HomePage_Banner
HomePage_Banner
HomePage_Banner
HomePage_Banner

ಖಾಸಗಿ ಆಸ್ಪತ್ರಗೆ ಆಗಮಿಸುವ ರೋಗಿಗಳು, ಅವರ ಬಂಧುಗಳು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು – ಪುತ್ತೂರು ಹಾಸ್ಪಿಟಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಶ್ರೀಪತಿ ರಾವ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಖಾಸಗಿ ಆಸ್ಪತ್ರಗೆ ಆಗಮಿಸುವ ರೋಗಿಗಳು ಹಾಗೂ ಅವರ ಬಂಧುಗಳು ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ ಕೋವಿಡ್ ತಡೆಗಟ್ಟುವ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕು ಎಂದು ಪುತ್ತೂರು ಹಾಸ್ಪಿಟಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ತಿಳಿಸಿದ್ದಾರೆ.

ಆಸ್ಪತೆಗೆ ಬರುವವರು ಕಡ್ಡಾಯವಾಗಿ ಸರಿಯಾದ ರೀತಿಯಲ್ಲಿ ಮುಖಕವಚ(ಮಾಸ್ಕ್) ಧರಿಸಬೇಕು. ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು. ಓರ್ವ ಸಂದರ್ಶಕರಿಗೆ ಮಾತ್ರ ರೋಗಿಯನ್ನು ಬೆಳಿಗ್ಗೆ ೧೧ರಿಂದ ಅಪರಾಹ್ನ ೧ರವರೆಗೆ ನೋಡಲು ಅವಕಾಶ. ರೋಗಿಯೊಂದಿಗೆ ಒಬ್ಬರೇ ಸಹಾಯಕರು ಇರತಕ್ಕದ್ದು. ಆಸ್ಪತ್ರೆಯ ಒಳಗೆ ಅನಾವಶ್ಯಕ ತಿರುಗಾಡುವಂತಿಲ್ಲ. ಸಂದರ್ಶಕರಿಗೆ ಕೋವಿಡ್ ಖಾಯಿಲೆ ಇರಬಹುದೆಂದು ಸಂಶಯವಿದ್ದರೆ ಒಳಬರುವ ಅವಕಾಶವಿಲ್ಲ. ೧೮ ವರ್ಷ ಮೇಲ್ಪಟ್ಟ ವ್ಯಾಕ್ಸಿನೇಷನ್ ಆದವರಿಗೆ ಆಸ್ಪತ್ರೆಯ ಒಳಗೆ ಅನುಮತಿ. ಮಕ್ಕಳು ಮತ್ತು ೬೦ ವರ್ಷಕ್ಕಿಂತ ಮೇಲ್ಪಟ್ಟವರು ಚಿಕಿತ್ಸೆಗಾಗಿ ಮಾತ್ರ ಆಸ್ಪತ್ರೆಗೆ ಬರಬೇಕು. ರೋಗಿಗಳು ಮತ್ತು ಅವರ ಬಂಧುಗಳು ಆಸ್ಪತ್ರಗಳ ಜಾಗೃತ ಕ್ರಮಗಳ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.