HomePage_Banner
HomePage_Banner
HomePage_Banner
HomePage_Banner

ವೀಕೆಂಡ್ ಕರ್ಫ್ಯೂ : ವಿಟ್ಲದೆಲ್ಲೆಡೆ ಮುಚ್ಚಿದ ಅಂಗಡಿಗಳು – ಅನಗತ್ಯ ರಸ್ತೆಗಿಳಿಯದ ವಾಹನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಕೊರೋನ ಅಲೆ ದಿನದಿಂದ ದಿನಕ್ಕೆ‌ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ವೀಕೆಂಡ್ ಕಫ್ಯೂವನ್ನು ಜಾರಿಗೆ ತಂದಿದ್ದು, ವಿಟ್ಲ ಪೇಟೆ ಸಹಿತ ಬಂಟ್ವಾಳ ತಾಲೂಕು ಸ್ಥಬ್ದಗೊಂಡಿದೆ.

ಕಬಕ ಪೇಟೆಯಲ್ಲಿ ಪುತ್ತೂರು ನಗರ ಪೊಲೀಸರು
ವಿಟ್ಲ ಪೇಟೆ

ವೀಕೆಂಡ್ ಕರ್ಫ್ಯೂ ವಿನ ಮೊದಲ ದಿನವಾದ ಎ.24ರಂದು ವಿಟ್ಲ ಠಾಣಾ ವ್ಯಾಪ್ತಿಯ ಸಹಿತ ಬಂಟ್ವಾಳ ತಾಲೂಕಿನಲ್ಲಿ ವ್ಯಾಪಕ ಜನಸ್ಪಂದನೆ ದೊರೆತಿದೆ. ಬೆಳಿಗ್ಗೆ ಆರು ಗಂಟೆಯಿಂದಲೇ ಅಗತ್ತವಸ್ತುಗಳ ಅಂಗಡಿಗಳು ತೆರದು ಕಾರ್ಯಾಚರಿಸಿದ್ದು, ಜನ ಅಗತ್ಯವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ನಿರತರಾಗಿದ್ದರು. ವಿಟ್ಲ ಪೇಟೆಯಲ್ಲಿ ೧೦ ಗಂಟೆವೇಳೆಗಾಗಲೇ ಮೆಡಿಕಲ್ ಸ್ಟೋರ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಮುಚ್ಚಲ್ಪಟ್ಟವು. ಬಳಿಕದ ಬೆಳವಣಿಗೆಯಲ್ಲಿ ಜನಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ  ಮೆಡಿಕಲ್ ಸ್ಟೋರ್ ಗಳು ಮುಚ್ಚಲ್ಪಟ್ಟವು. ಉಳಿದಂತೆ ಸಾಲೆತ್ತೂರು, ಕನ್ಯಾನ, ಅಡ್ಯನಡ್ಕ, ಪರಿಯಲ್ತಡ್ಕ, ಕಂಬಳಬೆಟ್ಟು, ಮಾಣಿ, ನೇರಳಕಟ್ಟೆ, ಕಬಕ ಪ್ರದೇಶದಲ್ಲಿಯೂ ಅಂಗಡಿಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಸರಕು ಸಾಗಾಟದ ವಾಹನಗಳ ಸಹಿತ ತುರ್ತಾಗಿ ತೆರಳುವ ವಾಹನಗಳು ಸಂಚಾರ ನಡೆಸಿವೆ. ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ, ನೆಲ್ಲಿಕಟ್ಟೆ, ಸಾಲೆತ್ತೂರುಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಉಳಿದಂತೆ ಠಾಣಾ ವ್ಯಾಪ್ತಿಯಲ್ಲಿ ಠಾಣಾ ಎಸ್.ಐ. ವಿನೋದ್ ರೆಡ್ಡಿಯವರ‌ನೇತೃತ್ವದ ತಂಡ  ಪೊಲೀಸರು ಗಸ್ತು ತಿರುಗುತ್ತಿದ್ದು, ಜನರನ್ನು ನಿಯಂತ್ರಿಸುತ್ತಿದ್ದಾರೆ. ಬಂಟ್ವಾಳ ವೃತ್ತನಿರೀಕ್ಷಕರಾದ ಟಿ.ಡಿ. ನಾಗರಾಜ್ ರವರು ವಿಟ್ಲ ಠಾಣೆಗೆ ಆಗಮಿಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಠಾಣಾ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದರು.

ಬಂದ್ ಗಿಂತ ಮೊದಲು‌ವಿಟ್ಲಪೇಟೆ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.