HomePage_Banner
HomePage_Banner
HomePage_Banner
HomePage_Banner

ಕಂಬಳ ಕೂಟದ ಪದಕ ವೀರ ಬೋಳಂತೂರು ಕಾಟಿ ಇನ್ನಿಲ್ಲ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೋಳಂತೂರುಗುತ್ತು ದಿ|ಗಂಗಾಧರ ರೈ ಇವರಿಗೆ ಅವಿಭಜಿತ ಜಿಲ್ಲೆಯ ಕಂಬಳ ಕೂಟಗಳಲ್ಲಿ ಗರಿಷ್ಟ ಚಿನ್ನದ ಪದಕಗಳನ್ನು ತಂದು ಕೊಟ್ಟ ಜನಪ್ರಿಯ ಕೋಣ ಸುಮಾರು 28 ವರ್ಷ ಹರೆಯದ `ಬೋಳಂತೂರು ಕಾಟಿ’ ವಯೋಸಹಜ ಅನಾರೋಗ್ಯದಿಂದ ಕಂಬಳದ ಕರೆಯ ಪಯಣವನ್ನು ಮುಗಿಸಿ ಏ.19ರಂದು ಇಹಲೋಕ ತ್ಯಜಿಸಿದೆ.

ಬಾರ್ಕೂರು ದೇವದಾಸ ಗಡಿಯಾರ್ ಅವರಲ್ಲಿ 6 ವರ್ಷಗಳ ತನಕ ಬೆಳೆದಿದ್ದ ಕಾಟಿ ಬಳಿಕ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಬಾರಿಗೆ ಶಿರ್ವ ಕಂಬಳದಲ್ಲಿ ಚಿನ್ನದ ಪದಕ ಗೆದ್ದಿತ್ತು. ಅಂದು ಶಿರ್ವ ವಿಶ್ವನಾಥ ಪ್ರಭುರವರು ಕಾಟಿಯನ್ನು ಓಡಿಸಿದ್ದರು. ಜ್ಯೂನಿಯರ್ ವಿಭಾಗದಲ್ಲಿ ಮೂರು ವರ್ಷ ಅತ್ಯಧಿಕ ಪದಕ ಗೆದ್ದ ಕಾಟಿಗೆ ಜೊತೆ ಹುಡುಕುವುದೇ ಕಷ್ಟಕರವಾಗಿತ್ತು. ಇದೇ ವೇಳೆ ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ `ಮೋಡೆ’ ಕೋಣವನ್ನು ಜೊತೆಯಾಗಿ ಮಾಡಿದ ವರ್ಷ ಕಾಟಿಗೆ ಚಾಂಪಿಯನ್ ಪುರಸ್ಕಾರ ಲಭಿಸಿತ್ತು. 1998ರಲ್ಲಿ ಬಾರ್ಕೂರು ದೇವದಾಸ ಗಡಿಯಾರ್ ಅವರು ಕಾಟಿಯನ್ನು ಬೆಳುವಾಯಿ ಸದಾನಂದ ಶೆಟ್ಟರಿಗೆ ಹಸ್ತಾಂತರಿಸಿದರು. ಬಳಿಕ ಹಗ್ಗ ಹಿರಿಯ ವಿಭಾಗದಲ್ಲಿ `ಕಾಟಿ-ಮಾತಿಬೆಟ್ಟು’ ಜೋಡಿ ಗರಿಷ್ಟ ಬಹುಮಾನ ಗೆದ್ದುಕೊಂಡಿತ್ತು. 2001ರಲ್ಲಿ ಬೆಳುವಾಯಿ ಸದಾನಂದ ಶೆಟ್ಟರಿಂದ ಬೋಳಂತೂರು ಗಂಗಾಧರ ರೈ `ಕಾಟಿ ಮಾತಿಬೆಟ್ಟು’ ಜೋಡಿ ಖರೀದಿಸಿದ ಬಳಿಕ ನಿರಂತರ ಮೂರು ವರ್ಷ ಚಾಂಪಿಯನ್ ಪ್ರಶಸ್ತಿಗೆ ಪಾತ್ರವಾಗಿತ್ತು. ಪ್ರಾರಂಭದ 2 ವರ್ಷ ಅಜಿತ್ ಕುಮಾರ್ ಜೈನ್, ಬಳಿಕ ಅಶೋಕ್ ಕುಮಾರ್ ಜೈನ್‌ರವರು ಈ ಜೋಡಿಯನ್ನು ಓಡಿಸಿದ್ದರು. 2012ರ ತನಕ ಹಗ್ಗ ಹಿರಿಯ ವಿಭಾಗದಲ್ಲಿ ಓಡಿದ ಕಾಟಿ, 2015ರಲ್ಲಿ ಕನೆ ಹಲಗೆ ವಿಭಾಗದಲ್ಲಿಯೂ ಬಹುಮಾನ ಗೆದ್ದುಕೊಂಡಿತ್ತು. ಬಳಿಕ ಮಂಜೇಶ್ವರ ಉದ್ಯಾವರ, ಮುನ್ನೆ ಚಿತ್ರಾಪುರದ ಕುಟ್ಟಿ, ಬಿಲಿಯೂರು, ಗಂಗೆ ಮೊದಲಾದ ಕೋಣಗಳಿಗೆ ಜೋಡಿಯಾಗಿ ಪ್ರಶಸ್ತಿ ಪಡೆದಿದ್ದು, ಹಲವು ಮಂದಿ ಕಂಬಳ ಓಟಗಾರರು ಓಡಿಸಿದ್ದರು. ಕಳೆದ ಎಂಟು ವರ್ಷಗಳಿಂದ ಕಂಬಳಾಭಿಮಾನಿ ಅನೀಶ್ ನಾರ್ನಕೋಡಿ ಎಂಬವರು ಕಾಟಿಯನ್ನು ಆರೈಕೆ ಮಾಡುತ್ತಿದ್ದರು.

ಪುತ್ತೂರಿನ 25ನೇ ವರ್ಷದ ಕೋಟಿ-ಚೆನ್ನಯ ಕಂಬಳದಲ್ಲಿ ಸನ್ಮಾನ ಮಾಡಲಾಗಿತ್ತು…
ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಿಂದ ದೂರವಾಗಿ ವಿಶ್ರಾಂತಿಯಲ್ಲಿದ್ದ `ಬೋಳಂತೂರು ಕಾಟಿ’ಯು ಬೋಳಂತೂರಿನಲ್ಲಿ ರವಿವಾರ ತಡರಾತ್ರಿ ಅಸುನೀಗಿದ್ದು, ಸೋಮವಾರ ಬೆಳಿಗ್ಗೆ ಕಂಬಳಾಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಬೋಳಂತೂರು ಕಾಟಿಯ ಅದ್ವಿತೀಯ ಸಾಧನೆಗಾಗಿ ಪುತ್ತೂರಿನಲ್ಲಿ ಕಳೆದ 25 ವರ್ಷಗಳಿಂದ ಕೋಟಿ-ಚೆನ್ನಯ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೋಳಂತೂರುಗುತ್ತು ದಿ|ಗಂಗಾಧರ ರೈಯವರ `ಕಾಟಿ’ ಹೆಸರಿನ ಕೋಣಕ್ಕೆ ಅಂದು ಶಾಸಕರಾಗಿದ್ದ ವಿನಯ ಕುಮಾರ್ ಸೊರಕೆ, ಮುತ್ತಪ್ಪ ರೈ, ಸಚಿವರಾಗಿದ್ದ ಎ.ಮಂಜುರವರು ಶಾಲು ಹೊದಿಸಿ ಸನ್ಮಾನಿಸಿದ್ದರು. ಇತಿಹಾಸದಲ್ಲಿಯೇ ಕಾಟಿ(ಕೋಣ)ಗೆ ಸನ್ಮಾನ ಮಾಡುತ್ತಿರುವುದು ಅದೇ ಪ್ರಥಮವಾಗಿದ್ದು, ಪುತ್ತೂರಿನಲ್ಲಿ ನಡೆದ 25ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟದಲ್ಲಿ ಬೋಳಂತೂರು ಕಾಟಿಗೆ ಅದ್ದೂರಿಯಾಗಿ ನಡೆದ ಸನ್ಮಾನ ಜಿಲ್ಲೆಯಲ್ಲಿ ಗಮನ ಸೆಳೆದಿತ್ತು. `

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.