HomePage_Banner
HomePage_Banner
HomePage_Banner
HomePage_Banner

ವೀಕೆಂಡ್ ಕರ್ಪ್ಯೂ ಅವಧಿಯಲ್ಲಿ ಜನಸಂಚಾರ ನಿರ್ಬಂಧ – ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ
  • ಡಿವೈಎಸ್ಪಿ ಡಾ. ಗಾನಕುಮಾರ್ ಹೇಳಿಕೆ

ಪುತ್ತೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಸರಕಾರ ಜಾರಿಗೆ ತಂದಿರುವ ಎಪ್ರಿಲ್ 24 ಮತ್ತು 25ರ ವೀಕೆಂಡ್ ಕರ್ಪ್ಯೂ ಅವಧಿಯಲ್ಲಿ ಜನ ಸಂಚಾರ ನಿಷೇಧಿಸಲಾಗಿದೆ, ಕರ್ಪ್ಯೂ ಅವಧಿಯಲ್ಲಿ ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷೀಣ್ಯವಾಗಿ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಲಿದೆ ಎಂದು ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ.‌ಗಾನ ಕುಮಾರ್ ತಿಳಿಸಿದ್ದಾರೆ.

‘ಸುದ್ದಿ’ಯೊಂದಿಗೆ ಮಾತನಾಡಿದ ಡಾ.ಗಾನ ಕುಮಾರ್ ಅವರು, ವೀಕೆಂಡ್ ಕರ್ಪ್ಯೂ ಜಾರಿ ಇರುವ ಶನಿವಾರ ಮತ್ತು ಆದಿತ್ಯವಾರದಂದು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10ರವರೆಗೆ ಹಾಲು, ದಿನಸಿ ಸಾಮಾಗ್ರಿ, ಆಸ್ಪತ್ರೆ, ಮೆಡಿಕಲ್, ಪತ್ರಿಕೆ ಮುಂತಾದ ಅಗತ್ಯ ವಸ್ತುಗಳ ವ್ಯವಹಾರ ಕೇಂದ್ರ ತೆರೆಯಲು ಅವಕಾಶ ಇದೆ. 10 ಗಂಟೆಯ ನಂತರ ಕರ್ಪ್ಯೂ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತದೆ. ಕಟ್ಟಡ ಕಾಮಗಾರಿ ಸಹಿತ ಯಾವುದೇ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ, ಅಂಗಡಿ ಮಳಿಗೆಗಳನ್ನು ತೆರೆಯುವಂತಿಲ್ಲ, ಓಡಾಟಕ್ಕೆ ಅವಕಾಶ ಇರುವುದಿಲ್ಲ, ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಸಂಚಾರಕ್ಕೆ ಅವಕಾಶ ಇರುತ್ತದೆ. ಕೃಷಿಕರು ಸಂಬಂಧಿಸಿದ ದಾಖಲೆಗಳು ಹೊಂದಿರುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಕರ್ಪ್ಯೂ ಅವಧಿಯಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇರುವುದಿಲ್ಲ. ಈಗಾಗಲೇ ನಿಗದಿಯಾಗಿರುವ ಮದುವೆಯಂತಹ ಸಮಾರಂಭಗಳಿಗೆ ಸ್ಥಳೀಯಾಡಳಿತದಿಂದ ಅನುಮತಿ ಪಡೆದುಕೊಂಡಿರುವ ಐವತ್ತು ಜನರಿಗೆ ಭಾಗವಹಿಸಲು ಅವಕಾಶ ಇರುತ್ತದೆ. ಸಮಾರಂಭದ ಆಮಂತ್ರಣ ಪತ್ರ, ಸ್ಥಳೀಯಾಡಳಿತದ ಅನುಮತಿ ಪತ್ರ ಮತ್ತು ಅಧಿಕೃತ ಗುರುತಿನ ಚೀಟಿ ಹೊಂದಿದ್ದವರಿಗೆ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಈ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಾವಳಿ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಮೆಡಿಕಲ್, ಆಸ್ಪತ್ರೆಗೆ ಹೋಗಲು ಅವಕಾಶ ಇರುತ್ತದೆ ಎಂದು ತಿಳಿಸಿದ ಡಾ. ಗಾನಕುಮಾರ್ ಅವರು, ನೈಟ್ ಕರ್ಪ್ಯೂ ಮತ್ತು ವೀಕೆಂಡ್ ಕರ್ಪ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರಲ್ಲದೆ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Iqbal

    I agree with weekend lockdown and night curfew. Even I will support for that. But why they are closed office premises in week days. What kind of rules this one.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.