HomePage_Banner
HomePage_Banner
HomePage_Banner
HomePage_Banner

ಪುತ್ತೂರು ಕಮ್ಯೂನಿಟಿ ಸೆಂಟರ್‌ನ ನೂತನ ಕಚೇರಿ ಮತ್ತು ಕೌಂನ್ಸಿಲಿಂಗ್ ಸೆಂಟರ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕಿನ ಮತ್ತು ಸುತ್ತಮುತ್ತಲಿನ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ-ಮಾರ್ಗದರ್ಶನ-ಪ್ರೋತ್ಸಾಹ ಕೊಡುವ ಪುತ್ತೂರು ಕಮ್ಯೂನಿಟಿ ಸೆಂಟರ್‌ನ್ನು ಎ.20ರಂದು ಶಾಸಕ ಸಂಜೀವ ಮಠಂದೂರುರವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ಮತ್ತು ಯುವ ಸಮೂಹಕ್ಕೆ ಆತ್ಮೀಯ ಸಲಹೆ ನೀಡುವ ಕೌಂನ್ಸಿಲಿಂಗ್ ಸೆಂಟರನ್ನು ಪುತ್ತೂರು ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಹಾಜಿಯವರು ಉದ್ಘಾಟಿಸಿದರು. ಕ್ಯಾರಿಯರ್ ಗೈಡೆಂನ್ಸ್, ಅಸೆಸ್ ಮೆಂಟ್, ಸ್ಟಡೀ ಸ್ಕಿಲ್, ಮೊಟಿವೇಶನ್, ಪೇರೆಂಟಿಂಗ್, ಸಪೂರ್ಟಿವ್ ಸಿಸ್ಟಂ, ಸ್ಕ್ವಾಲರ್ಶಿಫ್, ಗೋಲ್ ಸೆಟ್ಟ್ ಪ್ರೊಗ್ರಂ ಗಳನ್ನು ಹೊಂದಿರುವ ಕಮ್ಯೂನಿಟಿ ಸೆಂಟರ್ ವಿಧ್ಯಾರ್ಥಿಗಳ ಕೌಂನ್ಸಿಲಿಂಗ್ ಕೂಡ ನಡೆಸಲಿದೆ.

ಶಾಸಕ ಸಂಜೀವ ಮಠಂದೂರು ರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದ ಅತೀ ಅಗತ್ಯವಿದೆ. ಅವರ ಶೈಕ್ಷಣಿಕ ಬದುಕು, ಸಾಮಾಜಿಕ ಬದುಕು ಮತ್ತು ವೃತ್ತಿ ಬದುಕಿಗೂ ಉತ್ತಮ ಮಾರ್ಗದರ್ಶನ ಅತೀ ಮುಖ್ಯ. ಅದಕ್ಕಾಗಿ ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಆರಂಭವಾದ ಈ ಕಮ್ಯೂನಿಟಿ ಸೆಂಟರ್ ತಾಲೂಕಿನ ಬೇಡಿಕೆಯನ್ನು ಪೂರೈಸಿದೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು. ಭವಿಷ್ಯದ ತಲೆಮಾರನ್ನು ರೂಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲೆ ಇದೆ. ಆ ಕಾರಣಕ್ಕಾಗಿ, ವಿಧ್ಯಾರ್ಥಿ ಸಮೂಹಕ್ಕೆ ಸರಿಯಾದ ಸಲಹೆ -ಸೂಚನೆ ಈ ಕಮ್ಯುನಿಟಿ ಸೆಂಟರ್ ಧರ್ಮಾತೀತವಾಗಿ ನೀಡುತ್ತದೆ ಎಂದು ಕೇಳಿ ಸಂತೋಷವಾಯಿತು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ, ರೋಟರಿ ಪುತ್ತೂರು ಇದರ ಅಧ್ಯಕ್ಷ ಝೆವಿಯರ್ ಡಿಸೋಝರವರು ಮಾತನಾಡಿ, ಸಮಾಜಕ್ಕೆ ಈಗ ಯಾವುದರ ಅಗತ್ಯ ಇದೆಯೋ ಅದನ್ನು ಈ ಕಮ್ಯೂನಿಟಿ ಸೆಂಟರ್ ರೂಪಿಸಿದೆ. ಅದರಲ್ಲೂ ಕೆಲವು ಸಮುದಾಯದ ಅನಿವಾರ್ಯತೆಯನ್ನು ಗುರುತಿಸಿ ವ್ಯವಸ್ಥಿತ ಕಾರ್ಯಾಚರಣೆ ಮೂಲಕ ಸಂಸ್ಥೆ ದುಡಿಯುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕಮ್ಯೂನಿಟಿ ಸೆಂಟರ್‌ನ ಯೋಜನೆಯನ್ನು ರಫೀಕ್ ರೋಯಲ್ ರವರು ವಿವರಿಸಿದರು.

ಕಮ್ಯೂನಿಟಿ ಸೆಂಟರ್ ಮೂಲಕ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಗೆ ಸ್ಪೋರ್ಟ್ ವಸ್ತ್ರ ಕ್ಕಾಗಿ ನಗದನ್ನು ಸೆಂಟರ್ ನ ಮುಖ್ಯಸ್ಥರಾದ ಹನೀಫ್ ಪುತ್ತೂರು ರವರು ಶಾಸಕರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಣಾಧಿಕಾರಿ ಲೊಕೇಶ್ ರವರು, ಕೆಡಿಪಿ ಸದಸ್ಯ ಅಬ್ದುಲ್ಲ ಕುಂಞ, ರೈತ ಮೋರ್ಚಾದ  ಸುರೇಶ್ ಕನ್ನರಾಯ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.