HomePage_Banner
HomePage_Banner
HomePage_Banner
HomePage_Banner

ಐತ್ತೂರು: ಮೇಯಲು ಬಿಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಡಬ: ಗುಡ್ಡದಲ್ಲಿ ಮೇಯುತ್ತಿದ್ದ ಆಡಿನ ಮೇಲೆ ಚಿರತೆ ದಾಳಿ ಮಾಡಿ ಪರಾರಿಯಾದ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಎ.25ರಂದು ಸಂಜೆ ನಡೆದಿದೆ.

ಐತ್ತೂರು ಗ್ರಾಮದ ಕೋಕಲ ರಾಘವ ಪೂಜಾರಿ ಎಂಬವರು ತನ್ನ ಮೂರು ಆಡುಗಳನ್ನು ತಮ್ಮ ಜಾಗದ ಪಕ್ಕದ ಗುಡ್ಡದಲ್ಲಿ ಮೇಯಲು ಬಿಟ್ಟಿದ್ದರು. ಮೇಯಲು ಬಿಟ್ಟಿದ್ದ ಆಡುಗಳನ್ನು ವಾಪಾಸು ಮನೆಗೆ ಕರೆ ತರಲು ರಾಘವ ಅವರ ಪುತ್ರ ಧನಂಜಯ ಅವರು ಸಂಜೆ ವೇಳೆಗೆ ತೆರಳಿದ್ದರು. ಈ ವೇಳೆ ದಿಢೀರನೇ ಪೊದೆಯಂಚಿನಿಂದ ಧುಮುಕಿ ಬಂದ ಚಿರತೆಯೊಂದು ದೊಡ್ಡ ಹೆಣ್ಣು ಆಡಿನ ಮೇಲೆ ದಾಳಿಮಾಡಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ಧನಂಜಯ ಅವರು ಬೊಬ್ಬೆ ಹೊಡೆದಿದ್ದು ಚಿರತೆ ಪರಾರಿಯಾಗಿದೆ ಎಂದು ವರದಿಯಾಗಿದೆ. ಅಡಿನ ಕುತ್ತಿಗೆ, ಕಾಲು, ಬೆನ್ನಿನ ಭಾಗಕ್ಕೆ ಗಾಯವಾಗಿದ್ದು ಚೇತರಿಸಿಕೊಂಡಿದೆ. ಆಡಿನ ಮೇಲೆ ದಾಳಿ ಮಾಡಿದ ಸ್ಥಳದ ಪಕ್ಕದಲ್ಲಿ ಕೆ.ಎಫ್.ಡಿ.ಸಿ ರಬ್ಬರ್ ನಿಗಮದ ರಬ್ಬರ್ ತೋಟವಿದ್ದು ಅಲ್ಲೇ ಚಿತರೆ ಅವಿತಿರಬಹುದೆಂದು ಸಂಶಯ ಪಡಲಾಗಿದೆ. ಆಡಿನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ತಿಳಿದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.