HomePage_Banner
HomePage_Banner
HomePage_Banner
HomePage_Banner

ನೆಹರುನಗರ: ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ನಿಂದ `ಪ್ರಶಾಂತಿ ಸದ್ಭಾವನಾ ಜ್ಞಾನ ಯಜ್ಞ’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಶಾಂತಿ ಸದ್ಭಾವನಾ ಟ್ರಸ್ಟ್ (ರಿ) ಪುತ್ತೂರು ವತಿಯಿಂದ ಜರುಗಿದ `ಪ್ರಶಾಂತಿ ಸದ್ಭಾವನಾ ಜ್ಞಾನ ಯಜ್ಞ’ ಆಧ್ಯಾತ್ಮಿಕ ಕಾರ್ಯಕ್ರಮವು ನೆಹರುನಗರದ ಸಮೀಪವಿರುವ ಟ್ರಸ್ಟಿನ ನೋಂದಾಯಿತ ಕಛೇರಿ ಆವರಣದಲ್ಲಿ ಸಂಪನ್ನಗೊಂಡಿತ್ತು.




ನಿರಂತರವಾಗಿ ೫ ದಿನಗಳ ಕಾಲ ಜರುಗುವ ಈ ಅಧ್ಯಾತ್ಮಿಕ ಕಾರ್ಯಕ್ರಮವು ಹೋಮ, ಹವನ, ಪಾರಾಯಣ, ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಮೊದಲ ದಿನವಾದ ಎ.೨೦ರಂದು ೨೧ ಮೋದಕ ಸಂಕಷ್ಟ ನಾಶಕ ಗಣಪತಿ ಹೋಮ ಹಾಗೂ ನವಗ್ರಹ ಹೋಮ ಕಾರ್ಯಗಳು ಸಾಂಗವಾಗಿ ನೆರೆವೇರಿದವು. ಈ ಸಂದರ್ಭ ಸಾನಿಧ್ಯ ವಹಿಸಿದ್ದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಗಳು ತಮ್ಮ ಅನುಗ್ರಹ ಉಪನ್ಯಾಸದಲ್ಲಿ ಇಂತಹ ಅಧ್ಯಾತ್ಕಿಕ ಕಾರ್ಯಕ್ರಮಗಳ ಅಗತ್ಯತೆ ಬಗ್ಗೆ ನುಡಿದರು. ಸೇರಿದ ಸದ್ಭಕ್ತರಿಗೂ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಕೋವಿಡ್ ೧೯ರ ನಿಯಮ ಪಾಲನೆಯೊಂದಿಗೆ ಸೇರಿದ ಸದ್ಭಕ್ತರು ಅತ್ಯಂತ ಶಿಸ್ತಿನಿಂದ ಶ್ರಧ್ಧಾ ಭಕ್ತಿಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದು ವಿಶೇಷ ಗಮನ ಸೆಳೆಯಿತು. ಮುಂದಿನ ನಾಲ್ಕು ದಿನಗಳಲ್ಲಿ ಶ್ರೀರಾಮ ತಾರಕ ಹೋಮ, ಪನಮಾನ ಹೋಮ, ಗಾಯತ್ರಿ ಪುರಸ್ಸರ ಹೋಮ, ಪಂಚಾದುರ್ಗಾ ಹೋಮ ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.