HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಲೀನ ನೀರು ನದಿಗೆ ಬಿಡುವ ಹೊಟೇಲ್‌ನವರ ವಿರುದ್ಧ ಕ್ರಮಕ್ಕೆ ಆಗ್ರಹ
  • ತ್ಯಾಜ್ಯ ನಿರ್ವಹಣಾ ಸಲಹಾ ಸಮಿತಿ ರಚಿಸಲು ನಿರ್ಣಯ.
  • ಉಪ್ಪಿನಂಗಡಿ ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ಥ ಆಗಿದೆ.


ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೊಂದು ಹೊಟೇಲ್, ವಸತಿ ಸಮುಚ್ಛಯದವರು ತಮ್ಮಲ್ಲಿನ ಮಲೀನ ದ್ರವ ತ್ಯಾಜ್ಯವನ್ನು ಚರಂಡಿಗಳ ಮೂಲಕ ನೇರವಾಗಿ ನದಿಗೆ ಹರಿಯಬಿಡುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿ, ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ ಅಧ್ಯಕ್ಷತೆಯಲ್ಲಿ ಎ. ೨೨ರಂದು ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಸದಸ್ಯರು ದ್ರವ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುತ್ತಿದ್ದು, ನದಿ ನೀರು ಕಲುಷಿತವಾಗುತ್ತಿದೆ. ಅದರಲ್ಲೂ ಕೆಲವು ವಸತಿ ಸಮುಚ್ಚಯಗಳ ಶೌಚಾಲಯದ ತ್ಯಾಜ್ಯವನ್ನೂ ನದಿಗೆ ಬಿಡುವ ಮಟ್ಟಿಗೆ ಅನಾಗರಿಕತೆ ಪ್ರದರ್ಶಿಸಲಾಗುತ್ತಿದೆ. ಇದನ್ನು ತಡೆಗಟ್ಟಲು ಪರಿಣಾಮಕಾರಿ ಯೋಜನೆಯನ್ನು ಜಾರಿಗೊಳಿಸಬೇಕು. ಅದಕ್ಕಾಗಿ ಪಂಚಾಯತ್ ಸದಸ್ಯರು, ಊರವರನ್ನೂ ಒಳಗೊಂಡ ಸಮಿತಿಯನ್ನು ರಚಿಸಬೇಕೆಂಬ ಆಗ್ರಹ ವ್ಯಕ್ತವಾಗಿ, ತ್ಯಾಜ್ಯ ನಿರ್ವಹಣಾ ಸಲಹಾ ಸಮಿತಿಯೊಂದನ್ನು ರಚಿಸುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.


ಉಪ್ಪಿನಂಗಡಿ ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ:
ಉಪ್ಪಿನಂಗಡಿ ಪೇಟೆಯಲ್ಲಿ ಆಟೋ ರಿಕ್ಷಾ, ಟೂರಿಸ್ಟ್ ಜೀಪು ನಿಲುಗಡೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದ್ದು, ಈ ಹಿಂದೆ ಮಾಡಿರುವ ವ್ಯವಸ್ಥೆಯನ್ನು ಮರು ಪರಿಶೀಲನೆ ನಡೆಸಿ, ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು. ಪಂಚಾಯಿತಿ ಅಧೀನದ ಕಟ್ಟಡದ ಬಾಡಿಗೆದಾರರು ಬಾಡಿಗೆ ಮೊತ್ತವನ್ನು ಕಡಿತಗೊಳಿಸಲು ಮನವಿ ಸಲ್ಲಿಸಿದ್ದಾರೆ ಎಂದು ಸಭೆಯ ಗಮನಕ್ಕೆ ತಂದ ಪಿಡಿಓ. ಮನವಿಯನ್ನು ಪುರಸ್ಕರಿಸಿದರೆ ಪಂಚಾಯಿತಿಗೆ ಆರ್ಥಿಕ ಸಂಕಷ್ಠ ಉಂಟಾಗಬಹುದು ಎಂದು ಎಚ್ಚರಿಸಿದರು.

ವಾಣಿಜ್ಯ ಕಟ್ಟಡಗಳಲ್ಲಿನ ಬಾಡಿಗೆದಾರ ವ್ಯಾಪಾರಿಗಳ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿ ಕಟ್ಟಡ ಮಾಲಕರಿಂದ ಸಲ್ಲಿಸಲ್ಪಡುವ ಸಕಾರಣದ ಆಕ್ಷೇಪವನ್ನು ಮಾನ್ಯ ಮಾಡಬೇಕು ಎಂಬ ಸದಸ್ಯರ ಸಲಹೆಯನ್ನು ಸಭೆಯಲ್ಲಿ ಮಾನ್ಯ ಮಾಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಯು.ಕೆ. ಇಬ್ರಾಹಿಂ, ಸಣ್ಣಣ್ಣ, ಅಬ್ದುಲ್ ರಶೀದ್, ಇಬ್ರಾಹಿಂ ಮೈಸಿದಿ ಮಾತನಾಡಿದರು. ಸೌದ, ನೆಬಿಸ, ಶೋಭಾ, ಉಷಾ ನಾಯ್ಕ್, ರುಕ್ಮಿಣಿ, ವನಿತಾ, ಜಯಂತಿ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಅನಧಿಕೃತ ಸಂಪೂರ್ಣ ತೆರವು ಸೂಕ್ತ-ಅಧ್ಯಕ್ಷೆ
ಉಪ್ಪಿನಂಗಡಿಯಲ್ಲಿ ಈ ಹಿಂದೆ ಅನಧಿಕೃತ ಅಂಗಡಿಗಳ ತೆರವು ಆಗಿದ್ದು, ತದ ನಂತರ ಇದೀಗ ಹೆದ್ದಾರಿ ಬದಿಯಲ್ಲಿ ಕೆಲವು ಅಂಗಡಿಗಳವರಿಗೆ ಅನುಮತಿ ನೀಡಿದ್ದು, ಅಸಮಂಜಸವಾಗಿದೆ. ಇದರಿಂದಾಗಿ ಅಲ್ಲಲ್ಲಿ ಕೆಲವು ಅನಧಿಕೃತ ಅಂಗಡಿಗಳು ಮತ್ತೆ ತಲೆ ಎತ್ತಿದೆ, ಇನ್ನೂ ಕೆಲವರು ಕರೆ ಮಾಡಿ, ನಮಗೂ ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ, ಆದ ಕಾರಣ ಈಗಾಗಲೇ ಕೊಟ್ಟಿರುವ ಅಂಗಡಿಗಳ ಸಹಿತ ಎಲ್ಲವನ್ನೂ ತೆರವು ಮಾಡುವುದು ಸೂಕ್ತ ಎಂದು ಅಧ್ಯಕ್ಷೆ ಉಷಾ ಮುಳಿಯ ಹೇಳಿದರು. ಆಗ ಸದಸ್ಯ ಯು.ಟಿ. ತೌಸೀಫ್ ಮಾತನಾಡಿ ಈಗಾಗಲೇ ಅನುಮತಿ ಕೊಟ್ಟಿರುವಂತದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವವರಿಗೆ ಮಾತ್ರ, ಅವರಿಂದ ಯಾವುದೇ ತೊಂದರೆ ಇಲ್ಲ, ಅಲ್ಲಿ ಇನ್ನು ೨ ತಿಂಗಳಿನಲ್ಲಿ ಹೆದ್ದಾರಿ ಕಾಮಗಾರಿ ಪ್ರಾರಂಭ ಆಗುತ್ತದೆ, ಆಗ ಎಲ್ಲವೂ ತೆಗೆಯಬೇಕಾಗುತ್ತದೆ, ಆದ ಕಾರಣ ಅದರ ಬಗ್ಗೆ ಇಲ್ಲಿ ಚರ್ಚೆ ಅಗತ್ಯ ಇಲ್ಲ ಎಂದರು.
ಆಗ ಲೋಕೇಶ್ ಬೆತ್ತೋಡಿ, ಸುರೇಶ್ ಅತ್ರಮಜಲು ಮಾತನಾಡಿ ಹೆದ್ದಾರಿಯಲ್ಲಿ ಅವಕಾಶ ಕೊಟ್ಟದ್ದನ್ನು ನೋಡಿ ಎಲ್ಲಾ ಕಡೆ ಇಡಲು ನೋಡುತ್ತಿದ್ದಾರೆ, ಆದ ಕಾರಣ ಅಧ್ಯಕ್ಷರು ಹೇಳಿದ ಹಾಗೆ ಎಲ್ಲವನ್ನೂ ತೆಗೆಯುವುದು ಸೂಕ್ತ ಎಂದರು. ಆಗ ಅಬ್ದುಲ್ ರಹಿಮಾನ್ ಮಾತನಾಡಿ ಈಗ ಮತ್ತೆ ಅನಧಿಕೃತದ ಬಗ್ಗೆ ಚರ್ಚೆ ಸೂಕ್ತವಲ್ಲ, ಇನ್ನೇನು ೨ ತಿಂಗಳಿನಲ್ಲಿ ಹೆದ್ದಾರಿಯಲ್ಲಿ ಕಾಮಗಾರಿ ಆರಂಭ ಆಗುವಾಗ ಎಲ್ಲವೂ ತೆರವು ಆಗಲಿದೆ ಆದ ಕಾರಣ ಈಗ ಇದರ ಬಗ್ಗೆ ಚರ್ಚೆ ಮಾಡುವುದು ಅಗತ್ಯ ಇಲ್ಲ ಎಂದರು. ಅದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದರು.

ಮಾಹಿತಿ ಹಕ್ಕಿನಲ್ಲಿ ಉತ್ತರ ಪಡೆಯಿರಿ-ಪಿಡಿಓ.
“ಕಳೆದ ಬಾರಿಯ ಆಡಳಿತಾಧಿಕಾರಿಯವರ ಅಧಿಕಾರವಧಿಯಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಯ ಸಂಬಂಧ ಪಂಚಾಯಿತಿ ವತಿಯಿಂದ ಎಷ್ಟು ಹಣ ಖರ್ಚಾಗಿದೆ” ಎಂದು ಸದಸ್ಯ ಧನಂಜಯ್ ಕೇಳಿದರು. ಇದಕ್ಕೆ ಪಿಡಿಓ. ಪ್ರತಿಕ್ರಿಯಿಸಿ “ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಉತ್ತರ ಪಡೆದುಕೊಳ್ಳಿ” ಎಂದರು. ಇದರಿಂದ ಅಸಮಾಧಾನಗೊಂಡ ಯು.ಟಿ. ತೌಸೀಫ್ “ಆಡಳಿತಾಧಿಕಾರಿ ಅವಧಿಯಲ್ಲಿ ಖರ್ಚು ವೆಚ್ಚಗಳು ಅಸಹಜವಾಗಿದೆ, ಅದಕ್ಕಾಗಿ ನಾವು ಸಭೆಯಲ್ಲಿ ಸದಸ್ಯರು ಕೇಳುತ್ತಿರುವುದು, ನಿಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ ಕೇಳುತ್ತಿಲ್ಲ, ನಮಗೆ ಇದೀಗ ಮಾಹಿತಿ ಬೇಕು ಎಂದರು”. ಆಗ ಪಿಡಿಓ. ಕಚೇರಿಯಲ್ಲಿ ಬಹಳ ಮಂದಿ ಕಾಯುತ್ತಿದ್ದಾರೆ ಎಂದು ಹೇಳಿಕೊಂಡು ಕಚೇರಿಗೆ ತೆರಳಿದರು.
ಪಿಡಿಓ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಲೆಕ್ಕ ಸಹಾಯಕ ರವಿಚಂದ್ರ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.