HomePage_Banner
HomePage_Banner
HomePage_Banner
HomePage_Banner

ಇಂಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜಿಯನ್ ಪದಾಧಿಕಾರಿಗಳ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಇಂಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜಿಯನ್‌ನ ೨೦೨೧-೨೨ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.

ಮುಖ್ಯ ಅತಿಥಿಯಾಗಿದ್ದ ಇಂಡಿನಿಯನ್ ಸೀನಿಯರ್ ಛೇಂಬರ್‌ನ ರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾವ್‌ರವರು ಮಾತನಾಡಿ, ನೆಲ್ಯಾಡಿ ಘಟಕದ ವತಿಯಿಂದ ಗತವರ್ಷದ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಲಾರಿ ಚಾಲಕರಿಗೆ ಆಹಾರ ಪೂರೈಸಿದ್ದು ಹಾಗೂ ಕಡಬದಲ್ಲಿ ನೂತನ ಲೀಜಿಯನ್ ಒಂದನ್ನು ಪ್ರಾಯೋಜಿಸಿರುವುದನ್ನು ಶ್ಲಾಘಿಸಿದರು. ನಮ್ಮ ಭೂಮಿಯ ಸಂರಕ್ಷಣೆ ಮತ್ತು ಕುಡಿಯುವ ಶುದ್ಧ ನೀರು ಒದಗಿಸಲು ಪ್ರಯತ್ನಿಸಬೇಕು ಹಾಗೂ ಯೋಜನೆ ರೂಪಿಸಿ ಸಮಾಜಕ್ಕೆ ಸೇವೆ ಸಲ್ಲಿಸಲು ಕರೆ ನೀಡಿದರು. ಇನ್ನೋರ್ವ ಅತಿಥಿ ಚಿತ್ರಕುಮಾರ್‌ರವರು ಹೊಸ ಸದಸ್ಯರ ಸೇರ್ಪಡೆಗೊಳಿಸಿ ಮಾತನಾಡಿ, ಈ ಹಿಂದೆ ಜೂನಿಯರ್ ಛೇಂಬರ್‌ನ ಸದಸ್ಯರಾಗಿದ್ದು ೪೦ ವರ್ಷ ಪ್ರಾಯದಾಟಿದವರು ಸೀನಿಯರ್ ಛೇ಼ಂಬರ್ ಸದಸ್ಯರಾಗಲು ಅರ್ಹರು. ನೆಲ್ಯಾಡಿ ಲೀಜಿಯನ್ ೨೨ ಹಿರಿಯ ಜೇಸಿಗಳ ಸೇವಾ ಮನೋಭಾವದ ಬಲಿಷ್ಠ ತಂಡವಾಗಿದೆ. ಈ ಘಟಕವು ಸ್ಥಾಪಕಾಧ್ಯಕ್ಷ ಅಬ್ರಹಾಂ ವರ್ಗೀಸ್‌ರವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಮುಂದೆಯೂ ಉತ್ತಮ ಕೆಲಸ ನಡೆಸಲಿ ಎಂದು ಹೇಳಿ ಶುಭಕಾರೈಸಿದರು.

ಇಂಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜಿಯನ್‌ನ ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್‌ರವರು ನೂತನ ಅಧ್ಯಕ್ಷ ಡಾ. ಸದಾನಂದ ಕುಂದರ್ ಇವರಿಗೆ ಅಧಿಕಾರ ಹಸ್ತಾಂತರ ಗೈದು ಪ್ರಮಾಣ ವಚನ ಬೋಧಿಸಿದರು. ಕಾರ್ಯದರ್ಶಿ ಪ್ರಶಾಂತ, ಖಜಾಂಜಿ ವೆಂಕಟ್ರಮಣ ಆರ್., ಹಾಗೂ ಇತರ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಷ್ಟ್ರೀಯ ಅಧ್ಯಕ್ಷರನ್ನು ಶಾಲುಹೊದಿಸಿ ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು. ಸೀನಿಯರ್ ಛೇಂಬರ್ ವಾಣಿಯನ್ನು ವಿ.ಆರ್.ಹೆಗ್ಡೆ ವಾಚಿಸಿದರು. ರವೀಂದ್ರ ಟಿ. ಅತಿಥಿಗಳನ್ನು ಸಭೆಗೆ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಪ್ರಶಾಂತ್ ವಂದಿಸಿದರು. ನೆಲ್ಯಾಡಿ ಲೀಜಿಯನ್ ಅನ್ನು ಪ್ರಾಯೋಜಿಸಿದ ಮಂಗಳೂರು ಲೀಜಿಯನ್ನಿನ ಅಧ್ಯಕ್ಷ ಹರಿಪ್ರಸಾದ ರೈ ಹಾಗೂ ಉಪಾಧ್ಯಕ್ಷ ಕಿಶೋರ್ ಫೆರ್ನಾಡಿಸ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.