ವೀಕೆಂಡ್ ಕರ್ಪ್ಯೂ: ಕಡಬ ತಾಲೂಕಿನಲ್ಲೂ ಹತ್ತು ಗಂಟೆಯ ಬಳಿಕ ಸಂಪೂರ್ಣ ಬಂದ್- ಕಡಬ ಎಸ್.ಐ ರುಕ್ಮ ನಾಯ್ಕ್ ರವರ ನೇತೃತ್ವದಲ್ಲಿ ವಾಹನ ತಪಾಸಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿದ ವಾರಂತ್ಯ ಕರ್ಪ್ಯೂಗೆ ಕಡಬ ತಾಲೂಕು ವ್ಯಾಪ್ತಿಯಲ್ಲಿ ಸಂಪೂರ್ಣ ಬೆಂಬಲ ದೊರೆತಿದೆ. ತಾಲೂಕಿನ ಕಡಬ, ಆಲಂಕಾರು, ಕೋಡಿಂಬಾಳ, ಸವಣೂರು, ಕಾಣಿಯೂರು, ಬೆಳಂದೂರು, ಕೊಂಬಾರು, ಬಿಳಿನೆಲೆ, ನೂಜಿಬಾಳ್ತಿಲ, ಕುಂತೂರು, ಪೆರಾಬೆ, ಹಳೆನೇರಂಕಿ, ರಾಮಕುಂಜ, ಕೊಯಿಲ ಮೊದಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಕೋವಿಡ್ ನಿಯಂತ್ರಿಸಲು ಕೈಗೊಂಡ ಮಾರ್ಗಸೂಚಿಯಂತೆ ನಿಗದಿತ ಸಮಯದೊಳಗೆ ಬಂದ್ ಆಗಿದ್ದು ಜನ ಸಂಚಾರ ಸಂಪೂರ್ಣ ಸ್ತಬ್ದವಾಗಿತ್ತು.

ನಿಗದಿತ ಸಮಯ ಮುಗಿದ ಬಳಿಕವೂ ಓಡಾಟ ನಡೆಸುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿಯೇ ಮುಂದಕ್ಕೆ ಬಿಡುತ್ತಿದ್ದರು. ಕಡಬ ಠಾಣಾ ಮುಂಭಾಗ ಕಡಬ ಪಟ್ಟಣ ಪಂಚಾಯಿತಿ ಅಧಿಕಾರಿ ಅರುಣ್ ಕುಮಾರ್ ನೇತೃತ್ವದ ಕೋವಿಡ್ ಕಾರ್‍ಯ ಪಡೆಯ ತಂಡ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ಠಾಣಾಧಿಕಾರಿ ರುಕ್ಮ ನಾಯ್ಕ ನೇತೃತ್ವದ ತಂಡ ತಮ್ಮ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ಪರಿಸ್ಥಿತಿ ಅವಲೋಕನ ಮಾಡಿದರು. ಪಂಚಾಯತ್ ಸಿಬ್ಬಂದಿಗಳಾದ ಹರೀಶ್ ಬೆದ್ರಾಜೆ ಮೊದಲಾದವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.