HomePage_Banner
HomePage_Banner
HomePage_Banner
HomePage_Banner

ಕೆದಂಬಾಡಿ ಸನ್ಯಾಸಿಗುಡ್ಡೆಯಲ್ಲಿ ಶಿಲಾಮಯ ಶ್ರೀರಾಮ ಮಂದಿರ ನಿರ್ಮಾಣ | ಗರ್ಭಗುಡಿಯ ಶಿಲಾ ವೈಭವದ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆಯಲ್ಲಿ ನೂತನ ಶಿಲಾಮಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಮಂದಿರದ ಗರ್ಭಗುಡಿಗೆ ಶಿಲಾ ಮೆರವಣಿಗೆ ಎ.೨೦ ರಂದು ಸಂಜೆ ನಡೆಯಿತು.


ಕುಂಬ್ರ ಅಶ್ವತ್ಥ ಕಟ್ಟೆಯ ಬಳಿಯಲ್ಲಿ ಶಿಲಾ ಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸನ್ಯಾಸಿಗುಡ್ಡೆ ಗಣಪತಿ ಭಟ್‌ರವರು ಆರತಿ ಮಾಡಿ, ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಕರುಣಾಕರ ರೈ ಅತ್ರೆಜಾಲುರವರು ಶಿಲೆಗೆ ಹೂ ಹಾರ ಹಾಕವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕುಂಬ್ರ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮತಿ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ, ಪ್ರ.ಕಾರ್ಯದರ್ಶಿ ರಾಜೇಶ್ ರೈ ಪರ್ಪುಂಜ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಲಲಿತಾ ಗಣಪತಿ ಭಟ್ ಸನ್ಯಾಸಿಗುಡ್ಡೆ, ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಪದಾಧಿಕಾರಿಗಳು, ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು. ಸನ್ಯಾಸಿಗುಡ್ಡೆಯಲ್ಲಿ ಮಂದಿರದ ಪುರೋಹಿತ ಕೃಷ್ಣಕುಮಾರ್ ಉಪಾಧ್ಯಾಯ ಪಟ್ಲಮೂಲೆಯವರು ವೈಧಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಕೋವಿಡ್ ನಿಯಮದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತಾಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಇತಿಹಾಸ ಪ್ರಸಿದ್ಧ ಮಂದಿರ
ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಕೆದಂಬಾಡಿಬೀಡು ಅಬ್ಬಯ್ಯ ಬಲ್ಲಾಳ್ ಎಂಬವರು ೧೯೫೧ ರಲ್ಲಿ ಈ ಮಂದಿರವನ್ನು ಆರಂಭಿಸಿದ್ದರು. ಆ ಬಳಿಕ ೧೯೯೦ ರಲ್ಲಿ ಮಂದಿರಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಯಿತು. ಸುಮಾರು ೩೦ ವರ್ಷಗಳ ಹಿಂದೆ ಸನ್ಯಾಸಿಗುಡ್ಡೆಯಲ್ಲಿ ವಾಸವಿದ್ದ ಓರ್ವ ಯೋಗಿ ಪುರುಷ ಸದ್ಗುರು ಡಾ.ಎಸ್.ಆರ್.ಗೋಪಾಲನ್ ನಾಯರ್ ಎಂಬವರು ಸ್ಥಳ ತೋರಿಸಿ ಮಂದಿರ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಇದೀಗ ನೂತನ ಶಿಲಾಮಯ ಮಂದಿರ ನಿರ್ಮಾಣವಾಗುತ್ತಿದೆ. ಜ್ಯೋತಿಷಿ ಸ್ವಾಮಿನಾಥನ್ ಪಣಿಕ್ಕಾರ್ ಎಂಬವರ ಪ್ರಶ್ನಾಚಿಂತನೆಯಂತೆ ನೂತನ ಮಂದಿರ ನಿರ್ಮಾಣ ನಡೆಯುತ್ತಿದೆ. ವಾಸ್ತು ಶಿಲ್ಪಿ ಜಗನ್ನೀವಾಸ ರಾವ್‌ರವರ ಮಾರ್ಗದರ್ಶನ, ಉಪ್ಪಿನಂಗಡಿ ಭಗವತಿ ಶಿಲ್ಪಾಕಲಾ ಕೇಂದ್ರದ ವಿಜಯರವರು ಶಿಲ್ಪಿಯಾಗಿದ್ದಾರೆ. ಅಂದಾಜು ೪೫ ಲಕ್ಷ ರೂಪಾಯಿ ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.