HomePage_Banner
HomePage_Banner
HomePage_Banner
HomePage_Banner

ಹಲ್ಲೆ ಆರೋಪ – ಚಿತ್ರ ನಟ ವಿನೋದ್ ಆಳ್ವರಿಗೆ ಮಧ್ಯಂತರ ಜಾಮೀನು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಲ್ಲೆ ಆರೋಪದಡಿ ಚಿತ್ರ ನಟ ವಿನೋದ್ ಆಳ್ವ ಸಹಿತ ಇಬ್ಬರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎ.೨೧ರಂದು ಬೆಳಿಗ್ಗೆ ಸಂಪ್ಯ ಪೊಲೀಸ್ ಠಾಣೆಗೆ ಶರಣಾಗಿ ಪೊಲೀಸರಿಂದ ಬಂಧಿರಾದ ಚಿತ್ರನಟ ವಿನೋದ್ ಆಳ್ವಅವರಿಗೆ ಮಧ್ಯಾಹ್ನದ ವೇಳೆಗೆ ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರುಗೊಂಡಿದೆ.

ಪಡುವನ್ನೂರು ಗ್ರಾಮದ ಕೊರಗಪ್ಪ ನಾಯ್ಕ್ ಅವರ ಪುತ್ರ ಉದಯ(೨೯ವ)ಎಂಬವರು ದೂರು ನೀಡಿದವರು. ಪಡುಮಲೆ ನಾಗಬ್ರಹ್ಮ ದೇವರ ಸ್ಥಾನದ ರಸ್ತೆ ಕಾಮಗಾರಿಯನ್ನು ವಿನೋದ್ ಆಳ್ವ ಅವರು ಮಾಡಿಸುತ್ತಿದ್ದ ವೇಳೆ ಅದೇ ರಸ್ತೆಯಾಗಿ ಹೋಗುತ್ತಿದ್ದ ನಾನು, ರಸ್ತೆ ಕೆಲಸ ಮಾಡುವ ವೇಳೆ ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ಬರುತ್ತಿಲ್ಲ ಎಂದು ವಿನೋದ್ ಆಳ್ವರಲ್ಲಿ ಹೇಳಿದ್ದೆ. ಈ ವೇಳೆ ಅವರು, ನೀರು ಬಾರದಿದ್ದರೆ ನನ್ನಲ್ಲಿ ಕೇಳುವುದಲ್ಲ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಅವರ ಜೊತೆಯಲ್ಲಿದ್ದ ದೀಕ್ಷಿತ್ ಕೂಡಾ ಹಲ್ಲೆ ನಡೆಸಿದ್ದಾರೆ. ನಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನೆಂದು ತಿಳಿದೂ ವಿನೋದ್ ಆಳ್ವ ಮತ್ತು ದೀಕ್ಷಿತ್ ಅವರು ಉದ್ದೇಶ ಪೂರ್ವಕವಾಗಿ ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಉದಯ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಕಲಂ ೩೨೩, ೫೦೪, ೫೦೬, ೩೪ ಐಪಿಸಿ ಕಲಂ ೩(೧)(ಆರ್), ೩(೨)(ವಿ.ಎ), ಎಸ್ಸಿ ಎಸ್ಟಿ ಆಕ್ಟ್ ೨೦೧೫ರಂತೆ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿ ದೀಕ್ಷಿತ್ ಅವರನ್ನು ಆರಂಭದಲ್ಲೇ ಪೊಲೀಸರು ಬಂಧಿಸಿದ್ದರು. ಎ.೨೧ರಂದು ಚಿತ್ರ ನಟ ವಿನೋದ್ ಆಳ್ವ ಅವರು ಪೊಲೀಸ್ ಠಾಣೆಗೆ ಶರಣಾಗಿದ್ದರು. ಅಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮಧ್ಯಾಹ್ನದ ವೇಳೆ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾತಿ ನಿಂಧನೆ ಪ್ರಕರಣ ಬರುವುದಿಲ್ಲ ವಕೀಲರ ವಾದ:
ವಿನೋದ್ ಆಳ್ವ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಅವರ ಪರವಾಗಿ ವಾದ ಮಾಡಿದ ನ್ಯಾಯಾವಾದಿ ನರಸಿಂಹಪ್ರಸಾದ್ ಅವರು ಜಾತಿ ನಿಂಧನೆ ಮಾಡಿಲ್ಲ. ಹಾಗಾಗಿ ಇದೊಂದು ಜಾತಿ ನಿಂಧನೆ ಪ್ರಕರಣಕ್ಕೆ ಬರುವುದಿಲ್ಲ ಎಂದು ವಾದಿಸಿದರು. ಅವರ ವಾದವನ್ನು ಎತ್ತಿ ಹಿಡಿದ ನ್ಯಾಯಾಲಯ ಆರೋಪಿ ವಿನೋದ್ ಆಳ್ವರಿಗೆ ಎ.೨೬ರ ತನಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.