HomePage_Banner
HomePage_Banner
HomePage_Banner
HomePage_Banner

ಮಾದರಿ ಹಾಲು ಉತ್ಪಾದಕ ರೈತರೆಂದು ತೋರಿಸಿ ಕೊಡುವ ಕೆಲಸ ಆಗಬೇಕು; ಮೇವು ಕತ್ತರಿಸುವ ಯಂತ್ರದ ವಿತರಣೆಯಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಕಾರ ಕೊಡುವ ಸವಲತ್ತನ್ನು ಕೃಷಿಕರು, ಹೈನುಗಾರರು ಸರಿಯಾಗಿ ಬಳಕೆ ಮಾಡಿಕೊಂಡು ಮಾದರಿ ಹಾಲು ಉತ್ಪಾದಕ ರೈತರೆಂದು ತೋರಿಸಿ ಕೊಡುವ ಆಗಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಇಲ್ಲಿನ ಪಶು ಸಂಗೋಪನಾ ಇಲಾಖೆಯ ವಠಾರದಲ್ಲಿ ಎ.೨೦ರಂದು ತಾಲೂಕಿನ ಆಯ್ದ ೧೫ ಮಂದಿ ಹೈನುಗಾರರಿಗೆ ಮೇವು ಕತ್ತರಿಸುವ ಯಂತ್ರವನ್ನು ವಿತರಿಸಿ ಮಾತನಾಡಿ ಅವರು ಮಾತನಾಡಿದರು. ಸರಕಾರ ಇವತ್ತು ಬೇರೆ ಬೇರೆ ಸವಲತ್ತನ್ನು ಸಹಾಯಧನದಲ್ಲಿ ಕೊಡುತ್ತಾ ಇದೆ. ಇವತ್ತು ಕೃಷಿಕರ ಬದುಕು ಕೃಷಿ ಕೂಲಿ ಕಾರ್ಮಿಕರನ್ನು ಅವಲಂಬಿತವಾಗಿದೆ. ಕೂಲಿ ಕಾರ್ಮಿಕರ ಸಮಸ್ಯೆ ಇರುವ ಸಂದರ್ಭದಲ್ಲಿ ಒಂದಷ್ಟು ಯಾಂತ್ರಿಕೃತೆಯನ್ನು ರೈತರು ಅಳವಡಿಸಬೇಕು. ಯಾಂತ್ರಿಕತೆಯ ಮೂಲಕ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬಹುದು ಎಂಬ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಾ ನೀಡಲಾಗುತ್ತದೆ. ಕೃಷಿಕರು, ಹೈನುಗಾರರು ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಎಂರು. ಪಶು ವೈದ್ಯಾಧಿಕಾರಿ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.