HomePage_Banner
HomePage_Banner
HomePage_Banner
HomePage_Banner

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ | ಸಾಮಾನ್ಯ 9 ಸ್ಥಾನಗಳಿಗೆ 12, ಹಿಂದುಳಿದ ವರ್ಗ “ಎ” ಮೀಸಲು 2 ಸ್ಥಾನಕ್ಕೆ 7 ಮಂದಿ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಿದ್ದಿಕ್ ನೀರಾಜೆ, ಶ್ರೀನಿವಾಸ ನಾಯಕ್, ಪುಷ್ಪರಾಜ್, ಆತ್ಮಭೂಷಣ್, ಭಾಸ್ಕರ ರೈ, ಇಬ್ರಾಹಿಂ ಅಡ್ಕಸ್ಥಳ, ವಿಲ್ಫ್ರೆಡ್ ಡಿ’ಸೋಜಾ ಸೇರಿದಂತೆ ದ.ಕ. ಜಿಲ್ಲೆಯಾದ್ಯಂತದಿಂದ 19 ಮಂದಿ ಕಣದಲ್ಲಿ.
  • ಎ. 27ರಂದು ಮಂಗಳೂರು ಲೇಡಿಹಿಲ್‌ನಲ್ಲಿರುವ ಪತ್ರಿಕಾ ಭವನದಲ್ಲಿ ಚುನಾವಣೆ.

ಪುತ್ತೂರು: ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ (ರಿ.) ಮಂಗಳೂರು ಇದರ ೫ ವರ್ಷ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಎ. ೨೭ರಂದು ಮಂಗಳೂರು ಲೇಡಿಹಿಲ್‌ನಲ್ಲಿರುವ ಪತ್ರಿಕಾ ಭವನದಲ್ಲಿ ಚುನಾವಣೆ ನಡೆಯಲಿದೆ.


ಆಡಳಿತ ಮಂಡಳಿಗೆ ಒಟ್ಟು ೧೫ ನಿರ್ದೇಶಕರ ಸ್ಥಾನಗಳಿದ್ದು, ಈ ಪೈಕಿ ೯ ಸಾಮಾನ್ಯ ಸ್ಥಾನಗಳಿಗೆ ಮತ್ತು ಹಿಂದುಳಿದ ವರ್ಗ “ಎ” ಮೀಸಲು ೨ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ೯ ನಿರ್ದೇಶಕ ಸ್ಥಾನಗಳಿಗೆ ೧೨ ಮಂದಿ ಮತ್ತು 2 ಹಿಂದುಳಿದ ವರ್ಗ “ಎ” ಮೀಸಲು 2 ಸ್ಥಾನಗಳಿಗೆ 7 ಮಂದಿ ಸ್ಪರ್ಧಾ ಕಣದಲ್ಲಿ ಇದ್ದಾರೆ. ಉಳಿದಂತೆ ಎಸ್.ಸಿ./ಎಸ್.ಟಿ.-೨ ಮೀಸಲು ಸ್ಥಾನಗಳಿಗೆ ೨ ಮಂದಿ ಮತ್ತು ಮಹಿಳಾ ಮೀಸಲು 2 ಸ್ಥಾನಗಳಿಗೆ 2 ಮಂದಿಯಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಈ ಸ್ಥಾನಗಳಿಗೆ ಸ್ಪರ್ಧೆ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಸಾಮಾನ್ಯ ೯ ಸ್ಥಾನಗಳಿಗೆ ೧೨ ನಾಮಪತ್ರ:
ಸಾಮಾನ್ಯ ೯ ಸ್ಥಾನಗಳಿಗೆ ಪುತ್ತೂರು ಈಶ್ವರಮಂಗಲದ ಇಂದಾಜೆ ನಿವಾಸಿ, ದಿ ನ್ಯೂಸ್-೨೪ ಮಂಗಳೂರು ವರದಿಗಾರ, ದ.ಕ. ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿರುವ ಶ್ರೀನಿವಾಸ ನಾಯಕ್, ಪುತ್ತೂರು ಅಟ್ಲಾರು ನಿವಾಸಿ, ಮಂಗಳೂರುನಲ್ಲಿ ಕನ್ನಡಪ್ರಭ ವರದಿಗಾರರಾಗಿರುವ ಆತ್ಮಭೂಷಣ್, ಪುತ್ತೂರು ಸುದ್ದಿ ಬಿಡುಗಡೆ ಮಂಗಳೂರು ವರದಿಗಾರ ಭಾಸ್ಕರ ರೈ, ಕಡಬ ತಾಲ್ಲೂಕಿನ ರಾಮಕುಂಜದ ನೀರಾಜೆ ನಿವಾಸಿ, ವಾರ್ತಾಭಾರತಿ ಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್ ಪುಷ್ಪರಾಜ್ ಬಿ.ಎನ್., ವಿಟ್ಲ ಸಮೀಪದ ಅಡ್ಕಸ್ಥಳ ನಿವಾಸಿ, ಮಂಗಳೂರು ವಾರ್ತಾಭಾರತಿ ವರದಿಗಾರ ಇಬ್ರಾಹಿಂ ಅಡ್ಕಸ್ಥಳ, ವಿಟ್ಲ ಸಮೀಪದ ಪೆರುವಾಯಿ ನಿವಾಸಿ, ಟಿವಿ-೯ ಕೆಮರಾಮೆನ್ ವಿಲ್ಫ್ರೆಡ್ ಡಿ’ಸೋಜಾ, ಮಂಗಳೂರು ಉದಯವಾಣಿ ವರದಿಗಾರ ಕೇಶವ ಕುಂದರ್, ವಿಜಯಕರ್ನಾಟಕ ವರದಿಗಾರ ರವಿಚಂದ್ರ ಬಿ., ಮಂಗಳೂರು ವಿಶ್ವವಾಣಿ ವರದಿಗಾರ ಜಿತೇಂದ್ರ ಭಟ್, ಮಂಗಳೂರು ಎಂ.ಪಿ., ಎಂ.ಎಲ್.ಎ. ಪತ್ರಿಕೆಯ ಅಶೋಕ್ ಶೆಟ್ಟಿ, ಮಂಗಳೂರು ಪಿಟಿಐ. ವರದಿಗಾರ ಎಸ್. ಜಯರಾಮ, ಪಬ್ಲಿಕ್ ಟಿ.ವಿ. ಮಂಗಳೂರು ವರದಿಗಾರ ಸುಖ್‌ಪಾಲ್ ಪೊಳಲಿ ಸೇರಿದಂತೆ ಒಟ್ಟು ೧೨ ಮಂದಿ ಸ್ಪರ್ಧಾ ಕಣದಲ್ಲಿ ಇದ್ದಾರೆ.

ಹಿಂದುಳಿದ ವರ್ಗ “ಎ” ಮೀಸಲು ೨ ಸ್ಥಾನಕ್ಕೆ ೭ ನಾಮಪತ್ರ:
ಹಿಂದುಳಿದ ವರ್ಗ ಪ್ರವರ್ಗ “ಎ” ಮೀಸಲು ೨ ಸ್ಥಾನಗಳಿಗೆ ಸುದ್ದಿ ಬಿಡುಗಡೆ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ, ಪ್ರಜಾವಾಣಿ ಪತ್ರಿಕೆಯ ಉಪ್ಪಿನಂಗಡಿ ಮತ್ತು ಕಡಬ ವಲಯದ ವರದಿಗಾರರಾಗಿರುವ ಸಿದ್ದಿಕ್ ನೀರಾಜೆ, ವಿಜಯಕರ್ನಾಟಕ ಮಂಗಳೂರು ವರದಿಗಾರರಾದ ವಿಜಯ, ಮಹಮ್ಮದ್ ಆರಿಫ್, ಟಿವಿ-೯ ಕೆಮರಾಮೆನ್ ರಾಜೇಶ್ ಕೆ. ಪೂಜಾರಿ, ವಿಜಯವಾಣಿ ಬೆಳ್ತಂಗಡಿ ವರದಿಗಾರ ಮನೋಹರ ಬಳಂಜ, ಮಂಗಳೂರು ವರದಿಗಾರ ಮಹಮ್ಮದ್ ಅನ್ಸಾರ್ ಇನೋಳಿ, ಪ್ರಜಾವಾಣಿ ಮೂಲ್ಕಿ ವರದಿಗಾರ ನರೇಂದ್ರ ಎಂ. ಪೂಜಾರಿ ಸ್ಪರ್ಧಾ ಕಣದಲ್ಲಿ ಇದ್ದಾರೆ.

ಪರಿಶಿಷ್ಠ ಜಾತಿ ಮೀಸಲು ೧ ಸ್ಥಾನಕ್ಕೆ ಹೊಸದಿಗಂತ ಪತ್ರಿಕೆಯ ಮಂಗಳೂರು ವರದಿಗಾರ ಸುರೇಶ್ ಡಿ, ಪರಿಶಿಷ್ಠ ಪಂಗಡ ಮೀಸಲು ೧ ಸ್ಥಾನಕ್ಕೆ ವಿಜಯವಾಣಿ ಪತ್ರಿಕೆಯ ಮಂಗಳೂರು ವರದಿಗಾರ ಹರೀಶ್ ಮೋಂಟುಕಾನ, ಮಹಿಳಾ ಮೀಸಲು ೨ ಸ್ಥಾನಗಳಿಗೆ ವಾರ್ತಾಭಾರತಿ ಪತ್ರಿಕೆಯ ಮಂಗಳೂರು ವರದಿಗಾರ್ತಿ ಸತ್ಯವತಿ, ನಮ್ಮ ಟಿ.ವಿ. ಮಂಗಳೂರು ವದರಿಗಾರ್ತಿ ಶಿಲ್ಪ ಕುಮಾರಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿರುತ್ತಾರೆ. ಈ ೪ ಸ್ಥಾನಗಳಿಗೆ ಇವರುಗಳು ಅವಿರೋಧ ಆಯ್ಕೆ ಆಗಿದ್ದು, ಇವರುಗಳಿಗೆ ಚುನಾವಣೆ ಇಲ್ಲ ಎಂದು ಹೇಳಲಾಗಿದೆ. ಸಹಕಾರಿ ಇಲಾಖೆಯ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.