HomePage_Banner
HomePage_Banner
HomePage_Banner
HomePage_Banner

ಮೇಗಿನಪಂಜ: ಹಾಳೆ ತಟ್ಟೆ ತಯಾರಿಕಾ ಘಟಕ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಸುಮಾರು 5 ವರುಷಗಳಿಂದ ಆರ್ಯಾಪು ಗ್ರಾಮದ ಕುಂಜೂರು ಸಮೀಪದ ಸೂರಜೆ ಎಂಬಲ್ಲಿ ತಾರನಾಥ ನಾಯ್ಕ ಮೇಗಿನಪಂಜ ಇವರ ಮಾಲಕತ್ವದ ಅಮ್ಮ ಹಾಳೆ ತಟ್ಟೆ ತಯಾರಿಕಾ ಘಟಕ ಏ. 21 ರಂದು ಸ್ಥಳಾಂತರಗೊಂಡು ಆರ್ಯಾಪು ಗ್ರಾಮದ ಮೇಗಿನಪಂಜ ಇಲ್ಲಿ ಶುಭಾರಂಭಗೊಂಡಿತು.

ಸಂಸ್ಥೆಯನ್ನು ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ವಿಶ್ವನಾಥರವರು ದೀಪ ಬೆಳಗಿಸಿ ಶುಭ ಹಾರೈಸಿ ಮಾತನಾಡಿ ,ಉತ್ತಮ ರೀತಿಯ ಸೇವೆಯೊಂದಿಗೆ ,ಗುಣಮಟ್ಟವುಳ್ಳ ಉತ್ಪನ್ನ ನೀಡಿ ಜನಮಾನಸದಲ್ಲಿ ಹೆಸರುಗಳಿಸಿಗೊಂಡು ಅಭಿವೃಧ್ಧಿ ಹೊಂದಲಿ ಎಂದು ಹೇಳಿದರು.


ಅರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ವಸಂತ್ ಶ್ರೀ ದುರ್ಗಾ ,ಶ್ರೀನಿವಾಸ ರೈ ಒಳತ್ತಡ್ಕ ,ರುಕ್ಮಯ್ಯ ಕುಲಾಲ್ ಗೆಣಸಿನ ಕುಮೇರ್ ,ದೇವಕಿ ಒಳತ್ತಡ್ಕ ,ಗೀತಾ ಸಾಮೆತ್ತಡ್ಕ ,ಕೃಷಿಕ ಶಶಿರಾಜ್ ಚಿಲ್ಮೇತ್ತಾರು ,ಗೋವಿಂದ ಭಟ್ ಮತ್ತು ಪದ್ಮಶ್ರೀ ಗೋವಿಂದ ಭಟ್ ಸೂರಜೆ ,ನಾರಯಣ ದೇವಾಡಿಗ ,ಏರ್ ಬಿಲ್ಟ್ ಅಟೋಮೇಶನ್ ಸಿಸ್ಟಮ್ಸ್ ಬೆಂಗಳೂರು ಇದರ ಮಾಲಕ ನಾಗೇಶ್ ಆರ್, ಮಾಲಕ ತಾರನಾಥರವರ ತಂದೆ ನಿವೃತ್ತ ಅಮೀನ್ ನಾರಯಣ ನಾಯ್ಕ ,ಸಹೋದರ ಕ್ಯಾಂಪ್ಕೋ ಉದ್ಯೋಗಿ ಪದ್ಮನಾಭ ನಾಯ್ಕ , ಪ್ರೇಮಾ ಪದ್ಮನಾಭ ನಾಯ್ಕ ಮಕ್ಕಳಾದ ಲಾವಣ್ಯ ,ಪ್ರೇಕ್ಷಿತ್ ,ಸಹೋದರಿ ಮೋಹಿನಿ ಜಾನಪ್ಪ ಹಾಗೂ ಪುತ್ರಿ ಪ್ರೀತಿಕಾ ಸಹಿತ ಹಲವಾರು ಅತಿಥಿಗಳು ಇದ್ದರು.

ಮಧು ಭಟ್ ಕುಂಜೂರು ಧಾರ್ಮಿಕ ಕೈಂಕರ್ಯ ನೇರವರಿಸಿದರು ,ಕುಸುಮವತಿ ತಾರನಾಥ ,ಕುಮಾರಿ ಲಾಸ್ಯ ಹಾಗೂ ಉತ್ತಮ್ ಕೃಷ್ಣ ಅತಿಥಿಗಳನ್ನು ಸ್ವಾಗತಿಸಿ ,ವಂದಿಸಿರು.

ಸಭೆ ,ಸಮಾರಂಭಗಳಿಗೆ ಬೇಕಾಗುವಂಥ ಎಲ್ಲಾ ಮಾದರಿಯ ,ಅತ್ಯುತ್ತಮ ಗುಣಮಟ್ಟ ಇರುವಂಥ ಹಾಳೆ ತಟ್ಟೆಗಳು ,ಉತ್ತಮ ದರದಲ್ಲಿ ಒದಗಿಸುವಂಥ ಭರವಸೆಯನ್ನು ಸಂಸ್ಥೆಯು ನೀಡಲು ಸದಾ ತಯಾರಿಯಾಗಿರುತ್ತದೆ.
ಮಾಲಕರು, ಅಮ್ಮ ಹಾಳೆ ತಟ್ಟೆ ತಯಾರಿಕಾ ಘಟಕ , ಮೊ 9901213191

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.