HomePage_Banner
HomePage_Banner
HomePage_Banner
HomePage_Banner

ಹಳೆಯ ವಸ್ತುಗಳ ಸಂರಕ್ಷಿಸಿದ ನಝೀರ್ ಮಠ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಹಳೆ ಕಾಲದ ವಸ್ತುಗಳು ಆಧುನಿಕ ಕಾಲದಲ್ಲಿ ನಿರ್ಲಕ್ಷಿಸಲ್ಪಡುವ ಪ್ರಮೇಯಗಳೇ ಎಲ್ಲೆಡೆ ಕಾಣುತ್ತಿರುವಾಗ ಉಪ್ಪಿನಂಗಡಿಯ ವ್ಯಕ್ತಿಯೋರ್ವರು ಹಳೇಯ ವಸ್ತುಗಳನ್ನು ಜೋಪಾನದಿಂದ ಕಾಪಾಡಿಕೊಂಡು ಬಂದು ಇತಿಹಾಸದ ಪುಟಗಳನ್ನು ಮುಂದಿನ ಪೀಳಿಗೆಗೆ ವಸ್ತುಗಳ ರೂಪದಲ್ಲಿ ತಿಳಿಯಪಡಿಸಲು ಮುಂದಾಗಿದ್ದಾರೆ.

ರಾಜಕೀಯ ಮುಂದಾಳು ಉಪ್ಪಿನಂಗಡಿಯ ಮಠ ನಿವಾಸಿ ನಝೀರ್ ಮಠ ತನ್ನ ಹಿರಿಯರ ಕಾಲದಿಂದಲೂ ಬಳಕೆಯಲ್ಲಿದ್ದ ಮನೆಯಲ್ಲಿ ವಾಸ್ತವ್ಯವಿದ್ದು, ಮನೆಯ ಮೇಲಿನ ಮಹಡಿಯನ್ನು ಹಳೆಯ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲೆಂದೇ ಮೀಸಲಿರಿಸಿದ್ದಾರೆ. ಮಠ ಜಮೀನ್ದಾರ ಕುಟುಂಬದ ಹಿನ್ನೆಲೆಯುಳ್ಳ ಅವರ ಮನೆಗೆ ಭೇಟಿ ನೀಡಿದಾಗ ಮನೆಯೊಳಗೆ ಜೋಡಿಸಿಟ್ಟ ಹಳೆ ಕಾಲದ ಪರಿಕರಗಳು ಗಮನ ಸೆಳೆದವು.

ಹಿರಿಯರ ಕಾಲದಲ್ಲಿ ಬಳಕೆಯಾಗುತ್ತಿದ್ದ ಮಣ್ಣಿನ ಎಲ್ಲಾ ಬಗೆಯ ಪಾತ್ರೆ ಪಗಡಿಗಳು, ನೀರು ತುಂಬಿಸುವ ಹೂಜಿ, ನಿತ್ಯ ಉಪಯೋಗದ ಸಲಕರಣೆಗಳು, ದಂತದ ಕೆತ್ತನೆಗಳು, ಭತ್ತ ಅಳತೆ ಮಾಡುವ ಕಲಸೆ, ಅಕ್ಕಿ ಅಳತೆ ಮಾಡುವ ಸೇರು, ಆಭರಣ ಇಡುವ ಕಂಚಿನ ಪೆಟ್ಟಿಗೆ, ವಿಶಿಷ್ಟ ಕಲ್ಲುಗಳು, ಸಣ್ಣ ಲ್ಯಾಂಪ್‌ಗಳು, ಸೆಂಟ್‌ನ ಬಾಟಲಿಗಳು, ಅಲಂಕಾರಿಕ ಕೆತ್ತನೆಯುಳ್ಳ ಮರದ ಸ್ತಂಭಗಳು ಹೀಗೆ ಹಲವು ಹಿರಿಯರು ಉಪಯೋಗಿಸಿದ್ದ ಹಲವು ವಸ್ತುಗಳನ್ನು ಇವರು ಜೋಪಾನವಾಗಿ ಉಳಿಸಿಕೊಂಡು ಮನೆಯ ಮೇಲ್ಮಹಡಿಯಲ್ಲಿ ಜೋಡಿಸಿದ್ದಾರೆ. ಹಾಗೂ ಹಳೆಯ ಪುಸ್ತಕಗಳನ್ನೂ ಕೂಡಾ ಸಂರಕ್ಷಿಸಿಕೊಂಡು ಬಂದಿರುವ ಮೂಲಕ ಪುಸ್ತಕ ಪ್ರೀತಿಯನ್ನೂ ಮೆರೆದಿದ್ದಾರೆ.

ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮುಖ್ಯಸ್ಥ ತುಕರಾಮ ಪೂಜಾರಿ ಅವರು ಅಭಿಪ್ರಾಯಿಸಿದಂತೆ ಹಿಂದಿನ ಕಾಲದ ಪ್ರತಿಯೊಂದು ವಸ್ತುವೂ ಆಯಾ ಕಾಲದ ಇತಿಹಾಸವನ್ನು ಸಾಕ್ಷೀಕರಿಸುತ್ತದೆ ಎನ್ನುವಂತೆ ಅಂದಿನ ಜನ ಜೀವನದಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳು ಅಂದಿನ ಜೀವನ ಪದ್ದತಿಯ ಮೇಲೆ ಬೆಳಕು ಚೆಲ್ಲಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.