HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಪೊಲೀಸ್ ಠಾಣಾ ಕಾನ್ಸ್ ಟೇಬಲ್ ಪ್ರವೀಣ್ ರೈ ಪಾಲ್ತಾಡಿ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಗೊಂಡು ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ಕಾನ್ಸ್ ಟೇಬಲ್ ಆಗಿದ್ದ  ಪ್ರವೀಣ್ ರೈ ಪಾಲ್ತಾಡಿ  ರವರು ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಹೊಂದಿ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಪ್ರವೀಣ್ ರೈಯವರು ೨೦೦೮ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರಸ್ತುತ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಜಿಲ್ಲಾ ಅಪರಾಧ ಪತ್ತೆದಳದಲ್ಲಿ ಸೇವೆ ಸಲ್ಲಿಸಿದ್ದು ಜಿಲ್ಲೆಯಲ್ಲಿ ನಡೆದಂತಹ ಅನೇಕ ದರೋಡೆ, ಕೊಲೆ, ಕಳ್ಳತನ, ಕಮ್ಯೂನಲ್ ಗಲಾಟೆಗಳ ಸಂದರ್ಭಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಿದ್ದರು.  ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಘೋರ ಅಪರಾಧ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜಿಲ್ಲಾ ಅಧೀಕ್ಷಕರ ವಿಶೇಷ ತಂಡದಲ್ಲಿ ಪ್ರವೀಣ್ ರೈ ರವರು ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅನೇಕ ಉತ್ತಮ ಕಾರ್ಯಗಳನ್ನು ಗುರುತಿಸಿ ಇಲಾಖೆ ಪ್ರಸ್ತುತ ಸಾಲಿನ  ಮುಖ್ಯ ಮಂತ್ರಿಪದಕಕ್ಕೆ ಅವರನ್ನು ಆಯ್ಕೆ ಮಾಡಿತ್ತು. ಪ್ರವೀಣ್ ರೈಯವರಿಗೆ  13 ವರ್ಷಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ 30 ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ, ಪಶ್ಚಿಮ ವಲಯ ಐಜಿಪಿ ಯವರಿಂದ 3 ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ, ವಿವಿಧ ಸಂಘಸಂಸ್ಥೆ ಹಾಗೂ  ಸಾರ್ವಜನಿರಿಂದ 15 ಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಸನ್ಮಾನ ಪಡೆದಿರುತ್ತಾರೆ.  ಇಲಾಖೆ ಉಪ್ಪಿನಂಗಡಿ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಗೊಳಿಸಿ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಿದೆ. ಇದೀಗ ಪ್ರವೀಣ್ ರೈ ಪಾಲ್ತಾಡಿರವರು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರವೀಣ್‌ ರೈ ಪಿ.ಎಂ.ರವರು ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ನಡುಕೂಟೇಲು  ವಿಶ್ವನಾಥ ರೈ ಹಾಗೂ ಲೀಲಾವತಿ ದಂಪತಿಗಳ ಪುತ್ರರಾಗಿದ್ದು, ಪತ್ನಿ ಪಿ.ಎ.ಕಾಲೇಜಿನ ಉಪನ್ಯಾಸಕಿಯಾಗಿರುವ ದೀಪ ಹಾಗೂ ಪುತ್ರ ಮಾಸ್ಟರ್ ಮನ್ವಿಕ್ ರೊಂದಿಗೆ ವಾಸವಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.