HomePage_Banner
HomePage_Banner
HomePage_Banner
HomePage_Banner

ಎಸಿ ನೇತೃತ್ವದಲ್ಲಿ ಅಧಿಕಾರಿಗಳಿಂದ ಪರಿಶೀಲನೆ | ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಉಳಿದೆಲ್ಲಾ ಬಂದ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೋವಿಡ್-೧೯ನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ಉಪ್ಪಿನಂಗಡಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಬಂದ್ ಮಾಡಿಸಿತು.

 
ಉಪ್ಪಿನಂಗಡಿ ಪೇಟೆಯಲ್ಲಿ ಸುತ್ತಾಡಿದ ಅಧಿಕಾರಿಗಳ ತಂಡ ಸರಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ದಿನಸಿ ಅಂಗಡಿ, ಅಗತ್ಯ ವಸ್ತುಗಳ ಅಂಗಡಿ ಸೇರಿದಂತೆ ತೆರೆದಿಡಲು ಅನುಮತಿ ನೀಡಿರುವ ಅಂಗಡಿಗಳನ್ನು ಬಿಟ್ಟು ಉಳಿದೆಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿತು.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಕೋವಿಡ್-೧೯ನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಅವಶ್ಯಕ ಚಟುವಟಿಕೆಗಳು ಬಿಟ್ಟು ಮತ್ತೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿದೆ. ಆದ್ದರಿಂದ ಜನರು, ವರ್ತಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಇದು ಮೇ ೪ರ ತನಕ ಇದೆ. ಶುಕ್ರವಾರ ರಾತ್ರಿ ೯ರಿಂದಲೇ ವೀಕೆಂಡ್ ಕರ್ಫ್ಯೂ ಜಾರಿಗೆ ಬರಲಿದ್ದು, ಇದು ಸೋಮವಾರ ಬೆಳಗ್ಗೆ ೬ರವರೆಗೆ ಜಾರಿಯಲ್ಲಿರುತ್ತದೆ. ಆ ದಿನಗಳಲ್ಲಿ ಬೆಳಗ್ಗೆ ೬ರಿಂದ ೧೦ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತದೆ. ಒಟ್ಟು ಮೇ ೪ರವರೆಗೆ ಅವಶ್ಯಕತೆ ಇಲ್ಲದಿದ್ದರೆ ಯಾರೂ ಪೇಟೆಗೆ ಬರಲು ಹೋಗಬಾರದು. ಅಗತ್ಯ ಸಾಮಗ್ರಿಗಳನ್ನು ಅವರ ಮನೆಯ ಹತ್ತಿರದ ಅಂಗಡಿಗಳಿಂದಲೇ ಪಡೆಯಬೇಕು. ಅಗತ್ಯಕ್ಕಾಗಿ ಪೇಟೆಗೆ ಬರಲೇ ಬೇಕೆಂಬ ಅನಿವಾರ್ಯತೆಯಾದರೆ ಮಾಸ್ಕ್ ಧರಿಸಿಕೊಂಡು ಬರಬೇಕು. ಯಾರೂ ಅನವಶ್ಯಕವಾಗಿ ಓಡಾಡುವಂತಿಲ್ಲ. ವರ್ತಕರು ಕೂಡಾ ಅಂಗಡಿಗಳಲ್ಲಿ ಗ್ರಾಹಕರನ್ನು ನಿಯಂತ್ರಿಸಬೇಕು. ವೀಕೆಂಡ್ ಕರ್ಫ್ಯೂ ದಿನ ಆಸ್ಪತ್ರೆಗಳಿಗೆ ಹೋಗುವವರು ಅಗತ್ಯ ದಾಖಲೆಗಳನ್ನು ತೋರಿಸಬೇಕು. ಮದುವೆ ಸಮಾರಂಭಕ್ಕೆ ತೆರಳುವವರು ಕೂಡಾ ಸಂಬಂಧಿತ ಅಧಿಕಾರಿಗಳು ನೀಡಿದ ಗೆಸ್ಟ್ ಲೀಸ್ಟ್ ಅನ್ನು ವಾಟ್ಸಫ್‌ನಲ್ಲಿಟ್ಟುಕೊಂಡು ಹಾಗೂ ಆಮಂತ್ರಣ ಪತ್ರವನ್ನು ಜೊತೆಯಲ್ಲಿಟ್ಟುಕೊಂಡು ತೆರಳಬಹುದು. ತಪಾಸಣೆ ವೇಳೆ ಇದನ್ನು ತೋರಿಸಿದರೆ ಮಾತ್ರ ಹೋಗಲು ಅವಕಾಶ ನೀಡಲಾಗುವುದು. ೪೫ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬೇಕು. ಗ್ರಾ.ಪಂ.ನಿಂದ ಉಪ್ಪಿನಂಗಡಿಯಲ್ಲಿ ಪ್ರತಿ ದಿನ ಮೈಕ್ ಅನೌನ್ಸ್ ಮೂಲಕ ಜಾಗೃತಿ ಮೂಡಿಸುವ ಕೆಲಸವಾಗಲಿದೆ ಎಂದರು.

ಕಡಬ ತಹಶೀಲ್ದಾರ್ ಅನಂತಶಂಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಪ್ರೊಬೆಷನರಿ ಉಪನಿರೀಕ್ಷಕ ಅನಿಲ ಕುಮಾರ, ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ವಿಜಯವಿಕ್ರಮ್, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಮತ್ತಿತ್ತರರಿದ್ದರು.

ಏಕಾಏಕಿ ನಿರ್ಧಾರಕ್ಕೆ ಆಕ್ರೋಶ
ರಾಜ್ಯ ಸರಕಾರ ಏಕಾಏಕಿ ಅಘೋಷಿತ ಲಾಕ್‌ಡೌನ್ ಹೇರಿರುವುದಕ್ಕೆ ಕೆಲ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಟ್ಟೆ ವ್ಯಾಪಾರಿ ಅಬ್ದುಲ್ ಹಮೀದ್, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ನಾವು ಬಂದ್ ಮಾಡಿಸುವುದಿಲ್ಲ. ವ್ಯಾಪಾರಸ್ಥರಿಗೆ ತೊಂದರೆ ಕೊಡುವುದಿಲ್ಲ ಎಂದು ೧೫ ದಿವಸಗಳಿಂದ ಇದೇ ಮಾತು ಹೇಳುತ್ತಿದ್ದರು. ಇದನ್ನು ನಂಬಿ ನಾವು ಮುಂದಿನ ದಿನಗಳಲ್ಲಿ ಬರುವ ರಂಝಾನ್ ಸೇರಿದಂತೆ ಹಬ್ಬ, ಹರಿದಿನಗಳು, ಮದುವೆ ಸಮಾರಂಭಗಳಿಗೆಂದು ಲಕ್ಷಾಂತರ ರೂಪಾಯಿ ಮಾಲನ್ನು ಖರೀದಿಸಿದ್ದೇವೆ. ಆದರೆ ಈಗ ಬಟ್ಟೆ ಅಂಗಡಿ, ಪಾದರಕ್ಷೆ ಅಂಗಡಿ ಸೇರಿದಂತೆ ಹೆಚ್ಚಿನ ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ. ಈಗ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ನಮ್ಮ ಗತಿಯೇನು? ಬಟ್ಟೆ, ಪಾದರಕ್ಷೆಗಳ ಅಂಗಡಿಗಳನ್ನು ಬಂದ್ ಮಾಡಬೇಕೆನ್ನುವವರು ಆದರೆ ಬಾರ್, ಮದ್ಯದಂಗಡಿ ಓಪನ್ ಮಾಡಲು ಹೇಳುತ್ತಿದ್ದಾರೆ. ಇದೇನು ಸಾರ್ವಜನಿಕ ಸೇವೆಯೇ ಎಂದು ಪ್ರಶ್ನಿಸಿದ್ದರು. ಆದರೆ ಮಹಾರಾಷ್ಟದಲ್ಲಿ ಕೊರೋನಾ ಜಾಸ್ತಿಯಾದರೆ ಬಂದ್ ಮಾಡುತ್ತೇವೆ ಎಂದು ಸರಕಾರ ಹೇಳಿಕೊಂಡು ಬಂದಿದ್ದರಿಂದ ಅಲ್ಲಿ ವ್ಯಾಪಾರಿಗಳಿಗೆ ಸಮಸ್ಯೆಯಾಗಲಿಲ್ಲ. ಇಲ್ಲಿ ಮಾತ್ರ ವ್ಯಾಪಾರಿಗಳು ಬೀದಿಗೆ ಬೀಳುವಂತಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.