HomePage_Banner
HomePage_Banner
HomePage_Banner
HomePage_Banner

ಇಚ್ಲಂಪಾಡಿ: ಗುಂಡ್ಯ ಹೊಳೆಯಲ್ಲಿ ಯುವಕರಿಬ್ಬರು ನೀರುಪಾಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೌಕ್ರಾಡಿ ಶಾಂತಿಬೆಟ್ಟು ನಿವಾಸಿ ಝಾಕಿರ್, ಸರಳಿಕಟ್ಟೆಯ ಮಹಮ್ಮದ್ ಸಿನಾನ್ ಮೃತ ದುರ್ದೈವಿಗಳು
  • ಸ್ಥಳೀಯ ಈಜುಗಾರರಿಂದ ಮೃತದೇಹ ಮೇಲಕ್ಕೆ

ನೆಲ್ಯಾಡಿ: ಇಚ್ಲಂಪಾಡಿ ಸಮೀಪ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಎ.೧೯ರಂದು ಸಂಜೆ ನಡೆದಿದೆ.

ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಉಮ್ಮರ್ ಹಾಗೂ ರುಕಿಯಾ ದಂಪತಿ ಹಿರಿಯ ಪುತ್ರ ಝಾಕಿರ್(೧೮ವ.) ಮತ್ತು ಉಮ್ಮರ್‌ರವರ ಸಹೋದರಿ ಅಸ್ಮಾ ಹಾಗೂ ಉಪ್ಪಿನಂಗಡಿ ಸಮೀಪದ ಬೆಳ್ತಂಗಡಿ ತಾಲೂಕಿನ ಸರಳಿಕಟ್ಟೆ ದಿ.ಇಬ್ರಾಹಿಂ ಮುಸ್ಲಿಯಾರ್‌ರವರ ಪುತ್ರ ಮಹಮ್ಮದ್ ಸಿನಾನ್(೨೦ವ.)ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೃತ ಝಾಕಿರ್‌ರವರ ತಂದೆ ಉಮ್ಮರ್‌ವರಿಗೆ ನೆಲ್ಯಾಡಿಯಲ್ಲಿ ಸ್ಟಾರ್ ಚಿಕನ್ ಸೆಂಟರ್ ಇದ್ದು ಸಿನಾನ್ ಇಲ್ಲಿಯೇ ಕೆಲಸ ಮಾಡುತ್ತಿದ್ದರು. ಉಮ್ಮರ್‌ರವರು ಇತ್ತೀಚೆಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದವರು ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದು ಹಿರಿಯ ಝಾಕಿರ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಎ.೧೯ರಂದು ಸಂಜೆ ವೇಳೆ ಝಾಕಿರ್ ಹಾಗೂ ಸಿನಾನ್‌ರವರು ಇಚ್ಲಂಪಾಡಿಗೆ ಆಡು ಖರೀದಿಸಲೆಂದು ಹೋದವರು ಇಚ್ಲಂಪಾಡಿ ಸಮೀಪ ಗುಂಡ್ಯ ಹೊಳೆ ಬದಿಯಲ್ಲಿ ಬಟ್ಟೆ, ಚಪ್ಪಲಿಗಳನ್ನು ಕಳಚಿ ಕಲ್ಲಿನ ಮೇಲೆ ಇಟ್ಟು ಹೊಳೆ ನೀರಿಗೆ ಸ್ನಾನಕ್ಕೆಂದು ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ನೀರು ಪಾಲಾಗಿದ್ದಾರೆ ಎಂದು ವರದಿಯಾಗಿದೆ.

ಕರೆ ಸ್ವೀಕರಿಸಿಲ್ಲ:
ಝಾಕಿರ್ ಹಾಗೂ ಸಿನಾನ್‌ರವರ ಮೊಬೈಲ್‌ಗೆ ಮನೆಯವರು ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ನೆಲ್ಯಾಡಿಯ ಕೆಲ ಯುವಕರು ಹುಡುಕಿಕೊಂಡು ಇಚ್ಲಂಪಾಡಿ ಕಡೆಗೆ ಬಂದಿದ್ದು ಈ ವೇಳೆ ಸ್ಥಳೀಯರೊಬ್ಬರು ಯುವಕರಿಬ್ಬರು ಹೊಳೆ ಬದಿಗೆ ತೆರಳಿರುವ ಬಗ್ಗೆ ಮಾಹಿತಿ ನೀಡಿದರು. ಬಳಿಕ ಹೊಳೆ ಬದಿ ಹುಡುಕಾಟ ನಡೆಸಿದ ವೇಳೆ ಬೈಕ್ ಹಾಗೂ ಅವರು ಕಳಚಿಟ್ಟ ವಸ್ತ್ರ, ಚಪ್ಪಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಈಜುಗಾರರಾದ ಜೋಬಿನ್, ಮೋಹನ್, ನವಾಝ್, ರೋಯಿ ಹಾಗೂ ರಿಜು ಎಂಬವರು ನೀರಿಗಿಳಿದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಇಬ್ಬರ ಮೃತದೇಹ ದೊರೆತಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಮ್ಮದ್ ಸಿನಾನ್‌ರವರು ತಾಯಿ ಅಸ್ಮಾ, ಓರ್ವ ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಮೃತ ಝಾಕಿರ್‌ರವರು ತಂದೆ, ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಆಳ ತಿಳಿಯದೆ ದುರ್ಘಟನೆ:
ಘಟನೆ ನಡೆದ ಸ್ಥಳವು ಅಕ್ರಮ ಮರುಳುಗಾರಿಕೆ ನಡೆಯುತ್ತಿದ್ದ ಪ್ರದೇಶ ಎಂಬ ಆರೋಪವು ಕೇಳಿಬಂದಿದೆ. ಈ ಮೊದಲು ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಪೊಲೀಸರು ನದಿಗೆ ನಿರ್ಮಿಸಿದ್ದ ರಸ್ತೆಯನ್ನು ಅಗೆದು ಬಂದ್ ಮಾಡಿದ್ದರು. ಆದರೂ ಮರಳುಗಾರಿಕೆ ನಿರಂತರ ನಡೆಯುತ್ತಿದೆ ಎನ್ನಲಾಗಿದ್ದು, ಆದ್ದರಿಂದಲೇ ನೀರಿನ ಆಳ ತಿಳಿಯದೇ ಈ ದುರ್ಘಟನೆ ನಡೆದಿದೆ ಎಂದು ದೂರು ವ್ಯಕ್ತವಾಗಿದೆ. ಇದೇ ಹೊಳೆಯ ಮೇಲ್ಭಾಗದಲ್ಲಿ ೨೦೨೦ರ ಮಾರ್ಚ್ ಕೊನೆ ವಾರದಲ್ಲಿ ಸ್ನಾನಕ್ಕಿಳಿದ ಇರ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.