಬೆನ್ನಲ್ಲೇ ಕೆಲವೊಂದು ಸ್ಟಾಲ್‌ಗಳವರು ಸ್ವಯಂ ಆಗಿ ತೆರವು ಮಾಡಲಾರಂಭಿಸಿದರು.ವ್ಯಾಪಾರ ಮಾಡಲೆಂದು ಬಂದಿದ್ದ ಸಾರ್ವಜನಿಕರೂ ಅಲ್ಲಿಂದ ಒಬ್ಬೊಬ್ಬರೇ ನಿರ್ಗಮಿಸಲಾರಂಭಿಸಿದರು.ಈ ಮಧ್ಯೆ ಮಳೆಯೂ ಸುರಿಯಲಾರಂಭಿಸಿತು.ಒಂದು ಹಂತದಲ್ಲಿ ಪ್ರಕ್ರಿಯೆ ಅಲ್ಲಿ ಸ್ಥಗಿತಗೊಂಡಿತು.ಸ್ಟಾಲ್‌ಗಳಲ್ಲಿ ಮತ್ತೆ ವ್ಯಾಪಾರ ವಹಿವಾಟು ಮುಂದುವರಿಯಲಾರಂಭಿಸಿದ್ದರಿಂದ ಸ್ಟಾಲ್‌ಗಳನ್ನು ಬಂದ್ ಮಾಡಿಸುವ ನಿಟ್ಟಿನಲ್ಲಿ ಕೊನೆಗೆ ಪೊಲೀಸರನ್ನೂ ಕರೆಸಲಾಯಿತು.ಪೊಲೀಸರೂ ಲಾಠಿ ಪ್ರದರ್ಶಿಸುತ್ತಾ ಎಚ್ಚರಿಕೆ ನೀಡುತ್ತಿದ್ದಂತೆ ಜಾತ್ರಾ ಗದ್ದೆಯಲ್ಲಿದ್ದ ನಾಗರಿಕರು ನಿರ್ಗಮಿಸಿದರು.ಸ್ಟಾಲ್‌ಗಳಲ್ಲಿಯೂ ವ್ಯವಹಾರ ಬಂದ್ ಆಯಿತು.
ಜ.19ರಿಂದ ದೇವಳದ ಗದ್ದೆಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ:
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಏ.19ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕರು ಗುಂಪು ಸೇರುವುದನ್ನು ತಡೆಯಲೆಂದು ಈ ಕ್ರಮಕೈಗೊಳ್ಳಲಾಗಿದೆ.
ಸಾರ್ವಜನಿಕರು ಜಾತ್ರಾ ಗದ್ದೆಗೆ ಆಗಮಿಸುವುದು, ಸಾಮಾಗ್ರಿಗಳ ಖರೀದಿ ಸ್ಟಾಲ್‌ಗಳ ಮುಂದೆ ಗುಂಪು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಜನರ ಚಲನವಲನ ಮತ್ತು ಸಂಪರ್ಕವನ್ನು ಆದಷ್ಟು ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗಿದೆ.ದೇವಳದ ಗದ್ದೆಯಲ್ಲಿ ವ್ಯಾಪಾರ ಸಂತೆ ಸ್ಟಾಲ್ ಇಟ್ಟವರು ತಕ್ಷಣ ತೆರವು ಮಾಡಬೇಕು.ಇಲ್ಲವಾದಲ್ಲಿ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.