HomePage_Banner
HomePage_Banner
HomePage_Banner
HomePage_Banner

ಕೋವಿಡ್ 2ನೇ ಅಲೆ ತಡೆಗೆ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ – ಇಂದಿನಿಂದಲೇ(ಎ.21) ನೈಟ್ ಕರ್ಫ್ಯೂ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎ.21ರಿಂದ ಮೇ 4 ರವರೆಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ ಪ್ರಕಟ
  • ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ

ಬೆಂಗಳೂರು: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎ.21ರ ರಾತ್ರಿ 9ರಿಂದ ಮೇ 4ರ ಬೆಳಗ್ಗೆ 6ರವರೆಗೆ ಅನ್ವಯವಾಗುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಎ.21ರಿಂದ ರಾಜ್ಯಾದ್ಯಂತ ಪ್ರತಿ ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ನೈಟ್ ಕರ್ಫ್ಯೂ ರಾತ್ರಿ 9 ರಿಂದ ಬೆಳಗ್ಗೆ 6 ರ ವರೆಗೂ ಇರಲಿದೆ. ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಶಾಲೆ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸ್ವಿಮ್ಮಿಂಗ್ ಪೂಲ್, ಸಿನಿಮಾ ಹಾಲ್, ಶಾಪಿಂಗ್ ಮಾಲ್, ಯೋಗ ಕೇಂದ್ರ, ಜಿಮ್, ಕ್ರೀಡಾ ಸಂಕೀರ್ಣ, ಪಾರ್ಕ್, ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಾಗುವುದು. ದೇವಸ್ಥಾನದಲ್ಲಿ ಅರ್ಚಕರಿಗಷ್ಟೇ ಅವಕಾಶ ನೀಡಲಾಗಿದೆ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್ ಅವಕಾಶ ನೀಡಲಾಗಿದೆ. ನಿರ್ಮಾಣ ಹಂತದ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸೆಲೂನ್, ರೇಶನ್ ಅಂಗಡಿ, ಆಹಾರ, ತರಕಾರಿ, ದಿನಸಿ ಅಂಗಡಿ, ಬ್ಯಾಂಕ್, ಎಟಿಎಮ್, ಇನ್ಶೂರೆನ್ಸ್ ಕಚೇರಿ, ಇ-ಕಾಮರ್ಸ್, ಪೆಟ್ರೋಲ್ ಬಂಕ್‌ಗಳು ತೆರೆಯಲು ಅವಕಾಶವಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಚಾರ ನಿಷೇಧಿಸಲಾಗಿದೆ. ಬಸ್, ಮ್ಯಾಕ್ಸಿ ಕ್ಯಾಬ್ ಗಳಲ್ಲಿ ಶೇ.೫೦ರಷ್ಟು ಅವಕಾಶ. ಸಾಧ್ಯವಾದಷ್ಟು ಕನಿಷ್ಠ ಸಿಬ್ಬಂದಿಗಳಿಗೆ ಅವಕಾಶ ನೀಡಿ ಎಲ್ಲಾ ಖಾಸಗಿ ಕಚೇರಿಗಳು, ಕಂಪೆನಿಗಳು, ಸಂಘಟನೆಗಳು ಕಾರ್ಯಾಚರಿಸಬಹುದು. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಮದುವೆ ಸಮಾರಂಭಗಳಿಗೆ ಕೇವಲ ೫೦ ಜನರಿಗೆ, ಅಂತ್ಯಕ್ರಿಯೆಗೆ ೨೦ ಜನರಿಗೆ ಅವಕಾಶ ನೀಡಲಾಗಿದೆ.

ಲಾಕ್‌ಡೌನ್ ಕೊನೆಯ ಅಸ್ತ್ರ: ಮೋದಿ
ಕೋವಿಡ್ ಎರಡನೇ ಅಲೆ ದೇಶದಲ್ಲಿ ತೂಫಾನ್ ರೀತಿಯಲ್ಲಿ ಹರಡುತ್ತಿದೆ. ಜನರ ರಕ್ಷಣೆಗಾಗಿ ಸರ್ಕಾರ ಆಕ್ಸಿಜನ್ ಉತ್ಪಾದನೆ ಮತ್ತು ಪೂರೈಕೆಗೆ ಕ್ರಮ ಕೈಗೊಂಡಿದೆ. ದೇಶವನ್ನು ಲಾಕ್‌ಡೌನಿಂದ ಬಚಾವ್ ಮಾಡಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರ ಹೋಗಬೇಡಿ. ಲಾಕ್‌ಡೌನ್ ಎನ್ನುವುದು ಕೊನೆಯ ಅಸ್ತ್ರ ಎಂದು ಪ್ರಧಾನಿ ತಿಳಿಸಿದ್ದಾರೆ. ದೇಶವನ್ನು ಉzಶಿಸಿ ಮಂಗಳವಾರ ರಾತ್ರಿ ಮಾತನಾಡಿದ ಅವರು, ಇನ್ನು ಕೋವಿಡ್ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಯಲ್ಲಿ ಬೆಡ್‌ಗಳ ಹೆಚ್ಚಳದ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ. ನಮ್ಮ ದೇಶದಲ್ಲಿ ವಿಶ್ವದ ಮಟ್ಟದಲ್ಲಿ ಅತಿ ಹೆಚ್ಚು ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ವಿಜ್ಞಾನಿಗಳು ಅತೀ ಕಡಿಮೆ ಸಮಯದಲ್ಲಿ ಲಸಿಕೆಯನ್ನು ಕಂಡು ಹಿಡಿದಿದ್ದಾರೆ. ಈ ಮೂಲಕ ಲಸಿಕೆ ಅಭಿಯಾನದ ಮೂಲಕ ವೇಗವಾಗಿ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ ಎಂದು ಮೋದಿ ತಿಳಿಸಿದರು. ವ್ಯಾಕ್ಸಿನ್ ಅನ್ನು ಪ್ರತಿಯೊಬ್ಬ ಪ್ರಜೆಗೂ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ದಯಮಾಡಿ ಯಾರೂ ಗುಳೆ ಹೋಗಬೇಡಿ. ದೇಶದಲ್ಲಿ ನೀವು ಎಲ್ಲೇ ಇದ್ದರೂ ಅಲ್ಲಿಯೇ ಲಸಿಕೆ ಪಡೆಯಬಹುದು. ದೇಶದಲ್ಲಿ ಸಾಕಷ್ಟು ಮಟ್ಟದಲ್ಲಿ ಪಿಪಿಯಿ ಕಿಟ್ ಗಳನ್ನು ಉತ್ಪಾದನೆ ಮಾಡುತ್ತಿದೆ. ದೇಶದ ಯುವಕರೇ ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರಕ್ಕೆ ಕೈಜೋಡಿಸಿ ಎಂದು ಮೋದಿ ಮನವಿ ಮಾಡಿದರು.

  • ಹೊಸ ಮಾರ್ಗಸೂಚಿ ವಿವರ:
  • ರಾಜ್ಯದಲ್ಲಿ ಸೆಕ್ಷನ್ 144 ಜಾರಿ, ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ ಅವಕಾಶ
  • ಶನಿವಾರ – ಭಾನುವಾರ ದಿನಸಿ, ತರಕಾರಿ, ಹಾಲು ಅಂಗಡಿಗಳು ೬ರಿಂದ ೧೦ರವರೆಗೆ ಮಾತ್ರ ಓಪನ್
  • ಶಾಲೆ – ಕಾಲೇಜು, ಸಿನಿಮಾ ಹಾಲ್, ಮಾಲ್, ಸ್ವಿಮ್ಮಿಂಗ್ ಪೂಲ್, ಧಾರ್ಮಿಕ ಸ್ಥಳ, ಹೋಟೆಲ್ ಬಂದ್
  • ಬಾರ್, ಲಿಕರ್ ಶಾಪ್‌ನಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ
  • ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಲಾಗಿದೆ
  • ಬೆಂಗಳೂರಿನ ಮಾರುಕಟ್ಟೆಗಳನ್ನು 14 ದಿನಗಳವರೆಗೂ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.