HomePage_Banner
HomePage_Banner
HomePage_Banner
HomePage_Banner

ಕೋರೋನ ಎರಡನೇ ಅಲೆ: ವೀಕೆಂಡ್ ಕರ್ಫ್ಯೂಗೆ ಕುಂಬ್ರ ಪೇಟೆ ಸಂಪೂರ್ಣ ಸ್ತಬ್ದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೋವಿಡ್ ೧೯ ಕೋರೋನ ವೈರಸ್‌ನ ರೂಪಾಂತರದ ಎರಡನೇ ಅಲೆಗೆ ರಾಜ್ಯವೇ ತತ್ತರಿಸುತ್ತಿದ್ದು ಈ ನಿಟ್ಟಿನಲ್ಲಿ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಸರಕಾರ ಆದೇಶ ಮಾಡಿದ್ದ ವೀಕೆಂಡ್ ಕರ್ಫ್ಯೂನ ಎರಡನೇ ದಿನವಾದ ಎ.೨೫ ರಂದು ಕೂಡ ಕುಂಬ್ರ ಪೇಟೆ ಸಂಪೂರ್ಣ ಸ್ತಬ್ದವಾಗಿತ್ತು. ಬೆಳಿಗ್ಗೆ ೬ ರಿಂದ ೧೦ ಗಂಟೆಯವರೇಗೆ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳ ತೆರೆದಿದ್ದವು ೧೦ ಗಂಟೆ ಆಗುತ್ತಿದ್ದಂತೆ ವರ್ತಕರು ಸ್ವತಃ ತಾವೇ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಕರ್ಫ್ಯೂಗೆ ಸ್ಪಂದನೆ ನೀಡಿದ್ದಾರೆ. ಪೊಲೀಸರು ಯಾವುದೇ ಸೂಚನೆ ನೀಡದಿದ್ದರೂ ಸ್ವತಃ ತಾವೇ ಸರಕಾರದ ನಿಯಮಗಳನ್ನು ಪಾಲಿಸುವ ಮೂಲಕ ಈ ವರ್ಷ ಕೋರೋನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಸಹಕಾರ ನೀಡುತ್ತಿದ್ದಾರೆ.

ಕುಂಬ್ರ ಪೇಟೆ ಸೇರಿದಂತೆ ಸಂಪ್ಯ, ಸಂಟ್ಯಾರು, ಪರ್ಪುಂಜ, ತಿಂಗಳಾಡಿ, ಮಾಡಾವು, ಪೆರ್ಲಂಪಾಡಿ, ಕಾವು, ಈಶ್ವರಮಂಗಲ, ಕೌಡಿಚ್ಚಾರು ಇತ್ಯಾದಿ ಪ್ರಮುಖ ಪ್ರದೇಶಗಳು ಸೇರಿದಂತೆ ಗ್ರಾಮಾಂತರ ಎಲ್ಲಾ ಕಡೆಯಲ್ಲೂ ವರ್ತಕರು ವೀಕೆಂಡ್ ಕರ್ಫ್ಯೂಗೆ ಸಂಪೂರ್ಣ ಸಹಮತ ಸೂಚಿಸುವ ಮೂಲಕ ಕೋರೋನ ತಡೆಗಟ್ಟುವಲ್ಲಿ ಸರಕಾರದ ಕಾನೂನು, ನಿಯಮಗಳನ್ನು ಪಾಲಿಸಿದ್ದಾರೆ.

ಅಸಮಾಧಾನವಿದ್ದರೂ ಸಹಮತ!?
ಕೋರೋನ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಅಥವಾ ಕರ್ಫ್ಯೂ ಪರಿಹಾರ ಅಲ್ಲ, ಇದರಿಂದ ಸೋಂಕು ಹರಡುವುದನ್ನು ನಿಲ್ಲಿಸಲು ಸಾಧ್ಯವೂ ಇಲ್ಲ ಎಂಬ ಮಾತುಗಳನ್ನು ಕೆಲವು ಮಂದಿ ವರ್ತಕರು ಮಾಧ್ಯಮದ ಜೊತೆ ಹಂಚಿಕೊಂಡಿದ್ದರೂ ಒಂದಷ್ಟು ಮಂದಿ ಸರಕಾರದ ಕ್ರಮವನ್ನು ಶ್ಲಾಘನೆ ಮಾಡಿದ್ದು ಕಂಡು ಬಂದಿದೆ. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ.

ಕರ್ಫ್ಯೂನಿಂದ ಕೋರೋನ ಓಡಿಸಲು ಸಾಧ್ಯವಿಲ್ಲ
ಕರ್ಫ್ಯೂ, ಲಾಕ್‌ಡೌನ್ ಮಾಡುವುದರಿಂದ ಕೋರೋನ ಸೋಂಕು ಹರಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದರಿಂದ ಬಡ ಜನರಿಗೆ, ವರ್ತಕರಿಗೆ ಸಮಸ್ಯೆಯಾಗುತ್ತದೆಯೇ ವಿನಹ ಕೋರೋನ ನಿಯಂತ್ರಣ ಸಾಧ್ಯವಿಲ್ಲ. ಸರಕಾರ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು ಅದು ಬಿಟ್ಟು ಕರ್ಫ್ಯೂ ಮಾಡುವುದು ಸರಿಯಲ್ಲ.
ಅಶೋಕ್ ಕುಮಾರ್ ಬೊಳ್ಳಾಡಿ, ಅಧ್ಯಕ್ಷರು, ಒಳಮೊಗ್ರು ಕಾಂಗ್ರೆಸ್ ಗ್ರಾಮ ಸಮಿತಿ

ಸರಕಾರದ ಕ್ರಮ ಸರಿಯಾಗಿದೆ
ಕೋರೋನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರಕಾರ ಸರಿಯಾದ ಕ್ರಮವನ್ನು ಮಾಡುತ್ತಿದೆ. ಕರ್ಫ್ಯೂ, ಲಾಕ್‌ಡೌನ್ ಅನಿವಾರ್ಯ, ತುಳುವಿನಲ್ಲಿ ಒಂದು ಗಾದೆ ಇದೆ `ಬದ್‌ಕ್‌ದ್ ಒರಿಂಡ ಎಲ್ಲೆಲ ತಿನ್ವೆ’ ಎಂದು, ಕೋರೋನ ಒಂದು ಮಹಾಮಾರಿಯಾಗಿದೆ. ಇದು ಪ್ರಪಂಚಕ್ಕೆ ಬಂದ ಮಾರಿಯಾಗಿದೆ. ಸಾರ್ವಜನಿಕರು ಅಧಿಕಾರಿಗಳನ್ನು ದೂರಿ ಯಾವುದೇ ಪ್ರಯೋಜನವಿಲ್ಲ. ನಮ್ಮ ಜಾಗ್ರತೆ ನಾವು ಮಾಡಬೇಕು ಅಷ್ಟೇ.
ನಾರಾಯಣ ಪೂಜಾರಿ ಕುರಿಕ್ಕಾರ, ಬಿಜೆಪಿ ಕೆದಂಬಾಡಿ ಗ್ರಾಮ ಶಕ್ತಿ ಕೇಂದ್ರ ಪ್ರಮುಖ್

ಲಾಕ್‌ಡೌನ್, ಕರ್ಫ್ಯೂ ಪರಿಹಾರವಲ್ಲ
ಕೋರೋನ ನಿಯಂತ್ರಣಕ್ಕೆ ಕರ್ಫ್ಯೂ, ಲಾಕ್‌ಡೌನ್ ಯಾವ ಕಾಲಕ್ಕೂ ಪರಿಹಾರವಲ್ಲ. ಅದರ ಬದಲಾಗಿ ಸರಕಾರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸರಿಯಾದ ಕ್ರಮಗಳನ್ನು ಮಾಡಬೇಕಾಗಿದೆ. ಬೆಡ್ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಇತ್ಯಾದಿಗಳನ್ನು ಮೊದಲೇ ರೆಡಿ ಮಾಡಿಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕೋರೋನ ಒಂದು ವರ್ಷವಾದರೂ ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲದೇ ಇರುವುದು ತೊಂದರೆಯಾಗಿದೆ.
ಸಲಾಮ್ ಕುಂಬ್ರ, ಪ್ರ.ಕಾರ್ಯದರ್ಶಿ ಒಳಮೊಗ್ರು ಕಾಂಗ್ರೆಸ್ ಗ್ರಾಮ ಸಮಿತಿ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.