HomePage_Banner
HomePage_Banner
HomePage_Banner
HomePage_Banner

ಕಡಬ ತಾಲೂಕಿನಲ್ಲೂ ಜನ ಸಂಚಾರ ಸ್ತಬ್ದ – ಅಂಗಡಿ ಮುಂಗಟ್ಟುಗಳೂ ಬಂದ್; ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿದ ವಾರಂತ್ಯ ಕರ್ಪ್ಯೂಗೆ ಕಡಬ ತಾಲೂಕು ವ್ಯಾಪ್ತಿಯಲ್ಲಿ ಸಂಪೂರ್ಣ ಬೆಂಬಲ ದೊರೆತಿದೆ.

ತಾಲೂಕಿನ ಕಡಬ, ಆಲಂಕಾರು, ಕೋಡಿಂಬಾಳ, ಸವಣೂರು, ಕಾಣಿಯೂರು, ಬೆಳಂದೂರು, ಕೊಂಬಾರು, ಬಿಳಿನೆಲೆ, ನೂಜಿಬಾಳ್ತಿಲ, ಕುಂತೂರು, ಪೆರಾಬೆ, ಹಳೆನೇರಂಕಿ, ರಾಮಕುಂಜ, ಕೊಲ ಮೊದಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಕೋವಿಡ್ ನಿಯಂತ್ರಿಸಲು ಕೈಗೊಂಡ ಮಾರ್ಗಸೂಚಿಯಂತೆ ನಿಗದಿತ ಸಮಯದೊಳಗೆ ಬಂದ್ ಆಗಿದ್ದು ಜನ ಸಂಚಾರ ಸಂಪೂರ್ಣ ಸ್ತಬ್ದವಾಗಿತ್ತು. ಈ ಭಾಗದಲ್ಲಿ ಅಟೋ, ಜೀಪು, ಬಸ್ ಸಂಚಾರ ನಡೆಸದೆ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿದವು. ಬೆಳೆಯುತಿರುವ ಕಡಬ ಪೇಟೆ ದಿನಾ ಜನಸಂದಣಿಯಿತ್ತು. ಆದರೆ ಶನಿವಾರ ಸಂಪೂರ್ಣ ಸ್ಥಬ್ದವಾಗಿತು. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಯಾಗಿದ್ದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ನಿಗದಿತ ಸಮಯ ಮುಗಿದ ಬಳಿಕವೂ ಓಡಾಟ ನಡೆಸುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿಯೇ ಮುಂದಕ್ಕೆ ಬಿಡುತ್ತಿದ್ದರು. ಕಡಬ ಠಾಣಾ ಮುಂಭಾಗ ಕಡಬ ಪಟ್ಟಣ ಪಂಚಾಯಿತಿ ಅಧಿಕಾರಿ ಅರುಣ್ ಕುಮಾರ್ ನೇತೃತ್ವದ ಕೋವಿಡ್ ಕಾರ್‍ಯ ಪಡೆಯ ತಂಡ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ಠಾಣಾಧಿಕಾರಿ ರುಕ್ಮ ನಾಯ್ಕ ನೇತೃತ್ವದ ತಂಡ ತಮ್ಮ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ಪರಿಸ್ಥಿತಿ ಅವಲೋಕನ ಮಾಡಿದರು.

ಐಡಿ ಕಾರ್ಡು ಇಲ್ಲದವರು ವಾಪಸ್:
ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಿನ ಡೈರಿಯ ಸಿಬ್ಬಂದಿಯೊಬ್ಬರು ಕಡಬ ಪೇಟೆಯಲ್ಲಿ ಓಡಾಟ ನಡೆಸುವಾಗ ಐಡಿ ಕಾರ್ಡು ಇಲ್ಲದಕ್ಕೆ ವಾಪಸ್ಸು ಕಳುಹಿಸಲಾಯಿತು. ಸಂಸ್ಥೆಯ ಕೆಲಸ ಸಂಬಂಧ ತೆರಳುವುದಾಗಿ ಹೇಳಿಕೊಂಡರು ಮುಂದುವರಿಯಲು ಬಿಡಲಿಲ್ಲ. ಬಳಿಕ ಸಂಸ್ಥೆಯಿಂದ ಐಡಿ ಕಾರ್ಡು ಪಡೆದುಕೊಂಡು ಬಂದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ತಿಳಿದುಬಂದಿದೆ.

ಗೃಹಪ್ರವೇಶಕ್ಕೆ ಕಾರ್ಯಕ್ರಮಕ್ಕೆ ದಾಳಿ:
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿ ನಡೆಯುತ್ತಿದ್ದ ಗೃಹಪ್ರವೇಶ ಕಾರ್ಯಕ್ರಮಕ್ಕೆ ಕೋವಿಡ್ ಕಾರ್‍ಯ ಪಡೆಯ ತಂಡ ದಾಳಿ ನಡೆಸಿದೆ. ಈ ವೇಳೆ ಅನುಮತಿ ಪಡೆಯದೆ ಕಾರ್ಯಕ್ರಮ ನಡೆಸುತ್ತಿರುವುದು ಬಗ್ಗೆ ಬೆಳಕಿಗೆ ಬಂದಿತ್ತು. ಕಾರ್ಯಕ್ರಮದಲ್ಲಿದ್ದ ಸುಮಾರು ಮೂವತ್ತು ಮಂದಿಯ ದಾಖಲೆ ಪಡೆದು ಎಚ್ಚರಿಕೆ ನೀಡಲಾಯಿತು ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಕಾರಿನಲ್ಲಿ ಗೃಹಪ್ರವೇಶಕ್ಕೆ ತೆರಳುತ್ತಿದ್ದ ಕುಂತೂರಿನ ಕುಟಂಬವೊಂದನ್ನು ಅಮಂತ್ರಣ ಪತ್ರ ತೋರಿಸಿದರೂ ಕಡಬದಲ್ಲಿ ಮುಂದಕ್ಕೆ ಬಿಡದೆ ಅನುಮತಿ ಪಡೆದು ಹೋಗುವಂತೆ ತಿಳಿಸಿ ವಾಪಸ್ಸು ಕಳುಹಿಸಲಾಯಿತು. ದ್ವಿಚಕ್ರ ವಾಹನದವರ ಮೇಲೂ ನಿಗಾ ವಹಿಸಿದ್ದು ವಾಹನಗಳನ್ನು ಬಂದ ದಾರಿಯತ್ತಲೇ ವಾಪಸ್ಸು ಕಳುಹಿಸಿ ಎಚ್ಚರಿಕೆ ನೀಡುತ್ತಿರುವುದು ಕಂಡುಬಂದಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.