HomePage_Banner
HomePage_Banner
HomePage_Banner
HomePage_Banner

ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಂದೂಡಿಕೆ- ಅಶೋಕ್ ರೈ | ಪ್ರಶ್ನಾ ಚಿಂತನೆ ನಡೆಸಿ ಮುಂದಿನ ದಿನಾಂಕ ನಿಗದಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಸರಕಾರದ ಕೋವಿಡ್ 19 ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ದೇವಳದ ಬ್ರಹ್ಮಕಲಶೋತ್ಸವ ಎಪ್ರಿಲ್ 24ರಿಂದ 30ರವರೆಗೆ ನಡೆಯಬೇಕಿತ್ತು. ಸಕಲ ಸಿದ್ಧತೆಗಳೂ ನಡೆದಿತ್ತು. ಆದರೆ, ಕೊರೋನಾದ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಬ್ರಹ್ಮಕಲಶೋತ್ಸವವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಅಶೋಕ್ ಕುಮಾರ್ ರೈ ಅವರು ದೇವಳದ ‘ಚಿನ್ಮಯಿ’ ಸಭಾಂಗಣದಲ್ಲಿ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮುಂದೆ ಪ್ರಶ್ನಾ ಚಿಂತನೆ ನಡೆಸಿ ಬ್ರಹ್ಮಕಲಶದ ದಿನಾಂಕ‌ ನಿಗದಿ ಪಡಿಸಲಾಗುವುದು ಎಂದು ಅವರು ಈ ವೇಳೆ ಮಾಹಿತಿ ನೀಡಿದರು.

ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲಾಗಿತ್ತು. ಕಳೆದ ವರ್ಷವೇ ದೇವಳದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಗಳು ನಡೆಯಬೇಕಿತ್ತಾದರೂ, ಕೋವಿಡ್ ೧೯ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಇನ್ನೇನು ಬ್ರಹ್ಮಕಲಶೋತ್ಸವಕ್ಕೆ ಕೇವಲ ೨ ದಿನಗಳಷ್ಟೇ ಬಾಕಿ ಇದೆ ಎನ್ನುವಾಗ ಶ್ರೀ ದೇವಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಲ್ಪಟ್ಟಿರುವುದು ಭಕ್ತ ಸಮೂಹದಲ್ಲಿ ಖೇದವನ್ನುಂಟುಮಾಡಿದೆ ಎಂದು ಹೇಳಿದ ಅಶೋಕ್ ರೈಯವರು

ಸುಮಾರು 32 ವಿವಿಧ ಸಮಿತಿಗಳು ಹಗಲಿರುಲೆನ್ನದೇ ಈ ಪುಣ್ಯ ಕಾರ್ಯವನ್ನ ಸಾಂಗವಾಗಿ ನೆರವೇರಿಸಲು ಕಳೆದ ಹಲವಾರು ದಿನಗಳಿಂದ ಶ್ರಮಿಸುತ್ತಿದ್ದರು. ದೇವಸ್ಥಾನಕ್ಕೆ ಬರುವ ಊರ-ಪರಊರ ಭಕ್ತರಿಗೆ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಲು ಯಾವುದೇ ತೊಂದರೆಯಾಗದ ರೀತಿಯಲ್ಲಿ ದೇವಸ್ಥಾನದ ಪರಿಸರದಲ್ಲಿ ಸರ್ವ ಸುಸಜ್ಜಿತ ವ್ಯವಸ್ಥೆಯನ್ನು ನಡೆಸಲಾಗಿತ್ತು. ಪುತ್ತೂರು-ಉಪ್ಪಿನಂಗಡಿ ರಸ್ತೆಯುದ್ದಕ್ಕೂ ಬಂಟಿಂಗ್ಸ್, ಬ್ಯಾನರ್‌ಗಳನ್ನು ಹಾಕಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ, ಅತಿಥಿ ಗಣ್ಯರಿಗೆ ಸ್ವಾಗತವನ್ನು ಕೋರಲಾಗಿತ್ತು.
ಇದೀಗ ಅಂತಿಮ ಕ್ಷಣದಲ್ಲಿ ದೇವಳದ ಬ್ರಹ್ಮಕಲಶೋತ್ಸವ ಸಮಾರಂಭ ಮುಂದೂಡಿಕೆಯಾಗಿದೆ. ಮುಂದೆ ಪ್ರಶ್ನಾ ಚಿಂತನೆ ನಡೆಸಿ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಮುಖರಾದ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಪ್ರಚಾರ ಸಮಿತಿ ಸಂಚಾಲಕ ಜಯಪ್ರಕಾಶ್ ಬದಿನಾರು, ನ್ಯಾಯವಾದಿ ಕುಮಾರ್ ನಾಥ್, ಮೋಹನ್ ಕಲ್ಲೇರಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ, ಶಿವಪ್ರಸಾದ್ ರೈ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.