HomePage_Banner
HomePage_Banner
HomePage_Banner
HomePage_Banner

ಪುತ್ತೂರು ಪಡೀಲ್ ನಲ್ಲಿ ಪ್ರಣವ ಸೌಹಾರ್ದ ಸಹಕಾರಿ ಸಂಘದ 5ನೇ ಶಾಖೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಯಶಸ್ಸಿನ ಕೀಲಿ‌ ಕೈ ಶ್ರದ್ದೆಯಲ್ಲಿದೆ, ಅದು ಪ್ರಣವದಲ್ಲಿದೆ – ಒಡಿಯೂರು ಶ್ರೀ

ಪುತ್ತೂರು: ಕಳೆದ 6 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಾ ಬಂದಿರುವ ಪ್ರಣವ ಸೌಹಾರ್ದ ಸಹಕಾರಿಯ ಪುತ್ತೂರು ಶಾಖೆಯು ಎ.22 ರಂದು ಸಂಜೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ಎನ್.ಎಸ್. ಆರ್ಕೇಡ್‌ನಲ್ಲಿ ಉದ್ಘಾಟನೆಗೊಂಡಿತ್ತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನೂತನ ಶಾಖೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಉದ್ಘಾಟನೆ ದೊಡ್ಡ ಸಂಗತಿಯಲ್ಲ. ಮುಂದೆ ನಡೆಸುವಂತಹ ಪ್ರಯತ್ನ ಇರಬೇಕು. ಯಶಸ್ಸಿನ ಕೀಲಿ‌ ಕೈ
ಶ್ರದ್ದೆಯಲ್ಲಿದೆ. ಅದು ಪ್ರಣವದಲ್ಲಿದೆ ಎಂದರು. ಸಹಕಾರಿ ಸಂಸ್ಥೆಗಳ ಹಿಂದೆ ಪರಿಶ್ರಮ ಬೇಕು. ಸಂಸ್ಥೆಗಳು ಅದರ ಹಿಂದಿರುವ ಶಕ್ತಿಯಿಂದ ಮುಂದುವರಿಯುತ್ತದೆ ಎಂದರು. ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹಕಾರ ಭಾರತೀಯ ರಾಜ್ಯ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ, ಎಪಿಎಂಸಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ ಸೇರಿದಂತೆ ಈ ಸಂದರ್ಭದಲ್ಲಿ ಅನೇಕ ಗಣ್ಯರು ಆಗಮಿಸಿದರು.
ಸನ್ಮಾನ: 9ನೇ ವರ್ಷದಲ್ಲೇ ವಿನೂತನ ಬೀಜ ಹಾಕುವ ಯಂತ್ರವನ್ನು ಅವಿಷ್ಕಾರ ಮಾಡಿ ಪ್ರಧಾನ ಮಂತ್ರಿಗಳ ಬಾಲ ಪ್ರತಿಬಾ ಪುರಸ್ಕಾರ ಪಡೆದ ರಾಕೇಶ್ ಕೃಷ್ಣ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಅವರ ತಂದೆ ರವಿಶಂಕರ್ ಅವರನ್ನು ಗೌರವಿಸಲಾಯಿತು.ಕಟ್ಟಡದ ಮಾಲಕ ನಾರಾಯಣ ಆಚಾರ್ಯ ದಂಪತಿಗೆ ಕೃತಜ್ಞತೆ ಸಲ್ಲಿಸಲಾಯಿತು. ಅಧ್ಯಕ್ಷ ಜಿ.ಆರ್ ಪ್ರಸಾದ್ ಮತ್ತು ಉಪಾಧ್ಯಕ್ಷ ಪ್ರಶಾಂತ್ ಪೈ ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಿದರು. ಶಾಖಾ ಸಲಹಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ದಯಾನಂದ, ಅಚ್ಚುತ ಪ್ರಭು, ಶಿವರಾಮ ರೈ, ನಿರ್ದೇಶಕರಾದ ದಯಾ ಸಾಗರ್ ಪೂಂಜಾ, ಪದ್ಮರಾಜ್ ಬಲ್ಲಾಳ್, ರವೀಂದ್ರನಾಥ್ ಅತಿಥಿಗಳನ್ನು ಗೌರವಿಸಿದರು. ಪುತ್ತೂರು ಶಾಖೆಯ ಸಲಹಾ ಸಮಿತಿ ಸದಸ್ಯ ಮಧುಸೂದನ್ ನಾಯಕ್ ಸ್ವಾಗತಿಸಿದರು‌. ಶಿವಾನಂದ ಶೆಣೈ ಪ್ರಾರ್ಥಿಸಿದರು. ವಾಮಂಜೂರು ಶಾಖೆಯ ಸಲಹಾ ಸಮಿತಿ ಸದಸ್ಯ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕ ಪುರುಷೋತ್ತಮ ಕೊಟ್ಟಾರಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.