HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಭಾನುವಾರ ಹೆಚ್ಚಿದ ಖರೀದಿ ಭರಾಟೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೋವಿಡ್ -೧೯ನ ಎರಡನೇ ಅಲೆಯನ್ನು ತಡೆಯಲು ರಾಜ್ಯ ಸರಕಾರ ಆದೇಶ ನೀಡಿದ ವಾರಂತ್ಯದ ಕರ್ಫ್ಯೂ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆಗಿಂತ ಇಂದು ಬೆಳಗ್ಗೆ ೬ರಿಂದ ೧೦ರವರೆಗೆ ಉಪ್ಪಿನಂಗಡಿ ಪೇಟೆಯಲ್ಲಿ ಹೆಚ್ಚಿನ ಜನಸಂಖ್ಯೆ ಕಂಡು ಬಂತು.




ವಾರಂತ್ಯದ ಕರ್ಫ್ಯೂನಲ್ಲಿ ಬೆಳಗ್ಗೆ ೬ರಿಂದ ೧೦ವರೆಗೆ ಹಾಲು, ದಿನಸಿ ಸಾಮಗ್ರಿ ಸೇರಿದಂತೆ ಕೆಲವು ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲು ಸಡಿಲಿಕೆ ನೀಡಲಾಗಿದ್ದು, ಈ ಸಡಿಲಿಕೆ ಇದ್ದರೂ ಶನಿವಾರ ದಿನ ಜನರ ವಿರಳತೆ ಕಂಡು ಬಂದಿದ್ದು, ಪೇಟೆ ಎಂದಿನ ಸದ್ದುಗದ್ದಲವಿಲ್ಲದೆ, ಮೌನಕ್ಕೆ ಶರಣಾಗಿತ್ತು. ಆದರೆ ಭಾನುವಾರ ಪರಿಸ್ಥಿತಿ ನಿನ್ನೆಗಿಂತ ಭಿನ್ನವಾಗಿದ್ದು, ಬೆಳಗ್ಗಿನಿಂದಲೇ ಅಂಗಡಿಗಳ ಮುಂದೆ ಖರೀದಿ ಭರಾಟೆ ಹೆಚ್ಚಿತ್ತು. ರಸ್ತೆಯಲ್ಲಿ ಕೂಡಾ ವಾಹನಗಳ ಓಡಾಟ ಹೆಚ್ಚಿತ್ತು. ಆದರೆ ಬಸ್ ಸಂಚಾರ ಮಾತ್ರ ಸಂಪೂರ್ಣ ಸ್ತಬ್ಧಗೊಂಡಂತಿತ್ತು. ೧೦ ಗಂಟೆಯ ಬಳಿಕ ವರ್ತಕರೆಲ್ಲಾ ಅಂಗಡಿಗಳ ಬಾಗಿಲು ಮುಚ್ಚಿದ್ದು, ಜನರು ಕೂಡಾ ಚದುರಿ ಹೋಗಿ ಪೇಟೆ ಖಾಲಿ ಖಾಲಿಯಾಗಿತ್ತು. ಬಳಿಕ ರಸ್ತೆಯಲ್ಲಿ ವಾಹನಗಳ ಸಂಚಾರವೂ ವಿರಳಗೊಂಡು ಎಲ್ಲೆಡೆ ನೀರವತೆ ಆವರಿಸಿತು. ಅಪರೂಪಕ್ಕೊಮ್ಮೆ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿರುವುದು ಕಂಡು ಬಂತು.

ತರಕಾರಿಗಳು ಕೊಳೆಯುತ್ತಿವೆ: ತರಕಾರಿಗಳು, ಹಣ್ಣು ಹಂಪಲುಗಳು ಎಲ್ಲಾ ಉತ್ಪನ್ನಗಳಂತಲ್ಲ. ಬೇಗನೇ ಕೊಳೆತು ಹೋಗುತ್ತವೆ. ಉತ್ತಮವಾಗಿ ಗಾಳಿಯಾಡಿದಾಗ ಮಾತ್ರ ಇದರ ಸಂರಕ್ಷಣೆ ಸಾಧ್ಯ. ಈಗ ರಂಝಾನ್ ಉಪವಾಸದ ತಿಂಗಳು ಹಣ್ಣು ಹಂಪಲುಗಳಿಗೆ ಬೇಡಿಕೆ ಜಾಸ್ತಿ. ಲಾಕ್‌ಡೌನ್‌ನ ಅರಿವಿಲ್ಲದ ನಾವು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು- ಹಂಪಲು, ತರಕಾರಿಗಳನ್ನು ತರಿಸಿದ್ದೆವು. ಆದರೆ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು, ಆಗ ಬೆಳಗ್ಗೆ ೬ರಿಂದ ೧೦ರ ವರೆಗೆ ಮಾತ್ರ ವ್ಯಾಪಾರಕ್ಕೆ ನಮಗೆ ಅವಕಾಶ ನೀಡಲಾಗಿತ್ತು. ಆಗ ಹೆಚ್ಚಿನ ವ್ಯಾಪಾರ ನಮಗೆ ಆಗಿಲ್ಲ. ಅಂಗಡಿಗಳಲ್ಲಿ ತರಕಾರಿ, ಹಣ್ಣು- ಹಂಪಲುಗಳೆಲ್ಲಾ ಕೊಳೆಯತೊಡಗಿವೆ. ಇವತ್ತು ಬೆಳಗ್ಗೆ ಅಂಗಡಿ ಬಾಗಿಲು ತೆಗೆದು ಸುಮಾರು ಒಂದೂವರೆ ಗಂಟೆಯಷ್ಟು ಹೊತ್ತು ನಮಗೆ ಕೊಳೆತ ತರಕಾರಿಗಳನ್ನು ಹೆಕ್ಕಿ ಬಿಸಾಡುವುದೇ ಕೆಲಸವಾಗಿದೆ. ಲಾಕ್‌ಡೌನ್, ವೀಕೆಂಡ್ ಕರ್ಫ್ಯೂನಿಂದ ತರಕಾರಿ ಹಾಗೂ ಹಣ್ಣು ಹಂಪಲು ಅಂಗಡಿಗಳವರಿಗೆ ಬಹುದೊಡ್ಡ ಹೊಡೆತ ಬೀಳುವಂತಾಗಿದೆ. ಆದ್ದರಿಂದ ನಮಗೆ ೧೨ ಗಂಟೆಯವರೆಗಾದರೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತರಕಾರಿ ಹಾಗೂ ಹಣ್ಣು – ಹಂಪಲು ವ್ಯಾಪಾರಿ ಇಸಾಕ್ ಪೆರಿಯಡ್ಕ ಮನವಿ ಮಾಡಿಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.