HomePage_Banner
HomePage_Banner
HomePage_Banner
HomePage_Banner

ಪುತ್ತೂರು ಜಾತ್ರೆಯಲ್ಲಿ ಬೆಳ್ಳಿಪ್ಪಾಡಿ ಮನೆತನಕ್ಕೆ ಗೌರವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಎ.೧೭ರಂದು ಬ್ರಹ್ಮರಥೋತ್ಸವದ ದಿನದಂದು ಸಂಜೆ ಬೆಳ್ಳಿಪ್ಪಾಡಿ ಮನೆತನದವರಿಗೆ ಗೌರವ ಸಮ್ಮಾನ ಕಾರ್ಯಕ್ರಮ ದೇವಳದ ವತಿಯಿಂದ ನಡೆಯಿತು.

ದೇವಳದ ಆಡಳಿತಕ್ಕೆ ಸಂಬಂಧಿಸಿ ಬೆಳ್ಳಿಪ್ಪಾಡಿ ಮನೆತನದವರಿಗೆ ಸಂಬಂಧವಿದ್ದು, ಈ ಹಿನ್ನೆಲೆಯಲ್ಲಿ ವರ್ಷಂಪ್ರತಿ ಈ ಗೌರವ ನೀಡಲಾಗುತ್ತಿದೆ. ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಸೇರಿದಂತೆ ಬೆಳ್ಳಿಪ್ಪಾಡಿ ಮನೆತನದ ಗಣ್ಯರನ್ನು ಬ್ಯಾಂಡ್ ವಾಲಗದಲ್ಲಿ ದೇವಸ್ಥಾನಕ್ಕೆ ಕರೆ ತಂದು ದೇವಳದಲ್ಲಿ ಪ್ರಸಾದ ನೀಡಿ ಗೋಪುರಲ್ಲಿ ಕುಳ್ಳಿರಿಸಿ ಸೀಯಾಳ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ  ಬೆಳ್ಳಿಪ್ಪಾಡಿ ಮನೆತನದ ರಘುನಾಥ ರೈ, ವಿಶ್ವನಾಥ ರೈ ಬೆಳ್ಳಿಪ್ಪಾಡಿ, ಸುರೇಶ್ ರೈ ಬೆಳ್ಳಿಪ್ಪಾಡಿ, ಶಕೀಲಾ, ರಶ್ಮೀ ರೈ, ರಿದಿ ರೈ,  ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಬಿ.ಎಸ್. ಸಂಕಪ್ಪ ರೈ, ಗೋಪಾಲ ರೈ, ಸುಭಾಸ್ ರೈ ಬೆಳ್ಳಿಪ್ಪಾಡಿ, ತುಳು ಚಿತ್ರನಟ ಬೆಳ್ಳಿಪ್ಪಾಡಿಯ ಚೇತನ್ ಮಾಣಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ್ ಶೆಟ್ಟಿ ಕಾವು, ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ರವಿಪ್ರಸಾದ್ ಶೆಟ್ಟಿ ಬನ್ನೂರು, ರೋಶನ್ ರೈ ಬನ್ನೂರು, ಜಗದೀಶ್ ಕಜೆ, ಮಹೇಶ್ಚಂದ್ರ ಸಾಲಿಯಾನ್, ಸದಾನಂದ ಶೆಟ್ಟಿ ಕೂರೇಲು  ಮತ್ತಿತರರು ಅವರ ಜೊತೆಗೆ ಬಂದಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ರಾಮಚಂದ್ರ ಕಾಮತ್,ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್ ರಾವ್, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ ಅವರು ಬೆಳ್ಳಿಪ್ಪಾಡಿ ಮನೆತನಕ್ಕೆ ಗೌರವ ನೀಡಿದರು. ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವಿ.ಎಸ್ ಭಟ್ ಪ್ರಸಾದ ವಿತರಣೆ ಮಾಡಿದರು. ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.