HomePage_Banner
HomePage_Banner
HomePage_Banner
HomePage_Banner

ಕಡಬ: ತಾ| ಮಟ್ಟದ ಕೋವಿಡ್ ಕಾರ್ಯಪಡೆ ಸಭೆ – ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ; ತಹಶೀಲ್ದಾರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳನ್ನೊಳಗೊಂಡ ತಾಲೂಕು ಮಟ್ಟದ ಕೋವಿಡ್ ಕಾರ್ಯಪಡೆಯ ಸಭೆ ಕಡಬ ತಹಶಿಲ್ದಾರ್ ಅನಂತಶಂಕರ್ ಅವರ ನೇತೃತ್ವದಲ್ಲಿ ಎ.೨೩ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡಯಿತು.

ತಹಶೀಲ್ದಾರ್ ಅನಂತಶಂಕರ್‌ರವರು ಮಾತನಾಡಿ, ಪ್ರತೀ ಗ್ರಾಮಮಟ್ಟದ ಕಾರ್ಯಪಡೆ ಅನುಸರಿಸಬೇಕಾದ ನಿಯಮಾವಳಿಗಳ ಬಗ್ಗ ವಿವರಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸುವಂತೆ ಸೂಚನೆ ನೀಡಿದರು. ಜನರಲ್ಲಿ ಜಾಗೃತಿ ಮೂಡಿಸಿ ಕೊರೋನಾ ನಿರ್ಮೂಲನೆಗೆ ಎಲ್ಲರೂ ಕಟಿಬದ್ದರಾಗಿರಬೇಕು ಎಂದು ಹೇಳಿದರು. ಕಡಬ ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ.ಕುಸುಮಾ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣ್ ಕೆ, ಮೆಸ್ಕಾಂ ಎಇಇ ಗಳಾದ ಜೈಪ್ರಕಾಶ್, ಸಜಿಕುಮಾರ್, ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ, ಮಧುಕುಮಾರ್, ಕೊಲ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೆಶಕಿ ಡಾ|ಅಪರ್ಣ ಹೆಬ್ಬಾರ್, ಸಿಡಿಪಿಒ ಶ್ರೀಲತಾ, ಕಡಬ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಪ್ತಶ್ರೀ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್, ಕಡಬ ಠಾಣಾ ಎಸ್‌ಐ ರುಕ್ಮ ನಾಯ್ಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಡಬ ಉಪತಹಶಿಲ್ದಾರ್ ಮನೋಹರ ಕೆ.ಟಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ ವಂದಿಸಿದರು. ಕಡಬ ತಾ. ಪಂ. ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ ಸಹಕರಿಸಿದರು.

ಸಾರ್ವಜನಿಕರು ಸಹಕರಿಸಿ:
ಕೊರೋನಾ ನಿರ್ಮೂಲನೆಗೆ ಸರಕಾರದ ಆಡಳಿತ ವ್ಯವಸ್ಥೆಯೊಂದಿಗೆ ಸಾರ್ವಜನಿಕರು ಅಗತ್ಯವಾಗಿ ಸಹಕರಿಸಬೇಕು ಎಂದು ತಹಶಿಲ್ದಾರ್ ಅನಂತಶಂಕರ್ ಹೇಳಿದ್ದಾರೆ. ಕಾರ್ಯಪಡೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ರೂಪಿಸಿದ ಕಾನೂನು ಹಾಗೂ ಆದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅನುಷ್ಠಾನ ಮಾಡಲು ಸಹಕರಿಸಿದಲ್ಲಿ ಕೋವಿಡ್ ನಿಯಂತ್ರಣ ಸುಲಭವಾಗಲಿದೆ, ಆದ್ದರಿಂದ ಸರಕಾರದ ಆದೇಶಗಳನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದರು. ಮದುವೆ ಹಾಗೂ ಮೆಹಂದಿಗೆ ಸ್ಥಳೀಯಾಡಳಿತದಿಂದ ಪ್ರತ್ಯೇಕ ಅನುಮತಿ ಕಡ್ಡಾಯವಾಗಿದೆ. ನೇಮ, ಕೋಲ, ಮತಪ್ರವಚನ ಇನ್ನಿತರ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದು, ಇದು ಎಲ್ಲಾ ಸಮುದಾಯದವರಿಗೆ ಅನ್ವಯಿಸುತ್ತದೆ, ದೈವ ನರ್ತಕರು ಯಾವುದೇ ನರ್ತನ ಸೇವೆಗೆ ಒಪ್ಪಿಕೊಳ್ಳದಂತೆ ಗ್ರಾಮ ಮಟ್ಟದಲ್ಲಿ ಅವರಿಗೆ ನೊಟೀಸು ನೀಡಲಾಗುವುದು ಎಂದು ತಹಶಿಲ್ದಾರ್ ಎಚ್ಚರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.